IND vs ENG: ಮತ್ತೆ 161 ರನ್ ಚಚ್ಚಿದ ಗಿಲ್; ಇಂಗ್ಲೆಂಡ್‌ಗೆ 607 ರನ್‌ಗಳ ಬೃಹತ್ ಗುರಿ
India's Mammoth 607-Run Target: ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 427 ರನ್ ಗಳಿಸಿ ಇಂಗ್ಲೆಂಡ್‌ಗೆ 607 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ನಿಗದಿಪಡಿಸಿದೆ. ತಂಡದ ಪರ ಶುಭ್‌ಮನ್ ಗಿಲ್ ಅವರು 161 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ರಿಷಭ್ ಪಂತ್ (65) ಮತ್ತು ರವೀಂದ್ರ ಜಡೇಜಾ (69) ಕೂಡ ಉತ್ತಮ ಪ್ರದರ್ಶನ ನೀಡಿದರು.

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಎರಡನೇ ಇನ್ನಿಂಗ್ಸ್ 427 ರನ್ಗಳಿಗೆ ಅಂತ್ಯಗೊಂಡಿದೆ. ಈ ಮೂಲಕ ಟೀಂ ಇಂಡಿಯಾ (Team India), ಇಂಗ್ಲೆಂಡ್ ಗೆಲುವಿಗೆ 607 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಟೀಂ ಇಂಡಿಯಾ ಪರ ಎರಡನೇ ಇನ್ನಿಂಗ್ಸ್ನಲ್ಲೂ ಮಿಂಚಿದ ನಾಯಕ ಶುಭ್‌ಮನ್ ಗಿಲ್ (Shubman Gill) ಭರ್ಜರಿ ಶತಕ ಸಿಡಿಸಿದಲ್ಲದೆ, 161 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ನಾಯಕ ಗಿಲ್ಗೆ ಉತ್ತಮ ಸಾಥ್ ನೀಡಿದ ರಿಷಭ್ ಪಂತ್ (Rishabh Pant) 65 ರನ್‌ಗಳ ಇನ್ನಿಂಗ್ಸ್ ಆಡಿದರೆ, ಇತ್ತ ರವೀಂದ್ರ ಜಡೇಜಾ ಕೂಡ 69 ರನ್‌ಗಳ ಕಾಣಿಕೆ ನೀಡಿದರು. ಈ ಮೂವರನ್ನು ಹೊರತುಪಡಿಸಿ ಕೆಎಲ್ ರಾಹುಲ್ ಕೂಡ 55 ರನ್‌ಗಳ ಇನ್ನಿಂಗ್ಸ್ ಆಡಿದರು. ಇತ್ತ ಇಂಗ್ಲೆಂಡ್ ಪರ ಎಲ್ಲಾ ಬೌಲರ್ಗಳು ದುಬಾರಿಯಾಗಿದ್ದರು. ವೇಗಿ ಟಂಗ್ ಹಾಗೂ ಸ್ಪಿನ್ನರ್ ಶೋಯೆಬ್ ಬಶೀರ್ ತಲಾ 2 ವಿಕೆಟ್ ಪಡೆದರೆ, ಬ್ರೈಡನ್ ಕಾರ್ಸೆ ಮತ್ತು ಜೋ ರೂಟ್ ತಲಾ ಒಂದು ವಿಕೆಟ್ ಪಡೆದರು.
ಪಂತ್ ಮತ್ತು ಗಿಲ್ ಶತಕದ ಜೊತೆಯಾಟ
ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್‌ಗೆ 64 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಇಲ್ಲಿಂದ ನಾಲ್ಕನೇ ದಿನದಾಟವನ್ನು ಮುಂದುವರೆಸಿತು. ಆದರೆ ಕರುಣ್ ನಾಯರ್ 26 ರನ್‌ಗಳಿಸಿ ಔಟಾಗುವ ಮೂಲಕ ಭಾರತ ದಿನದ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ರಾಹುಲ್, ಗಿಲ್ ಅವರೊಂದಿಗೆ ಇನ್ನಿಂಗ್ಸ್ ವೈಯಕ್ತಿಕವಾಗಿ ಅರ್ಧಶತಕ ದಾಖಲಿಸಿದರು. ಆದರೆ ಟಂಗ್, ರಾಹುಲ್ ಅವರನ್ನು ಔಟ್ ಮಾಡಿವ ಮೂಲಕ ಭಾರತಕ್ಕೆ ಮೂರನೇ ಹೊಡೆತ ನೀಡಿದರು. ಇದರ ನಂತರ ಬಂದ ಉಪನಾಯಕ ರಿಷಭ್ ಪಂತ್, ಗಿಲ್ ಅವರೊಂದಿಗೆ ಹೊಡಿಬಡಿ ಆಟವಾಡಲು ಪ್ರಾರಂಭಿಸಿದರು. ಪಂತ್ ಮತ್ತು ಗಿಲ್ ನಾಲ್ಕನೇ ವಿಕೆಟ್‌ಗೆ 110 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು, ಆದರೆ ಶೋಯೆಬ್ ಬಶೀರ್ ಪಂತ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು.
IND vs BAN: ದ್ವಿಶತಕದ ಬಳಿಕ ಶತಕ; ಗವಾಸ್ಕರ್ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ ಶುಭ್‌ಮನ್ ಗಿಲ್
161 ರನ್ ಬಾರಿಸಿದ ಗಿಲ್
ಪಂತ್ ಔಟಾದ ನಂತರವೂ ಗಿಲ್ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿ ರವೀಂದ್ರ ಜಡೇಜಾ ಅವರೊಂದಿಗೆ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ವೇಳೆ ಗಿಲ್ ತಮ್ಮ ಶತಕವನ್ನು ಪೂರೈಸಿದರು. ಅಲ್ಲದೆ ಜಡೇಜಾ ಅವರೊಂದಿಗೆ ಐದನೇ ವಿಕೆಟ್‌ಗೆ 175 ರನ್‌ಗಳ ಜೊತೆಯಾಟವನ್ನು ಸೇರಿಸಿದರು. ಆದರೆ ಬಶೀರ್ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ಗಿಲ್ ಅವರ ವಿಕೆಟ್ ಪತನವಾಯಿತು. ಅಂತಿಮವಾಗಿ ಗಿಲ್ 162 ಎಸೆತಗಳಲ್ಲಿ 13 ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳ ಸಹಿತ 161 ರನ್ ಬಾರಿಸಿದರು. ಆ ಬಳಿಕ ಬಂದ ನಿತೀಶ್ ರೆಡ್ಡಿ ಒಂದು ರನ್ ಗಳಿಸಿದ ನಂತರ ಔಟಾದರು. ಜಡೇಜಾ ಹೊರತುಪಡಿಸಿ, ವಾಷಿಂಗ್ಟನ್ ಸುಂದರ್ 12 ರನ್ ಗಳಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Sat, 5 July 25