Rishabh Pant: ಗುಂಡಿನ ವೇಗದಲ್ಲಿ ಚೆಂಡನ್ನು ಎರಡು ಬಾರಿ ಸಿಕ್ಸ್ಗೆ ಅಟ್ಟಿದ ರಿಷಭ್ ಪಂತ್: ರೋಚಕ ವಿಡಿಯೋ ನೋಡಿ
India vs England Second Test: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ರಿಷಭ್ ಪಂತ್ ತಮ್ಮ ಇನ್ನಿಂಗ್ಸ್‌ನ ನಾಲ್ಕನೇ ಎಸೆತದಲ್ಲೇ ಭರ್ಜರಿ ಸಿಕ್ಸರ್ ಬಾರಿಸಿದರು. ಇದು ಇಂಗ್ಲಿಷ್ ಬೌಲರ್ ಜೋಶ್ ಟಂಗ್ ಅವರ ಆತ್ಮವಿಶ್ವಾಸ ಕುಗ್ಗುವಂತೆ ಮಾಡಿತು. ಇದಾದ ನಂತರವೂ, ಜೋಶ್ ಟಂಗ್ ಬೌಲಿಂಗ್ನಲ್ಲಿ ಮತ್ತೊಂದು ಸಿಕ್ಸರ್ ಕೂಡ ಬಾರಿಸಿದರು.

ಬೆಂಗಳೂರು (ಜು. 05): ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡವು ಪ್ರಸ್ತುತ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದೆ. ಈ ಇನ್ನಿಂಗ್ಸ್‌ನಲ್ಲಿ, ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ (Rishabh Pant) ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪಂತ್ ಪ್ರಸ್ತುತ 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಕ್ರೀಸ್ನಲ್ಲಿದ್ದಷ್ಟು ಹೊತ್ತು ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದ ಪಂತ್, ಕೆಲವು ಹೊಡೆತಗಳನ್ನು ಹೊಡೆದರು.
ಜೋಶ್ ಟಂಗ್ ವಿರುದ್ಧ ರಿಷಭ್ ಪಂತ್ ಆರ್ಭಟ:
ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ರಿಷಭ್ ಪಂತ್ ತಮ್ಮ ಇನ್ನಿಂಗ್ಸ್‌ನ ನಾಲ್ಕನೇ ಎಸೆತದಲ್ಲೇ ಭರ್ಜರಿ ಸಿಕ್ಸರ್ ಬಾರಿಸಿದರು. ಇದು ಇಂಗ್ಲಿಷ್ ಬೌಲರ್ ಜೋಶ್ ಟಂಗ್ ಅವರ ಆತ್ಮವಿಶ್ವಾಸ ಕುಗ್ಗುವಂತೆ ಮಾಡಿತು. ಇದಾದ ನಂತರವೂ, ಜೋಶ್ ಟಂಗ್ ಬೌಲಿಂಗ್ನಲ್ಲಿ ಮತ್ತೊಂದು ಸಿಕ್ಸರ್ ಕೂಡ ಬಾರಿಸಿದರು. ಇದನ್ನು ನೋಡಿ ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಗಳು ಖುಷಿಪಟ್ಟರು. ರಿಷಭ್ ಪಂತ್ ಹೊಡೆದ ಈ ಎರಡೂ ಶಾಟ್‌ಗಳು ಗುಂಡಿನ ವೇಗದಲ್ಲಿ ಬೌಂಡರಿ ಗೆರೆ ದಾಟಿದವು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
Typical, #RishabhPant! 🔥
Just his 4th ball in the innings and Pant dances down the track to score a SIX! 💪🏻
Will his approach of counter-attack guide #TeamIndia to a big lead? 👀#ENGvIND 👉 2nd TEST, Day 4 | LIVE NOW on JioHotstar ➡ https://t.co/2wT1UwEcdi pic.twitter.com/paBL5tyaGT
— Star Sports (@StarSportsIndia) July 5, 2025
ರಿಷಭ್ ಪಂತ್ ಕೈಯಿಂದ ಬ್ಯಾಟ್ ಜಾರಿತು:
ಪಂತ್ ಬ್ಯಾಟಿಂಗ್ ಮಾಡುವಾಗ ಮತ್ತೊಂದು ತಮಾಷೆಯ ಘಟನೆ ನಡೆಯಿತು. ವಾಸ್ತವವಾಗಿ, ಇನ್ನಿಂಗ್ಸ್‌ನ 34 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಅವರು ದೊಡ್ಡ ಹೊಡೆತವನ್ನು ಹೊಡೆಯಲು ಮುಂದಾದರು, ಆದರೆ ಈ ಸಮಯದಲ್ಲಿ ಅವರ ಬ್ಯಾಟ್ ಅವರ ಕೈಯಿಂದ ಜಾರಿ ದೂರ ಬಿದ್ದಿತು. ಇದರ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬ್ಯಾಟಿಂಗ್ ಮಾಡುವಾಗ ಪಂತ್‌ಗೆ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತದೆ.
It’s all happening 😅
Big swing no ding from Rishabh Pant 😂 pic.twitter.com/bJ489vvEYb
— England Cricket (@englandcricket) July 5, 2025
ಲೀಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಪಂತ್ ಶತಕ:
ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ ದೊಡ್ಡ ರನ್ ಗಳಿಸಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ, ಅವರು 42 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 25 ರನ್ ಗಳಿಸಿದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ, ಬಿರುಸಿನ ಬ್ಯಾಟಿಂಗ್ ಮಾಡಿದರು. ಕೇವಲ 58 ಎಸೆತಗಳಲ್ಲಿ 8 ಫೋರ್ ಮತ್ತು 3 ಸಿಕ್ಸರ್ ಸಿಡಿಸಿ 65 ರನ್ ಚಚ್ಚಿದರು. ಇದಕ್ಕೂ ಮೊದಲು, ರಿಷಭ್ ಪಂತ್ ಲೀಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದರು. ಅಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 134 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 118 ರನ್ ಗಳಿಸಿದರು.
Sanju Samson: ಹರಾಜು ದಾಖಲೆ ಉಡೀಸ್: ಸಂಜು ಸ್ಯಾಮ್ಸನ್ ಮೇಲೆ ಹಣದ ಸುರಿಮಳೆ: ಅತ್ಯಂತ ದುಬಾರಿ ಆಟಗಾರ
ಪ್ರಸ್ತುತ, ಟೆಸ್ಟ್ ಪಂದ್ಯದ ನಾಲ್ಕನೇ ದಿನ ನಡೆಯುತ್ತಿದೆ. ಇಂಗ್ಲೆಂಡ್ ತಂಡವು ಮೊದಲ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 371 ರನ್‌ಗಳ ಗುರಿಯನ್ನು ಬಹಳ ಸುಲಭವಾಗಿ ಬೆನ್ನಟ್ಟಿತು. ಅಂತಹ ಪರಿಸ್ಥಿತಿಯಲ್ಲಿ, ಭಾರತ ತಂಡವು ಈ ಬಾರಿ ಎರಡನೇ ಇನ್ನಿಂಗ್ಸ್‌ನಲ್ಲಿಯೂ ದೊಡ್ಡ ಸ್ಕೋರ್ ಮಾಡಲು ಪ್ರಯತ್ನಿಸಬೇಕಿದೆ. ಇಂಗ್ಲೆಂಡ್‌ಗೆ 500 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಗುರಿಯನ್ನು ನೀಡುವುದು ಅವಶ್ಯಕ. ಎಡ್ಜ್‌ಬಾಸ್ಟನ್‌ನಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ನೋಡಿದರೆ, ಅದು 378 ರನ್ ಆಗಿದೆ. 2022 ರಲ್ಲಿ ಭಾರತದ ವಿರುದ್ಧವೇ ಇಂಗ್ಲೆಂಡ್ ಈ ರನ್ ಚೇಸ್ ಮಾಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ