AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 25 ಎಸೆತಗಳಲ್ಲಿ 9 ವಿಕೆಟ್‌..! ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ

India Women's Cricket Team Sets World Record: ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೋತರೂ, 25 ಎಸೆತಗಳಲ್ಲಿ 9 ವಿಕೆಟ್ ಪಡೆದು ವಿಶ್ವದಾಖಲೆ ಬರೆದಿದೆ. ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಸ್ಕೋರ್ ಗಳಿಸಿದರೂ, ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ದೀಪ್ತಿ ಶರ್ಮಾ 300 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಭಾರತ 2-1 ಮುನ್ನಡೆಯಲ್ಲಿದ್ದರೂ ಸರಣಿ ಇನ್ನೂ ಜೀವಂತವಾಗಿದೆ.

IND vs ENG: 25 ಎಸೆತಗಳಲ್ಲಿ 9 ವಿಕೆಟ್‌..! ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ
Ind W Vs Eng W
ಪೃಥ್ವಿಶಂಕರ
|

Updated on: Jul 05, 2025 | 5:22 PM

Share

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ (India Women’s Cricket Team) ಗೆಲ್ಲಲು ಸಾಧ್ಯವಾಗದಿದ್ದರೂ, ತನ್ನ ಖಾತೆಗೆ ವಿಶ್ವದಾಖಲೆಯೊಂದನ್ನು ಹಾಕಿಕೊಂಡಿದೆ. ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಅಥವಾ ಮಹಿಳಾ ಕ್ರಿಕೆಟ್‌ನಲ್ಲಿ ಇದುವರೆಗೆ ಯಾರೂ ಮಾಡಿರದ ದಾಖಲೆಯನ್ನು ಭಾರತ ವನಿತಾ ಪಡೆ ನಿರ್ಮಿಸಿದೆ. ವಾಸ್ತವವಾಗಿ ಉಭಯ ತಂಡಗಳ ನಡುವಿನ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡವು ಭರ್ಜರಿ ಆರಂಭವನ್ನು ನೀಡಿತು. ಆದರೆ ಕೊನೆಯ ಓವರ್‌ಗಳಲ್ಲಿ ಭಾರತ ತಂಡವು ಅದ್ಭುತ ಪುನರಾಗಮನವನ್ನು ಮಾಡಿ ಇಂಗ್ಲೆಂಡ್​ ತಂಡವನ್ನು 200 ರನ್​ಗಳ ಗಡಿ ದಾಟುವಂತೆ ನೋಡಿಕೊಂಡಿತು. ಇದೇ ವೇಳೆ ಹರ್ಮನ್ಪ್ರೀತ್ ಕೌರ್ (Harmanpreet Kaur) ಪಡೆ ವಿಶ್ವ ದಾಖಲೆಯನ್ನು ನಿರ್ಮಿಸಿತು.

ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ

ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಮತ್ತು ಡೇನಿಯಲ್ ವ್ಯಾಟ್-ಹಾಡ್ಜ್ ಮೊದಲ ವಿಕೆಟ್‌ಗೆ 15.2 ಓವರ್‌ಗಳಲ್ಲಿ 137 ರನ್‌ಗಳ ಅಮೂಲ್ಯ ಜೊತೆಯಾಟ ನಡೆಸಿದರು. ಈ ಪಾಲುದಾರಿಕೆಯ ಸಮಯದಲ್ಲಿ, ಸೋಫಿಯಾ ಡಂಕ್ಲಿ 53 ಎಸೆತಗಳಲ್ಲಿ 75 ರನ್ ಗಳಿಸಿದರೆ, ಡೇನಿಯಲ್ ವ್ಯಾಟ್-ಹಾಡ್ಜ್ 66 ರನ್‌ಗಳ ಕೊಡುಗೆ ನೀಡಿದರು. ಆದಾಗ್ಯೂ, ತಂಡದ ಮೊದಲ ವಿಕೆಟ್ ಪತನಗೊಂಡ ತಕ್ಷಣ, ತಂಡದ ಬ್ಯಾಟಿಂಗ್ ವಿಭಾಗವು ಸಂಪೂರ್ಣವಾಗಿ ಧ್ವಂಸಗೊಂಡಿತು. ಇತ್ತ ಮೊದಲ ವಿಕೆಟ್ ಪಡೆದ ಬಳಿಕ ಲಯ ಕಂಡುಕೊಂಡ ಭಾರತೀಯ ಮಹಿಳಾ ತಂಡವು ಕೇವಲ 25 ಎಸೆತಗಳಲ್ಲಿ 9 ವಿಕೆಟ್‌ಗಳನ್ನು ಉರುಳಿಸಿತು. ಈ ಮೂಲಕ ಅಂತರರಾಷ್ಟ್ರೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಮೊದಲ ಬಾರಿಗೆ ತಂಡವೊಂದು 25 ಎಸೆತಗಳಲ್ಲಿ 9 ವಿಕೆಟ್‌ಗಳನ್ನು ಪಡೆದ ದಾಖಲೆ ನಿರ್ಮಾಣವಾಯಿತು. ಇದಕ್ಕೂ ಮೊದಲು, ಯಾವುದೇ ತಂಡವು ಇಷ್ಟು ಕಡಿಮೆ ಎಸೆತಗಳಲ್ಲಿ 9 ವಿಕೆಟ್‌ಗಳನ್ನು ಪಡೆದಿರಲಿಲ್ಲ.

15.2 ಓವರ್‌ಗಳಲ್ಲಿ ಇಂಗ್ಲೆಂಡ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆ ನಂತರ 19.2 ಓವರ್‌ಗಳಲ್ಲಿ ತಂಡವು ತನ್ನ 9 ನೇ ವಿಕೆಟ್ ಕಳೆದುಕೊಂಡಿತು. ಇದು ಈಗ ವಿಶ್ವ ದಾಖಲೆಯಾಗಿದೆ. ಅಷ್ಟೇ ಅಲ್ಲ, ಭಾರತೀಯ ತಂಡದ ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ ಈ ಪಂದ್ಯದ ಮೂರನೇ ವಿಕೆಟ್ ಪಡೆದ ತಕ್ಷಣ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು.

IND vs ENG: ಮೂರು ಸ್ವರೂಪಗಳಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಬ್ಯಾಟರ್ ಸ್ಮೃತಿ

ಸರಣಿಯಲ್ಲಿ ಇಂಗ್ಲೆಂಡ್ ಜೀವಂತ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 166 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಭಾರತೀಯ ತಂಡದ ಪರ ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ತಲಾ 3 ವಿಕೆಟ್‌ಗಳನ್ನು ಪಡೆದರೆ, ಶ್ರೀ ಚರಣಿ 2 ವಿಕೆಟ್‌ಗಳನ್ನು ಪಡೆದರು. ಬ್ಯಾಟರ್​ಗಳ ಬಗ್ಗೆ ಹೇಳುವುದಾದರೆ, ಸ್ಮೃತಿ ಮಂಧಾನ 56 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಸ್ಮೃತಿ ಮಂಧಾನ ಹೊರತುಪಡಿಸಿ, ಶೆಫಾಲಿ ವರ್ಮಾ 47 ರನ್ ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 23 ರನ್‌ ಬಾರಿಸಿ ಔಟಾದರು. ಇಂಗ್ಲೆಂಡ್ ಪರ ಲಾರೆನ್ ಫೈಲರ್ 2 ವಿಕೆಟ್‌ಗಳನ್ನು ಪಡೆದರು. ಈ ಗೆಲುವಿನೊಂದಿಗೆ, ಇಂಗ್ಲೆಂಡ್ ತಂಡ ಇನ್ನೂ ಟಿ20 ಸರಣಿಯನ್ನು ಜೀವಂತವಾಗಿರಿಸಿದ್ದರೆ, ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹರಿದುಬಂದ ಪ್ರವಾಸಿಗರು: ಚಂದ್ರದ್ರೋಣ ಪರ್ವತ ರಸ್ತೆ ಟ್ರಾಫಿಕ್ ಜಾಮ್
ಹರಿದುಬಂದ ಪ್ರವಾಸಿಗರು: ಚಂದ್ರದ್ರೋಣ ಪರ್ವತ ರಸ್ತೆ ಟ್ರಾಫಿಕ್ ಜಾಮ್
ರೆಸಾರ್ಟ್​ ನಲ್ಲಿ ಎಂಜಾಯ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು
ರೆಸಾರ್ಟ್​ ನಲ್ಲಿ ಎಂಜಾಯ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು
ಸಾಕು ನಾಯಿಯನ್ನು ಅಮಾನವೀಯವಾಗಿ ಥಳಿಸಿದ ಮನೆಕೆಲಸದಾಕೆ
ಸಾಕು ನಾಯಿಯನ್ನು ಅಮಾನವೀಯವಾಗಿ ಥಳಿಸಿದ ಮನೆಕೆಲಸದಾಕೆ
ಉದ್ಯಮಿಗೆ ಹೃದಯಾಘಾತ:ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಉದ್ಯಮಿಗೆ ಹೃದಯಾಘಾತ:ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
‘ಕೆಡಿ’ ಸಿನಿಮಾದಲ್ಲಿ ಸುದೀಪ್ ನಟಿಸ್ತಾರಾ? ಪ್ರೇಮ್ ಕೊಟ್ಟ ಉತ್ತರ ಏನು?
‘ಕೆಡಿ’ ಸಿನಿಮಾದಲ್ಲಿ ಸುದೀಪ್ ನಟಿಸ್ತಾರಾ? ಪ್ರೇಮ್ ಕೊಟ್ಟ ಉತ್ತರ ಏನು?
ವಿದ್ಯಾರ್ಥಿಯನ್ನು ಎಳೆದು ಕಪಾಳಮೋಕ್ಷ ಮಾಡಿದ ಐಎಎಸ್ ಅಧಿಕಾರಿ
ವಿದ್ಯಾರ್ಥಿಯನ್ನು ಎಳೆದು ಕಪಾಳಮೋಕ್ಷ ಮಾಡಿದ ಐಎಎಸ್ ಅಧಿಕಾರಿ
ಬಾಲಕನ ಕುತ್ತಿಗೆಗೆ ಕಚ್ಚಿದ ಬೀದಿ ನಾಯಿ, ಆತನ ಸ್ಥಿತಿ ಯಾರಿಗೂ ಬೇಡ
ಬಾಲಕನ ಕುತ್ತಿಗೆಗೆ ಕಚ್ಚಿದ ಬೀದಿ ನಾಯಿ, ಆತನ ಸ್ಥಿತಿ ಯಾರಿಗೂ ಬೇಡ
VIDEO: ಉಫ್... ಹೀಗೂ ಕ್ಯಾಚ್ ಹಿಡೀತಾರಾ... ಅದ್ಭುತ ಅತ್ಯದ್ಭುತ
VIDEO: ಉಫ್... ಹೀಗೂ ಕ್ಯಾಚ್ ಹಿಡೀತಾರಾ... ಅದ್ಭುತ ಅತ್ಯದ್ಭುತ
ಓಪನ್ ಆಗಿ ಹೇಳ್ತೀನಿ, ಏನು ಬೇಕಾದ್ರೂ ಟ್ರೋಲ್ ಮಾಡಿಕೊಳ್ಳಿ: ಜೋಗಿ ಪ್ರೇಮ್
ಓಪನ್ ಆಗಿ ಹೇಳ್ತೀನಿ, ಏನು ಬೇಕಾದ್ರೂ ಟ್ರೋಲ್ ಮಾಡಿಕೊಳ್ಳಿ: ಜೋಗಿ ಪ್ರೇಮ್
ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್​ ರೈಲಿನಲ್ಲಿ ಭಾರಿ ಅಗ್ನಿ ಅವಘಡ
ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್​ ರೈಲಿನಲ್ಲಿ ಭಾರಿ ಅಗ್ನಿ ಅವಘಡ