ಗೂಗಲ್ ಡಾಕ್ಟರ್ಗಳನ್ನು ಯಾವತ್ತೂ ನೆಚ್ಚಿಕೊಳ್ಳಲಿಲ್ಲ, ನನ್ನ ವೈದ್ಯರು ಹೇಳಿದ್ದನ್ನು ಮಾತ್ರ ಕೇಳುವೆ: ಭಾವನಾ
ಹಲವಾರು ಜನ ಮಾಡುವಂತೆ ತಾನ್ಯಾವತ್ತೂ ಗೂಗಲ್ ಡಾಕ್ಟರ್ ಗಳನ್ನು ನೆಚ್ಚಿಕೊಳ್ಳಲಿಲ್ಲ, ಕನ್ಸಲ್ಟ್ ಮಾಡಿದ ವೈದ್ಯರು ಹೇಳಿದ್ದನ್ನು ಮಾತ್ರ ಕೇಳಿದೆ ಎನ್ನುವ ಭಾವನಾ ತಾನು ಒಂದು ಶಿಸ್ತುಬದ್ಧ ಬದುಕು ನಡೆಸುವುದಾಗಿ ಹೇಳುತ್ತಾರೆ. ಆಹಾರ ಸೇವನೆಯಲ್ಲಿ ಅವರು ಬಹಳ ಕಟ್ಟುನಿಟ್ಟು ಮತ್ತು ಹೊರಗಡೆ ತಿನ್ನುವ ಅಭ್ಯಾಸ ಬಹಳ ಕಡಿಮೆ, ಫಾರ್ಮಾ ಉದ್ಯಮ ಈಗ ಅಪಾರವಾಗಿ ಬೆಳೆದಿರುವುದರಿಂದ ಎಲ್ಲದಕ್ಕೂ ಔಷಧಿಯಿದೆ ಎನ್ನುತ್ತಾರೆ.
ಬೆಂಗಳೂರು, ಜುಲೈ 5: ಚಿತ್ರನಟಿ, ನೃತ್ಯಗಾತಿ ಭಾವನಾ ರಾಮಣ್ಣ ಒಂಟಿ ಮಹಿಳೆಯಾಗಿ ಅವಳಿ ಮಕ್ಕಳಿಗೆ ತಾಯಿಯಾಗುತ್ತಿರುವ ವಿಷಯ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ನಮ್ಮ ವರದಿಗಾರನೊಂದಿಗೆ ತಮ್ಮ ಗರ್ಭಾವಸ್ಥೆ ಮತ್ತು ಅದು ನೀಡುತ್ತಿರುವ ಸಂತಸದ ಬಗ್ಗೆ ಮುಕ್ತವಾಗಿ ಮಾತಾಡಿರುವ 40-ವರ್ಷ ವಯಸ್ಸಿನ ಭಾವನಾಗೆ ಐವಿಎಫ್ (In Vitro Fertilization) ಮೂಲಕ ಅಮ್ಮನಾಗುವ ಯೋಚನೆ ಬಂದಾಗ ಹಲವಾರು ಜನ ಬೇರೆ ಬೇರೆ ಸಲಹೆಗಳನ್ನು ನೀಡಿದ್ದಾರೆ. ಔಷಧೋಪಚಾರ, ಹಾರ್ಮೋನು ಇಂಜೆಕ್ಷನ್, ನ್ಯ್ಯೂಟ್ರಿಷನಲ್ ಸಪ್ಲಿಮೆಂಟ್ಸ್, ಸ್ಥೂಲದೇಹಿಯಾಗುವ ಸಾಧ್ಯತೆ ಮೊದಲಾದವುಗಳ ಬಗ್ಗೆ ನೀಡಿದ ಸಲಹೆ ಕೇಳಿ ಅವರು ತಮ್ಮ ನಿರ್ಧಾರವನ್ನು ಮುಂದೂಡಿದ್ದರಂತೆ. ಅದರೆ ದಿನಗಳೆದಂತೆ ಅವರಲ್ಲಿ ಅಮ್ಮನಾಗುವ ಬಯಕೆ ಹೆಚ್ಚುತ್ತಾ ಹೋಗಿದೆ ಮತ್ತು ಅದು ತನ್ನ ಬದುಕಿನ ಅತ್ಯಂತ ಮಹತ್ವದ ಆಯಾಮ ಅನಿಸಿದೆ.
ಇದನ್ನೂ ಓದಿ: ‘ಹುಲಿ ಬಳಿ ಮದುವೆ ಆಗಿದೆಯಾ ಎಂದು ಕೇಳಲ್ಲ’; ವಿವಾಹ ಆಗದೇ ಮಗು ಪಡೆಯುತ್ತಿರೋ ಬಗ್ಗೆ ಭಾವನಾ ಮಾತು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

