ತುಮಕೂರು ಜಿಲ್ಲೆಯ ಯಾವುದೇ ತಾಲೂಕಿನ ಬಗ್ಗೆ ತಾರತಮ್ಯವಿಲ್ಲ, ಎಲ್ಲ ಭಾಗಗಳಿಗೂ ನೀರು ಕೊಡುತ್ತೇವೆ: ಶಿವಕುಮಾರ್
ಡಿಕೆ ಶಿವಕುಮಾರ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಕುರಿತಂತೆ ಪ್ರಶ್ನೆ ಕೇಳಿದಾಗ ಅದನ್ನು ಅವಾಯ್ಡ್ ಮಾಡುವ ಪ್ರಯತ್ನ ಮಾಡುತ್ತಾರೆ. ಕುಮಾರಸ್ವಾಮಿ ನಿನ್ನೆ ಮಂಡ್ಯದಲ್ಲಿ ನಡೆಸಿದ ದಿಶಾ ಮೀಟಿಂಗ್ನಲ್ಲಿ ಕಾಂಗ್ರೆಸ್ ಶಾಸಕರು ಭಾಗಿಯಾಗಿಲ್ಲ ಅಂತ ಹೇಳಿದ್ದಾರೆ ಅಂದಾಗ ಶಿವಕುಮಾರ್, ಒಂದೆರಡು ಕ್ಷಣ ಯೋಚಿಸಿ ಆಮೇಲೆ ಮಾತಾಡೋಣ ಅಂತ ಅಲ್ಲಿಂದ ಹೊರಡುತ್ತಾರೆ.
ಬೆಂಗಳೂರು, ಜುಲೈ 5: ಶುಕ್ರವಾರ ನಡೆದ ಸಭೆಯಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವಿಜ್ಞಾನಿಗಳ ಜೊತೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಸ್ಥಳ ಭೇಟಿ ನೀಡುವಂತೆ ಹೇಳಿದ್ದಾರೆ, ಆ ಕೆಲಸ ಮಾಡೋದಾಗಿ ನೀರಾವರಿ ಸಚಿವ ಡಿಕೆ ಶಿವಕುಮಾರ್ ಹೇಳಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲಿಂಕ್ ಕೆನಾಲ್ ಯೋಜನೆಯನ್ನು ತಾನೇ ಶುರುಮಾಡಿದ್ದು, ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಯೋಜನೆಯನ್ನು ನಿಲ್ಲಿಸಿತ್ತು, ಈಗ ಕಾಮಗಾರಿಯನ್ನು ಪುನರಾರಂಭಿಸಿದ್ದೇವೆ ಎಂದು ಹೇಳಿದ ಶಿವಕುಮಾರ್, ತುಮಕೂರು ಜಿಲ್ಲೆಯ ಯಾವುದೇ ತಾಲೂಕಿನ ಬಗ್ಗೆ ತನಗೆ ತಾರತಮ್ಯವಿಲ್ಲ, ಎಲ್ಲ ಭಾಗಗಳಿಗೂ ಸಾಧ್ಯವಿರುವಷ್ಟು ನೀರನ್ನು ಕೊಡುತ್ತೇವೆ ಎಂದರು.
ಇದನ್ನೂ ಓದಿ: ಸಂಬಂಧದಲ್ಲಿ ಶಿವಕುಮಾರ್ ಷಡ್ಡಕರಾಗಿರುವ ರಂಗನಾಥ್ಗೆ ನೀರು ಪಡೆಯಲು ಕಷ್ಟವಾಗಬಾರದು: ಸುರೇಶ್ ಗೌಡ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
