ಸಂಬಂಧದಲ್ಲಿ ಶಿವಕುಮಾರ್ ಷಡ್ಡಕರಾಗಿರುವ ರಂಗನಾಥ್ಗೆ ನೀರು ಪಡೆಯಲು ಕಷ್ಟವಾಗಬಾರದು: ಸುರೇಶ್ ಗೌಡ
ರಂಗನಾಥ್ ಅವರಿಗೆ ಎತ್ತಿನಹೊಳೆ ಯೋಜನೆಯಿಂದಲೂ ನೀರು ಪಡೆದುಕೊಳ್ಳುವ ಅವಕಾಶವಿದೆ, ಕುಣಿಗಲ್ ಶಾಸಕ ತಮ್ಮ ಅಭಿಪ್ರಾಯ ಹೇಳಲು ಮುಕ್ತರು, ಆದರೆ ಪ್ರಾಯಶಃ ಇನ್ನಾರು ತಿಂಗಳಲ್ಲಿ ಮುಖ್ಯಮಂತ್ರಿಯಾಗಲಿರುವ ಪ್ರಭಾವಿ ರಾಜಕಾರಣಿಯ ಸಂಬಂಧಿಯಾಗಿ ಆತ್ಮಹತ್ಯೆಯಂಥ ಮಾತಾಡಬಾರದು, ನೀರನ್ನು ಪಡೆಯಲು ಒಂದಲ್ಲ ಹತ್ತಾರು ಮಾರ್ಗಗಗಳಿವೆ ಎಂದ ಸುರೇಶ್ ಗೌಡ ಹೇಳಿದರು.
ಬೆಂಗಳೂರು, ಜುಲೈ 4: ನೀರು ಹರಿಯುವ ಮೂಲ (course of water) ವಿನ್ಯಾಸವನ್ನು ಬದಲಾಯಿಸಬಾರದು, ಅದನ್ನು ನೈಸರ್ಗಿಕವಾಗಿ ಹರಿಯಲು ಬಿಡಬೇಕು, ನಮ್ಮ ಭಾಗದ ರೈತರು ನೀರು ಹರಿಯುವಿಕೆ ವಿರುದ್ಧ ಚೆಲ್ಲಾಟವಡೋದನ್ನು ಸಹಿಸಲಾರರು ಎಂದು ಬಿಜೆಪಿ ಶಾಸಕ ಬಿ ಸುರೇಶ್ ಗೌಡ ಹೇಳಿದರು. ಕುಣಿಗಲ್ಗೆ ಹೇಮಾವತಿ ನೀರು ಸಿಕ್ಕಿಲ್ಲಾಂದ್ರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿರುವ ಅಲ್ಲಿನ ಶಾಸಕ ಡಾ ರಂಗನಾಥ್ ಅವರಿಗೆ ಅಂಥ ಪ್ರಮೇಯವೇನೂ ಇಲ್ಲ, ನೀರಾವರಿ ಸಚಿವ ಡಿಕೆ ಶಿವಕುಮಾರ್ ಅವರ ಷಡ್ಡಕರಾಗಿರುವುದರಿಂದ ಶಾಸಕನಿಗೆ ನೀರು ಪಡೆದುಕೊಳ್ಳುವುದು ಕಷ್ಟವೇನೂ ಆಗಲಾರದು, ಕಾವೇರಿ ಜಲಾನಯ ಪ್ರದೇಶದಿಂದ ಅವರು ತಮ್ಮ ಕ್ಷೇತ್ರಕ್ಕೆ ನೀರನ್ನು ಪಡೆದುಕೊಳ್ಳಬಹುದು ಎಂದ ಸುರೇಶ್ ಹೇಳಿದರು.
ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಶಾಸಕ ಸುರೇಶ್ ಗೌಡ ಹೇಳಿದ್ದೇನು? ಇಲ್ಲಿದೆ ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ

ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್

ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್ವೈ ಗೊತ್ತಿಲ್ಲದಿರುತ್ತದೆಯೇ?

ಕೋರ್ಟ್ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
