ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿವಾದದ ಬಗ್ಗೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಸೋಮಣ್ಣ
ಡಿಕೆ ಶಿವಕುಮಾರ್ ಸ್ಥಳ ಪರಿಶೀಲನೆಗೆ ಅಧಿಕಾರಿಗಳನ್ನು ಕರೆದೊಯ್ಯಲಿ, ಅದರೆ ಅವರ ಜೊತೆ ಹೋಗುವ ತಾಂತ್ರಿಕ ಅಧಿಕಾರಿಗಳು ಸರ್ಕಾರದ ಭಾಗವಾಗಿರುವುದರಿಂದ ಅವರು ಸರ್ಕಾರದ ನಿರ್ಣಯಗಳಿಗೆ ಪರವಾದ ವರದಿಯನ್ನು ನೀಡುತ್ತಾರೆ, ಹಾಗಾಗಿ ಡಿಸಿಎಂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಧಿಕಾರಿಗಳನ್ನು ಕರೆದೊಯ್ದರೆ ವಸ್ತುಸ್ಥಿತಿಯ ಬಗ್ಗೆ ನೈಜ್ಯ ಮತ್ತು ಸಮಗ್ರ ಮಾಹಿತಿ ಸಿಗುತ್ತದೆ ಎಂದು ಸೋಮಣ್ಣ ಹೇಳಿದರು.
ತುಮಕೂರು, ಜುಲೈ 5: ರಾಜ್ಯದಲ್ಲಿ ಬೆಂಗಳೂರು ನಂತರ ಅತಿವೇಗವಾಗಿ ಬೆಳೆಯುತ್ತಿರುವ ನಗರವೆಂದರೆ ತುಮಕೂರು, ಇಲ್ಲಿಯ ಜನರ ಕುಡಿಯುವ ನೀರಿನ ಸಮಸ್ಯೆ ಮತ್ತು ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿವಾದದ ಬಗ್ಗೆ ನಿನ್ನೆ ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಸವಿಸ್ತಾರವಾಗಿ ಚರ್ಚಿಸಲಾಗಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ, ಜಿ ಪರಮೇಶ್ವರ್ ಸೇರಿದಂತೆ ಈ ಭಾಗದ ಎಲ್ಲ ಶಾಸಕರು ಹಾಜರಿದ್ದ ಸಭೆಯಲ್ಲಿ ಶಿವಕುಮಾರ್ ತಮ್ಮ ಪ್ರಸ್ತಾಪಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೇಂದ್ರ ಸಚಿವ ಹೇಳಿದರು
ಇದನ್ನೂ ಓದಿ: ಕೇಂದ್ರ ಸಚಿವ ಸೋಮಣ್ಣ ಹಾಸನದ ಕೋಡಿಮಠಕ್ಕೆ ಬಂದಾಗ ಪಾದಮುಟ್ಟಿ ನಮಸ್ಕರಿಸಿದ ಜಿಲ್ಲಾಧಿಕಾರಿ ಲತಾ ಕುಮಾರಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ