AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್

‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್

ರಾಜೇಶ್ ದುಗ್ಗುಮನೆ
|

Updated on: Jul 05, 2025 | 1:01 PM

Share

ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಮಾಡಿ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದ ಬಗ್ಗೆ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಇದು ಮ್ಯಾಕ್ಸ್ 2 ಸಿನಿಮಾ ಅಲ್ಲ ಎಂದು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ (Max Movie) ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿ ಇತ್ತು. ‘ಕೆ 47’ ಚಿತ್ರ ಮ್ಯಾಕ್ಸ್ ಸೀಕ್ವೆಲ್ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ‘ಇದು ಮ್ಯಾಕ್ಸ್ 2 ಅಲ್ಲ. ಅದನ್ನು ಮಾಡೋಕೆ ಕುಳಿತಿದ್ದು ಹೌದು. ಆದರೆ ಕಥೆ ಶೇಪ್ ಬಂದಿಲ್ಲ. ನಾವೇ ಫೋರ್ಸ್ ಮಾಡುತ್ತಾ ಇದ್ದಂತೆ ಕಂಡ್ತು. ಹೀಗಾಗಿ, ಸದ್ಯಕ್ಕೆ ಅದನ್ನು ಹೋಲ್ಡ್ ಮಾಡಿದ್ದೇವೆ’ ಎಂದಿದ್ದಾರೆ ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.