ಪಹಲ್ಗಾಮ್ ದಾಳಿಯನ್ನು ಭಾರತ ಶಾಂತಿ ಕದಡಲು ಬಳಸಿಕೊಂಡಿದೆ; ಪಾಕ್ ಪ್ರಧಾನಿ ಟೀಕೆ
ಭಾರತ ನಡೆಸಿದ್ದ ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಭಾರತವು ಪಾಕಿಸ್ತಾನದ ವಿರುದ್ಧ ಅಪ್ರಚೋದಿತ ದ್ವೇಷದ ಮೂಲಕ ಪ್ರಾದೇಶಿಕ ಶಾಂತಿಯನ್ನು ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪಹಲ್ಗಾಮ್ ಬಳಿಯ ಜಮ್ಮು ಮತ್ತು ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ದಾಳಿ ದುಃಖದ ಸಂಗತಿ ಎಂದು ಅವರು ಹೇಳಿದ್ದಾರೆ. ಈ ದಾಳಿ ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರವಾದ ದಾಳಿಗಳಲ್ಲಿ ಒಂದಾಗಿದೆ. ಈ ದಾಳಿಯಲ್ಲಿ 25 ಭಾರತೀಯ ಪ್ರವಾಸಿಗರು ಮತ್ತು ಒಬ್ಬ ನಿವಾಸಿ ಸಾವನ್ನಪ್ಪಿದ್ದರು.

ನವದೆಹಲಿ, ಜುಲೈ 5: ಭಾರತ ಮತ್ತು ಪಾಕಿಸ್ತಾನದ (India-Pakistan Conflict) ನಡುವೆ ಕದಮವಿರಾಮ ಒಪ್ಪಂದ ನಡೆಸಿದ್ದರೂ ಪಾಕಿಸ್ತಾನ ಸಮಯ ಸಿಕ್ಕಾಗಲೆಲ್ಲ ವಿದೇಶಗಳ ಬಳಿಕ ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿಲ್ಲ. ಇದೀಗ ಅಜೆರ್ಬೈಜಾನ್‌ನಲ್ಲಿ ನಡೆದ ಆರ್ಥಿಕ ಸಹಕಾರ ಸಂಸ್ಥೆ (ಇಸಿಒ) ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಭಾರತವು ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪ್ರಾದೇಶಿಕ ಶಾಂತಿಯನ್ನು ಹಾಳು ಮಾಡಲು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನದ ಮೇಲಿನ ಭಾರತದ ದಾಳಿಯನ್ನು ಅವರು “ಅಪ್ರಚೋದಿತ ಹಗೆತನ” ಎಂದು ಟೀಕಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯನ್ನು ಪಾಕ್ ಪ್ರದಾನಿ ಶೆಹಬಾಜ್ ಷರೀಫ್ ಉಲ್ಲೇಖಿಸಿದರು. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಮಾರಕವಾದ ದಾಳಿಯಾಗಿತ್ತು ಎಂದಿದ್ದಾರೆ. “ಗಾಜಾ, ಕಾಶ್ಮೀರ ಅಥವಾ ಇರಾನ್‌ನಲ್ಲಿ ಅಮಾಯಕ ಜನರ ವಿರುದ್ಧ ಅನಾಗರಿಕ ಕೃತ್ಯಗಳನ್ನು ಎಸಗುವವರ ವಿರುದ್ಧ ಪಾಕಿಸ್ತಾನ ದೃಢವಾಗಿ ನಿಲ್ಲುತ್ತದೆ” ಎಂದು ಶೆಹಬಾಜ್ ಷರೀಫ್ ತಮ್ಮ ಭಾಷಣದಲ್ಲಿ ಹೇಳಿದರು.
ಇದನ್ನೂ ಓದಿ: ಉಗ್ರರ ದಾಳಿ ನಡೆದ 1 ತಿಂಗಳ ನಂತರ ಪಹಲ್ಗಾಮ್‌ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್
ಪಹಲ್ಗಾಮ್ ದಾಳಿ 25 ಭಾರತೀಯ ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಯನ್ನು ಬಲಿ ತೆಗೆದುಕೊಂಡಿತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತು.
Met with H.E. Dr. Masoud Pezeshkian, President of Iran today on the sidelines of 17th ECO Summit in Khankendi.
We reviewed bilateral cooperation and also discussed the regional situation in the wake of the recent Israel’s illegitimate aggression.
Appreciated President… pic.twitter.com/B5JkuKYEKJ
— Shehbaz Sharif (@CMShehbaz) July 4, 2025
ಇದಕ್ಕೆ ಪ್ರತೀಕಾರವಾಗಿ, ಭಾರತವು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿತು. ಗಡಿಯುದ್ದಕ್ಕೂ 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು. ಪಾಕಿಸ್ತಾನದ ಡ್ರೋನ್ ದಾಳಿಗಳು ಮತ್ತು ಭಾರತೀಯ ಪ್ರತಿದಾಳಿಗಳು ಸೇರಿದಂತೆ ಗಡಿಯಾಚೆಗಿನ ಹಗೆತನಗಳು ಉಲ್ಬಣಗೊಂಡವು. ಆದರೆ ಪಾಕಿಸ್ತಾನವು ಭಾರತ ತನ್ನ ಮಿಲಿಟರಿ ನೆಲೆಗಳಿಗೆ ಭಾರೀ ಹಾನಿಯನ್ನುಂಟುಮಾಡಿದ ನಂತರ ಮೇ 10 (ಶನಿವಾರ)ರಂದು ಕದನ ವಿರಾಮಕ್ಕೆ ಕರೆ ನೀಡಿದ ನಂತರ ಈ ಸಂಘರ್ಷ ಕೊನೆಗೊಂಡಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ