Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗದ ಮೇಲಿನ ನಿಷೇಧವನ್ನು ವಾಪಸ್​ ತೆಗೆದುಕೊಳ್ಳಲು ಮುಂದಾದ ಅಮೆರಿಕದ ಪುಟ್ಟ ರಾಜ್ಯ ಅಲಬಾಮಾ!

Yoga in Alabama | ಆದರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಅಲಬಾಮಾ ರಾಜ್ಯ ಸರ್ಕಾರ ಯೋಗಾಭ್ಯಾಸ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ಮುಂದಾಗಿರುವುದರ ಮಧ್ಯೆ ಯೋಗಾಭ್ಯಾಸದ ವೇಳೆ ಪ್ರಯೋಗಿಸುವ ಸಂಸ್ಕೃತ ಪದಗಳ ಬಳಕೆಯನ್ನು ನಿಷೇಧಿಸಿದೆ. ಅಂತಹ ಪದಗಳೆಲ್ಲ ಆಂಗ್ಲಭಾಷೆಯಲ್ಲಿಯೇ ಇರಬೇಕು ಎಂದು ಪಟ್ಟುಹಿಡಿದಿದೆ! ಕೊನೆಗೆ ನಮಸ್ತೆ ಎಂಬ ಸದಾಶಯದ ಪದವನ್ನೂ ಬಳಸುವಂತಿಲ್ಲ ಎಂದು ಸಾರಿದೆ.

ಯೋಗದ ಮೇಲಿನ ನಿಷೇಧವನ್ನು ವಾಪಸ್​ ತೆಗೆದುಕೊಳ್ಳಲು ಮುಂದಾದ ಅಮೆರಿಕದ ಪುಟ್ಟ ರಾಜ್ಯ ಅಲಬಾಮಾ!
ಯೋಗದ ಮೇಲಿನ ನಿಷೇಧವನ್ನು ವಾಪಸ್​ ತೆಗೆದುಕೊಳ್ಳಲು ಮುಂದಾದ ಅಮೆರಿಕದ ಪಟ್ಟ ರಾಜ್ಯ ಅಲಬಾಮಾ!
Follow us
ಸಾಧು ಶ್ರೀನಾಥ್​
|

Updated on:Mar 13, 2021 | 2:09 PM

ಅಲಬಾಮಾ ಎಂಬುದು ಆಗ್ನೇಯ ಅಮೆರಿಕದಲ್ಲಿರುವ ಒಂದು ರಾಜ್ಯ. ಅಲ್ಲಿ ಸುಮಾರು ಮೂರು ದಶಕಗಳಿಂದ ಭಾರತೀಯ ಮೂಲದ ಯೋಗಾಭ್ಯಾಸವನ್ನು ನಿಷೇಧಿಸಲಾಗಿತ್ತು. ಜೊತೆಗೆ ನಮಸ್ತೆ ಎಂಬ ಶುಭಾಶಯದ, ಸದಾಶಯದ ಪದವನ್ನೂ ಬಳಸಬಾರದು ಎಂದು ಅಲ್ಲಿನ ರಾಜ್ಯ ಸರ್ಕಾರ ಕಟ್ಟಪ್ಪಣೆ ವಿಧಿಸಿತ್ತು. ಕ್ರೈಸ್ತ ಮೂಲವಾದಿಗಳ ಒತ್ತಡ, ಒತ್ತಾಯದ ಕುಮ್ಮಕ್ಕಿನಿಂದ ಅಲಬಾಮಾ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿತ್ತು. ಯೋಗ ಅಷ್ಟೇ ಅಲ್ಲ; ಮಂತ್ರ ಪಠಣ, ಧ್ಯಾನ ಮತ್ತು ಸಮ್ಮೋಹನ ಶಾಸ್ತ್ರಕ್ಕೂ (ಹಿಪ್ನಾಸಿಸ್) ಅಲ್ಲಿ ನಿಷೇಧ ಹೇರಲಾಗಿತ್ತು. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ಸರ್ಕಾರಗಳ ಜನ ವಿರೋಧಿ ನೀತಿ ನಿರ್ಧಾರಗಳಿಗೆ ಕಡಿವಾಣ ಬೀಳುತ್ತಿರುತ್ತದೆ. ಈ ಪ್ರಕರಣದಲ್ಲೂ ಹಾಗೆಯೇ ಆಗಿದೆ.

ಇಡೀ ವಿಶ್ವಕ್ಕೆ ಅನ್ವಯವಾಗುವಂತೆ ಭಾರತವು ವಿಶ್ವ ಯೋಗ ದಿನ ಘೋಷಿಸಿದ ಬಳಿಕ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಭಾರತದ ಯೋಗಕ್ಕೆ ಮಣೆ ಹಾಕಿ ಮನ್ನಣೆ ಸಿಗುತ್ತಿದೆ. ವಿಶ್ವ ಸಂಸ್ಥೆಯೂ ಇದಕ್ಕೆ ಕೈಜೋಡಿಸಿದೆ. 2015ರಲ್ಲಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಲಾಯಿತು. ಅಂದಿನಿಂದ ಯೋಗದ ಬಗ್ಗೆ ಇಡೀ ವಿಶ್ವವೇ ಅಪಾರ ವಿಶ್ವಾಸ ಹೊಂದತೊಡಗಿದೆ. ಮನುಷ್ಯ ತನ್ನ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗ ಉತ್ತಮ ಸಾಧನ ಎಂಬುದನ್ನು ಕಂಡುಕೊಂಡಿದೆ.

ಪರಿಸ್ಥಿತಿ ಹೀಗಿರುವಾಗ ವಿಶ್ವದ ಯಾವುದೋ ಒಂದು ರಾಜ್ಯ ತಾನಿನ್ನೂ ಯೋಗಕ್ಕೆ ಕಡಿವಾಣ ಹಾಕುತ್ತೇನೆ ಎಂದು ಕರ್ಮಠ ಮನಸು ಹೊಂದಿದರೆ ಹೇಗೆ? ಎಂದು ಜನ ಮಾತನಾಡಿಕೊಳ್ಳುತ್ತಿರುವಾಗಲೇ ತಡವಾಗಿಯಾದರೂ ಎಚ್ಚೆತ್ತ ಅಮೆರಿಕಾದ ಅಲಬಾಮಾ ಸರ್ಕಾರ ಇನ್ನು ತನ್ನ ರಾಜ್ಯದಲ್ಲಿ ಯೋಗಾಭ್ಯಾಸಕ್ಕೆ ಯಾವುದೇ ಕಡಿವಾಣ ಹಾಕುವುದಿಲ್ಲ. ಜನ ನಿಶ್ಚಿಂತೆಯಿಂದ ಯೋಗ ಮಾಡುತ್ತಾ, ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳುತ್ತಿದೆ. ಅದಕ್ಕೂ ಮುನ್ನ, 1993ರಲ್ಲಿ ಯಾವ ಮೂಲಭೂತವಾದಿಗಳ ಹಠದಿಂದಾಗಿ ಯೋಗ ನಿಷೇದ ಕಾನೂನನ್ನು ಜಾರಿಗೆ ತಂದಿತ್ತೋ ಅದನ್ನು ನಿರ್ಜೀವಗೊಳಿಸಲು ಹೊಸ ಕಾನೂನು ತರುತ್ತಿದೆ.

ಅಮೆರಿಕದ ಪಟ್ಟ ರಾಜ್ಯ ಅಲಬಾಮಾದಲ್ಲಿನ್ನು ನಿಶ್ಚಿಂತೆಯಿಂದ ಯೋಗ ಮಾಡಬಹುದು

ಆದರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಅಲಬಾಮಾ ರಾಜ್ಯ ಸರ್ಕಾರ ಯೋಗಾಭ್ಯಾಸ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ಮುಂದಾಗಿರುವುದರ ಮಧ್ಯೆ ಯೋಗಾಭ್ಯಾಸದ ವೇಳೆ ಪ್ರಯೋಗಿಸುವ ಸಂಸ್ಕೃತ ಪದಗಳ ಬಳಕೆಯನ್ನು ನಿಷೇಧಿಸಿದೆ. ಅಂತಹ ಪದಗಳೆಲ್ಲ ಆಂಗ್ಲಭಾಷೆಯಲ್ಲಿಯೇ ಇರಬೇಕು ಎಂದು ಪಟ್ಟುಹಿಡಿದಿದೆ! ಕೊನೆಗೆ ನಮಸ್ತೆ ಎಂಬ ಸದಾಶಯದ ಪದವನ್ನೂ ಬಳಸುವಂತಿಲ್ಲ ಎಂದು ಸಾರಿದೆ. ಅಲ್ಲಿಗೆ ಯೋಗದ ಮೇಲಿನ ನಿಷೇಧವನ್ನು ವಾಪಸ್​ ತೆಗೆದುಕೊಳ್ಳಲು 3 ದಶಕಗಳ ಸಮಯ ತೆಗೆದುಕೊಂಡ ಅಲಬಾಮಾ ಸರ್ಕಾರಕ್ಕೆ ನಮಸ್ತೆ ಅನ್ನಲು ಇನ್ನೆಷ್ಟು ಸಮಯ ಹಿಡಿಸುತ್ತದೋ ಕಾದುನೋಡಬೇಕಿದೆ!

ಯೋಗ ಮಾಡುವುದು ನಮ್ಮ ಸುಯೋಗ ಎಂದ ಅಲಬಾಮಾ ಜನಪ್ರತಿನಿಧಿ ಅಲಬಾಮಾ ರಾಜ್ಯದ ಜನಪ್ರತಿನಿಧಿಗಳ ಕೆಳಮನೆಯಲ್ಲಿ ಮಸೂದೆ ಅಂಗೀಕಾರವಾಗಿದ್ದು, ಮೇಲ್ಮನೆಯಲ್ಲಿಯೂ ಅಂಗೀಕಾರಗೊಂಡು ಶಾಸನವಾಗಬೇಕಿದೆ. ನಾನೇ ಐದಾರು ವರ್ಷಗಳಿಂದ ಯೋಗ ಮಾಡುತ್ತಾ ಬಂದಿದ್ದೇನೆ. ಯೋಗ ಅಂದರೆ ಅದು ಹಿಂದೂ ಸಂಸ್ಕೃತಿಯಿಂದ ಬಂದಿದ್ದು. ಹಾಗಾಗಿ ಅದನ್ನು ನಿಷೇಧಿಸಬೇಕು ಎಂಬ ವಾದವನ್ನು ನಾನು ಖಂಡಿತಾ ಒಪ್ಪುವುದಿಲ್ಲ. ಇನ್ನು ಮುಂದಾದರೂ ಯೋಗವನ್ನು ನಾವು ಒಪ್ಪಿಕೊಂಡು, ಅಪ್ಪಿಕೊಳ್ಳೋಣ ಎಂದು ಅಲ್ಲಿನ ಜನಪ್ರತಿನಿಧಿ ಜೆಮ್ಮಿ ಗ್ರೆ ಕಿವಿಮಾತು ಹೇಳಿದ್ದಾರೆ.

Also Read:  ಜಾಹೀರಾತು ಫಲಕ ಅಳವಡಿಸಿ ಭಾರತ, ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಕೆನಡಾ

Published On - 12:12 pm, Sat, 13 March 21

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್