Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಮ್ ಕ್ವಾರೆಂಟೈನ್ ಆಗಿರುವ ಕೊರೊನಾ ಸೋಂಕಿತರು ಗಮನಿಸಿ: ಬೇಗ ಗುಣವಾಗಲು ಆಯುಷ್-64 ಔಷಧ ಸಹಕಾರಿ; ವಿವರ ಇಲ್ಲಿದೆ

ಬೆಂಗಳೂರಿನಲ್ಲಿ, ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಯು ಆಯುಷ್ -64 ಮಾತ್ರೆಗಳನ್ನು ಮನೆಯಲ್ಲಿ ಕ್ವಾರೆಂಟೈನ್ ಆಗಿರುವ ಕೊವಿಡ್- 19 ರೋಗಿಗಳಿಗೆ ಕೆಳಗೆ ಸೂಚಿಸಿದ ಘಟಕಗಳಲ್ಲಿ ವಿತರಿಸಲಿದೆ.

ಹೋಮ್ ಕ್ವಾರೆಂಟೈನ್ ಆಗಿರುವ ಕೊರೊನಾ ಸೋಂಕಿತರು ಗಮನಿಸಿ: ಬೇಗ ಗುಣವಾಗಲು ಆಯುಷ್-64 ಔಷಧ ಸಹಕಾರಿ; ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 21, 2021 | 10:09 AM

ಬೆಂಗಳೂರು: ಆಯುಷ್ ಪದ್ಧತಿಗಳ ಮೂಲಕ ಕೊವಿಡ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಆಯುಷ್ ಸಚಿವಾಲಯ, ಭಾರತ ಸರಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಆಯುಷ್ ಸಚಿವಾಲಯವು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಜೊತೆಗೆ ಆಯುಷ್ 64 ಆಯುರ್ವೇದ ಮಾತ್ರೆಯ ಮೌಲ್ಯಮಾಪನ ಮಾಡಲು ಬಹು-ಕೇಂದ್ರ ಸಂಶೋಧನೆ ಮಾಡಿತ್ತು. ಈ ಪ್ರಯೋಗದಲ್ಲಿ ಸ್ಟ್ಯಾಂಡರ್ಡ್ ಆರೈಕೆ ಜೊತೆಗೆ ಆಯುಷ್- 64 ಔಷಧದ ಉಪಯೋಗ ರೋಗದಿಂದ ಬೇಗ ಗುಣಮುಖವಾಗಲು ಸಹಾಯಕಾರಿ ಎಂದು ತಿಳಿದು ಬಂದಿತು. ಈ ಫಲಿತಾಂಶದ ಆಧಾರದ ಮೇಲೆ, ಆಯುಷ್ ಸಚಿವಾಲಯವು ಈ ಔಷಧಿಯನ್ನು ಮನೆಯಲ್ಲಿ ಕ್ವಾರೆಂಟೈನ್ ಆಗಿರುವ ಕೋವಿಡ್- 19 ರೋಗಿಗಳಿಗೆ ವಿತರಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ.

ಈ ಮಾತ್ರೆಯು ನಾಲ್ಕು ಗಿಡಮೂಲಿಕೆಗಳಾದ ಸ್ವೆರ್ಶಿಯಾ ಚಿರಾತಾ (ಕಿರಾತ ತಿಕ್ತ), ಅಲ್ಸ್ಟೋನಿಯಾ ಸ್ಕೊಲರಿಸ್ (ಸಪ್ತಪರ್ಣ), ಪಿರ್ಕೊರ್ರಿಯಾ ಕುರೋವಾ (ಕಟುಕಿ) ಮತ್ತು ಸೀಸಲ್ಪಿನಿಯಾ ಕ್ರಿಸ್ಟಾ (ಕುಬೇರಾಕ್ಷ) ಗಳನ್ನು ಒಳಗೊಂಡಿದೆ . ಸಚಿವಾಲಯದ ಆಶ್ರಯದಲ್ಲಿರುವ ವಿವಿಧ ಸಂಸ್ಥೆಗಳ ಹಾಗೂ ಸೇವಾ ಭಾರತಿಯ ನೆಟ್‌ವರ್ಕ ಬಳಸಿಕೊಂಡು ಆಯುಷ್- 64 ವಿತರಣೆಯನ್ನು ಹಂತಹಂತವಾಗಿ ದೇಶಾದ್ಯಂತದ ಕಾರ್ಯರೂಪಕ್ಕೆ ತರಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ, ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಯು ಆಯುಷ್ -64 ಮಾತ್ರೆಗಳನ್ನು ಮನೆಯಲ್ಲಿ ಕ್ವಾರೆಂಟೈನ್ ಆಗಿರುವ ಕೊವಿಡ್- 19 ರೋಗಿಗಳಿಗೆ ತನ್ನ ಘಟಕವಾದ,

ತುಳಸಿ ತೋಟ, ಉಪ್ಪಾರ್ ಪೇಟೆ ಪೊಲೀಸ್ ಠಾಣೆ ಬಳಿ, ಮೆಜೆಸ್ಟಿಕ್, ಬೆಂಗಳೂರು- 560009, ಫೋನ್ 22356889 ಹಾಗೂ

#12, ಉತ್ತರಹಳ್ಳಿ ಮನವರ್ತೆ ಕಾವಲ್, ಉತ್ತರಹಳ್ಳಿ, ಬೆಂಗಳೂರು ದಕ್ಷಿಣ, ಕನಕಪುರ ಮುಖ್ಯ ರಸ್ತೆ, ವ್ಯಾಲಿ ಸ್ಕೂಲ್ ರಸ್ತೆ, ತಲಘಟ್ಟಪುರ ಪೋಸ್ಟ್, ಬೆಂಗಳೂರು -560109, ಫೋನ್ 29535035,

ಮೇಲಿನ ವಿಳಾಸದಲ್ಲಿ ಪ್ರತಿದಿನ 9.30 ರಿಂದ 4.30 ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಉಚಿತವಾಗಿ ನುರಿತ ವೈದ್ಯರ ಮೂಲಕ ಒದಗಿಸುತ್ತಿದೆ.

ರೋಗಿಯ ಆಧಾರ್ ಸಂಖ್ಯೆ ಮತ್ತು ಕೊವಿಡ್ ಪಾಸಿಟಿವ್ ಫಲಿತಾಂಶಗಳನ್ನು (7 ದಿನಗಳೊಳಗಾಗಿ) ಹೊಂದಿರುವ ರೋಗಿಯ ಪ್ರತಿನಿಧಿಗೆ ಔಷಧಿಯನ್ನು ನೀಡಲಾಗುತ್ತದೆ. ಕೊರೊನಾ ಪೀಡಿತರು/ಪರಿವಾರದವರು ಕ್ವಾರೆಂಟೈನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಯುಷ್ -64 ಮಾತ್ರೆಯನ್ನು, ವೈದ್ಯರು ಕೊಟ್ಟಿರುವ ಅಲೋಪತಿ ಔಷಧಿಗಳ ಜೊತೆಗೆ ಉಪಯೋಗಿಸಬೇಕು. ಅಗತ್ಯವಿರುವ ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?

ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಡಾ.ರಣದೀಪ್​ ಗುಲೇರಿಯಾ

Published On - 4:14 pm, Fri, 21 May 21