Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?

ಅತಿಯಾದ ಕೊರೊನಾ ಸೋಂಕು ಲಕ್ಷಣಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸ್ಟಿರಾಯ್ಡ್ ಔಷಧ ಬಳಸಿ ಅವರನ್ನು ಸೋಂಕಿನಿಂದ ಪಾರು ಮಾಡಬಹುದು.

Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?
ಔಷಧ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ganapathi bhat

Updated on:Aug 21, 2021 | 10:09 AM

ಪ್ರಸ್ತುತ ಸನ್ನಿವೇಶದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಕೆಲವು ಬಾರಿ ಸ್ಟಿರಾಯ್ಡ್​ನ್ನು ಬಳಸಲಾಗುತ್ತದೆ. ಆದರೆ, ಸ್ಟಿರಾಯ್ಡ್ಸ್​ನ್ನು ಬಳಸುವ ಬಗ್ಗೆ ಹಲವು ಚರ್ಚೆಗಳಿವೆ. ಸಪ್ಟೆಂಬರ್ 2020ರಲ್ಲಿ ಕೊರೊನಾ ಸೋಂಕಿತರಿಗೆ ಸ್ಟಿರಾಯ್ಡ್ ಬಳಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಧ್ಯಂತರ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿತು. ಈ ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು, ವೈದ್ಯಕೀಯ ಪ್ರಯೋಗದ ಆಧಾರದ ಮೇಲೆ ಅಭಿವೃದ್ಧಿಪಡಿಸಿದ್ದರು. ಅದರಂತೆ ಎರಡು ನಿರ್ದೇಶನವನ್ನು ನೀಡಲಾಯಿತು.

ಮೊದಲನೆಯದು ಅಂಶದಂತೆ, ಸ್ಟಿರಾಯ್ಡ್​ಗಳನ್ನು ಅತಿಯಾದ ಕೊರೊನಾ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮಾತ್ರ ನೀಡಬೇಕು. ಹಾಗೂ ಎರಡನೇ ಅಂಶದಂತೆ ಕೊರೊನಾ ಸೋಂಕಿತರಾಗಿದ್ದು ಸಾಧಾರಣ ಲಕ್ಷಣ ಹೊಂದಿರುವವರಿಗೆ ಸ್ಟಿರಾಯ್ಡ್ ಬಳಸುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸುವುದಿಲ್ಲ. ಸೋಂಕಿತನು ಮತ್ತೊಂದು ಕಾರಣಕ್ಕೆ ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿಲ್ಲವಾದರೆ ಸಾಮಾನ್ಯ ಕೊವಿಡ್ ಲಕ್ಷಣಕ್ಕೂ ಸ್ಟಿರಾಯ್ಡ್ ಬಳಸುವುದನ್ನು ಆರೋಗ್ಯ ಸಂಸ್ಥೆ ಬೆಂಬಲಿಸುವುದಿಲ್ಲ.

ಸ್ಟಿರಾಯ್ಡ್ ಬಗ್ಗೆ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಅಬ್ದುಲ್ ಸಮದ್ ಅನ್ಸಾರಿ ಅವರು ನೀಡಿರುವ ಮಾಹಿತಿ ಹೀಗಿದೆ. ಸ್ಟಿರಾಯ್ಡ್​ಗಳು ಸೋಂಕಿನಿಂದ ಆಗುವ ಇನ್ಫೆಕ್ಷನ್​ನ್ನು ತಡೆಗಟ್ಟುತ್ತವೆಯಾದರೂ ಅದನ್ನು ಬಳಸುವಲ್ಲಿ ಬಹಳ ಜಾಗರೂಕರಾಗಿರಬೇಕು. ಜವಾಬ್ದಾರಿಯುತವಾಗಿ ಮತ್ತು ಸಂದರ್ಭೋಚಿತವಾಗಿ ಸ್ಟಿರಾಯ್ಡ್ ಬಳಕೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಜ್ವರ ಕಡಿಮೆ ಆಗದ ಸೋಂಕಿತರಿಗೆ, ಉಸಿರಾಟದ ತೊಂದರೆ ಇರುವವರಿಗೆ ಅಥವಾ ಕಫದ ಸಮಸ್ಯೆ ಉಲ್ಬಣಗೊಂಡಿರುವವರಿಗೆ ಹೀಗೆ 5ರಿಂದ 7 ದಿನಗಳವರೆಗೆ ತೊಂದರೆ ಎದುರಿಸುತ್ತಿರುವವರಿಗೆ ಸ್ಟಿರಾಯ್ಡ್ ಬಳಕೆ ಮಾಡಬಹುದು. ಸ್ಟಿರಾಯ್ಡ್ ಔಷಧವನ್ನು ಒಂದು ಕೆಜಿಗೆ 2 ಎಮ್​ಜಿಯಂತೆ ನೀಡಬಹುದು. ಅಥವಾ ಒಂದು ಕೆಜಿಗೆ ಒಂದು ಎಮ್​ಜಿಯಂತೆಯೂ ನೀಡುವುದು ಇನ್ನಷ್ಟು ಉತ್ತಮ. ಅಂದರೆ, 60 ಕೆಜಿ ತೂಕವುಳ್ಳ ವ್ಯಕ್ತಿಗೆ 120 ಎಮ್​ಜಿಯ ಸ್ಟಿರಾಯ್ಡ್ ಔಷಧ ನೀಡಬಹುದಷ್ಟೆ. ಅಥವಾ ಕೇವಲ 60 ಎಮ್​ಜಿ ಔಷಧ ನೀಡಬೇಕು. ಆಯಾ ಸೋಂಕಿತ ವ್ಯಕ್ತಿಯನ್ನು ಅವಲಂಬಿಸಿ ಡೋಸೇಜ್ ವ್ಯತ್ಯಾಸ ಆಗಬಹುದು.

ವೈದ್ಯರ ಹೇಳಿಕೆಯಂತೆ, ಸಕ್ಕರೆ ಖಾಯಿಲೆ ಇರುವ ಸೋಂಕಿತರಿಗೆ ಸ್ಟಿರಾಯ್ಡ್ ಔಷಧ ನೀಡುವಾಗ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು. ಸಕ್ಕರೆ ಖಾಯಿಲೆ ಇರುವ ಕೊರೊನಾ ಸೋಂಕಿತರಿಗೆ ತಪ್ಪಾದ ರೀತಿಯಲ್ಲಿ ಸ್ಟಿರಾಯ್ಡ್ ಬಳಕೆ ಮಾಡಿದರೆ ಅದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು.

ಸ್ಟಿರಾಯ್ಡ್ ಬಳಕೆಯಿಂದ ಆಗಬಹುದಾದ ಕೆಲವು ಅಡ್ಡಪರಿಣಾಮಗಳನ್ನು ವೈದ್ಯರು ಹೀಗೆ ಪಟ್ಟಿ ಮಾಡಿದ್ದಾರೆ: -ಪಚನಕ್ರಿಯೆ ಸರಿಯಾದ ಆಗದಿರುವುದು -ತೂಕ ಹೆಚ್ಚಾಗುವುದು -ಸರಿಯಾದ ನಿದ್ದೆ ಬಾರದಿರುವುದು -ವ್ಯಕ್ತಿಯ ಗುಣನಡತೆ ಅಥವಾ ಮೂಡ್​ನಲ್ಲಿ ವ್ಯತ್ಯಾಸ ಆಗುವುದು -ಸಿಟ್ಟು, ಕಿರಿಕಿರಿ ಅಥವಾ ಒತ್ತಡ ಉಂಟಾಗುವುದು -ಇತರೆ ಇನ್ಫೆಕ್ಷನ್​ಗಳು ಉಂಟಾಗಬಹುದು -ಬ್ಲಡ್ ಶುಗರ್ ಪ್ರಮಾಣ ಏರಿಕೆಯಾಗುವುದು ಇತ್ಯಾದಿ.

ಅತಿಯಾದ ಕೊರೊನಾ ಸೋಂಕು ಲಕ್ಷಣಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸ್ಟಿರಾಯ್ಡ್ ಔಷಧ ಬಳಸಿ ಅವರನ್ನು ಸೋಂಕಿನಿಂದ ಪಾರು ಮಾಡಬಹುದು. ಕೊವಿಡ್-19 ಚಿಕಿತ್ಸೆಯಲ್ಲಿ ಡೆಕ್ಸಾಮೆಥಸೋನ್, ಮೆಥಿ/ ಪ್ರೆಡ್ನಿಸೊಲೊನ್ ಎಂಬ ಸ್ಟಿರಾಯ್ಡ್ ಔಷಧಗಳನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಡಾ.ರಣದೀಪ್​ ಗುಲೇರಿಯಾ

ತಮಿಳುನಾಡಿದಲ್ಲಿ ಕೊರೊನಾ ದೇವರಿಗೆ ವಿಶೇಷ ಪೂಜೆ; ಆಶ್ಚರ್ಯವೆನಿಸಿದರೂ ನಂಬಲೇ ಬೇಕಾದ ಸತ್ಯ!

Published On - 3:31 pm, Fri, 21 May 21

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ