ತಮಿಳುನಾಡಿದಲ್ಲಿ ಕೊರೊನಾ ದೇವರಿಗೆ ವಿಶೇಷ ಪೂಜೆ; ಆಶ್ಚರ್ಯವೆನಿಸಿದರೂ ನಂಬಲೇ ಬೇಕಾದ ಸತ್ಯ!
ಕೊರೊನಾವನ್ನು ದೇವಿ ಎಂಬ ನಂಬಿಕೆಯೊಂದಿಗೆ ಪೂಜಿಸಿ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡು ಎಂದು ತಮಿಳು ನಾಡು ಜನರು ಭಕ್ತಿಯಿಂದ ಪೂಜಿಸುತ್ತಿದ್ದಾರೆ.
ತಮಿಳುನಾಡು: ದೇವರ ಆರಾಧನೆ ಮಾಡುವುದರಲ್ಲಿ ತಮಿಳು ನಾಡಿಗೆ ವಿಶೇಷ ಹೆಸರಿದೆ. ವಿಶೇಷವೆಂದರೆ, ಇದೀಗ ಕೊರೊನಾ ಎಂಬ ದೇವರು ಸೃಷ್ಟಿಯಾಗಿದ್ದು ತಮಿಳುನಾಡಿನಲ್ಲಿ. ಭಕ್ತಿ, ನಂಬಿಕೆಯಲ್ಲಿ ತೊಡಗಿರುವ ಜನರು ಇದೀಗ ಕೊರೊನಾ ವೈರಸ್ಗೆ ದೇವರ ಸ್ವರೂಪ ನೀಡಿದ್ದಾರೆ. ಕೇಳಲು ಆಶ್ಚರ್ಯವೆನಿಸಬಹುದು ಆದರೂ ನಂಬಲೇ ಬೇಕಾದ ಸತ್ಯ. ಕೊಯಿಮತ್ತೂರಿನ ಜನರು ‘ಕೊರೊನಾ ದೇವಿ’ ಎಂಬ ದೇಗುಲವನ್ನು ನಿರ್ಮಿಸಿ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡು ಎಂದು ಭಕ್ತಿಯಿಂದ ಪೂಜಿಸುತ್ತಿದ್ದಾರೆ.
ಕೊರೊನಾ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿನ ಭೀಕರತೆ ಜನರನ್ನು ಭಯಗೊಳಿಸಿದೆ. ಸೋಂಕು ಹರಡದಂತೆ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ತಮಿಳು ನಾಡಿನ ಕೊಯಿಮತ್ತೂರು ಜನರು ದೇವಿಯ ಮೊರೆ ಹೋಗಿದ್ದಾರೆ. ಆಶ್ಚರ್ಯವೇನೆಂದರೆ ‘ಕೊರೊನಾ ದೇವಿ’ ಎಂಬ ದೇಗುಲವನ್ನು ನಿರ್ಮಿಸಿ ವಿಶೇಷ ಪೂಜೆ ಜತೆಗೆ ಕೊರೊನಾ ಸೋಂಕು ಬಹುಬೇಗ ನಿಲ್ಲುವಂತೆ ಪ್ರಾರ್ಥಿಸಿದ್ದಾರೆ.
Tamil Nadu: Priests offer special prayer to ‘Corona Devi’ in a temple in Coimbatore to contain the spread of #COVID19
“We are continuously praying to ‘Corona Devi’ to show mercy on us and help us get rid of this virus,” said Temple Priest (19.05) pic.twitter.com/wWu8wFm9xt
— ANI (@ANI) May 21, 2021
ಕೊಯಿಮತ್ತೂರಿನ ಹೆಸರಾಂತ ಕಾಮಾಚಿಪುರ ಅಧೀನಂ ಪೀಠ ಕೊವಿಡ್ ಸೋಂಕಿಗಾಗಿ ವಿಶೇಷವಾದಂತಹ ದೇವಾಲಯವೊಂದನ್ನು ನಿರ್ಮಿಸಿದೆ. ಕೊರೊನಾ ನಿವಾರಣೆಗೆಂದು ಪ್ರತಿನಿತ್ಯವೂ ವಿಶೇಷವಾದ ಪೂಜೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೊರೊನಾ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.
ಈ ಹಿಂದೆ ಪ್ಲೇಗ್ ಜನರನ್ನು ಕಾಡತೊಡಗಿದ್ದಾಗ ಪ್ಲೇಗ್ ಮಾರಿಯಮ್ಮ ದೇವಾಲಯವನ್ನು ನಿರ್ಮಿಸಿ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲಾಗಿತ್ತು. ಇದೀಗ ಕೊವಿಡ್ -19 ಸಾಂಕ್ರಾಮಿಕ ಬಹುಬೇಗ ನಿವಾರಣೆಯಾಗಲಿ ಎಂಬ ಕಾರಣಕ್ಕೆ ಕೊಯಿಮತ್ತೂರಿನ ಜನ ದೇವಿಯ ಮೊರೆ ಹೋಗಿದ್ದಾರೆ.
Published On - 11:14 am, Fri, 21 May 21