AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​ನ ಮೊಗಾ ಜಿಲ್ಲೆಯಲ್ಲಿ MiG-21 ಫೈಟರ್ ಜೆಟ್ ಪತನ, ಐಎಎಫ್ ಪೈಲಟ್ ಸಾವು

MiG-21 Fighter Jet Crash: MiG-21 ಯುದ್ಧ ವಿಮಾನ ಪಂಜಾಬ್​ನ ಮೊಗಾ ಜಿಲ್ಲೆಯ ಲಂಗೇನಾ ಗ್ರಾಮದಲ್ಲಿ ಪತನಗೊಂಡಿದ್ದು ಭಾರತೀಯ ವಾಯು ಸೇನೆಯ ಎಂಸಿಸಿ ಸ್ಕ್ವಾರ್ಡನ್ ಲೀಡರ್ ಅಭಿನವ್ ಚೌಧರಿ ಸಾವಿಗೀಡಾಗಿದ್ದಾರೆ.

ಪಂಜಾಬ್​ನ ಮೊಗಾ ಜಿಲ್ಲೆಯಲ್ಲಿ MiG-21 ಫೈಟರ್ ಜೆಟ್ ಪತನ, ಐಎಎಫ್ ಪೈಲಟ್ ಸಾವು
ಪತನಗೊಂಡ ಯುದ್ಧ ವಿಮಾನ
Follow us
ರಶ್ಮಿ ಕಲ್ಲಕಟ್ಟ
|

Updated on:May 21, 2021 | 11:51 AM

ಮೊಗಾ (ಪಂಜಾಬ್): ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ಪಂಜಾಬ್​ನ ಮೊಗಾ ಜಿಲ್ಲೆಯ ಲಂಗೇನಾ ಗ್ರಾಮದಲ್ಲಿ ಪತನಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಈ ಅಪಘಾತದಲ್ಲಿ ಭಾರತೀಯ ವಾಯು ಸೇನೆಯ ಎಂಸಿಸಿ ಸ್ಕ್ವಾರ್ಡನ್ ಲೀಡರ್ ಅಭಿನವ್ ಚೌಧರಿ ಸಾವಿಗೀಡಾಗಿದ್ದಾರೆ. ರಾತ್ರಿ ಹೊತ್ತು ತರಬೇತಿ ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ಕೂಡಲೇ ಸ್ಥಳೀಯ ಪೊಲೀಸ್ ತಂಡ,ಬಟಿಂಡಾ ಮತ್ತು ಹಲ್ವಾರಾ ವಾಯುನೆಲೆಯ ಐಎಎಫ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ ತೀವ್ರವಾದ ನಾಲ್ಕು ಗಂಟೆಗಳ ಹುಡುಕಾಟದ ನಂತರ, ಅಪಘಾತದ ಸ್ಥಳದಿಂದ ಸುಮಾರು 2 ಕಿ.ಮೀ ದೂರದಲ್ಲಿ ಪೈಲಟ್ ನ ಮೃತದೇಹ ಪತ್ತೆಯಾಗಿದೆ. ಯುದ್ಧ ವಿಮಾನ ಪತನಗೊಂಡ ಗ್ರಾಮದಲ್ಲಿ ಯಾವುದೇ ಮನೆ ಅಥವಾ ಇತರ ಕಟ್ಟಡಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೈಲಟ್ @IAF_MCC ಸ್ಕ್ವಾಡ್ರನ್ ನಾಯಕ ಅಭಿನವ್ ಚೌಧರಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. 4 ಗಂಟೆಗಳ ಹುಡುಕಾಟದ ನಂತರ ಅವರ ಮೃತದೇಹ ಅಪಘಾತದ ಸ್ಥಳದಿಂದ 2 ಕಿ.ಮೀ ದೂರದಲ್ಲಿ ಪತ್ತೆಯಾಗಿತ್ತು. ಪ್ಯಾರಾಚೂಟ್ ತೆರೆದಿದ್ದು ಅವರು ಎಸ್‌ಒಎಸ್ ಸಂದೇಶವನ್ನೂ ಕಳುಹಿಸಿದ್ದರು ಅವರು. ಆದರೆ ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದರು. ಅವರು ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ಇಳಿಯಲು ಪ್ರಯತ್ನಿಸಿದರು ಆದರೆ ಈ ಪ್ರಯತ್ನ ಮಾಡುವ ಹೊತ್ತಿಗೆ ಅವರ ಕುತ್ತಿಗೆ ಮತ್ತು ಬೆನ್ನುಹುರಿಯನ್ನು ಮುರಿದಿದೆ. ಬಟಿಂಡಾ ಮತ್ತು ಹಲ್ವಾರಾದ ಐಎಎಫ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದರು ಮತ್ತು ಮುಂಜಾನೆ 3 ಗಂಟೆ ಸುಮಾರಿಗೆ ಮೃತದೇಹ ಹೊರತೆಗೆಯಲಾಗಿದೆ ಎಂದುಮೊಗಾ ಎಸ್ಪಿ (ಪ್ರಧಾನ ಕಚೇರಿ) ಗುರುದೀಪ್ ಸಿಂಗ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಐಎಎಫ್ ಅಧಿಕಾರಿಗಳ ಪ್ರಕಾರ, ಜೆಟ್ ರಾಜಸ್ಥಾನದ ಸೂರತ್‌ಗಡದಿಂದ ಜಾಗ್ರಾನ್‌ಗೆ (ಲುಧಿಯಾನದಲ್ಲಿ) ರಾತ್ರಿ ತರಬೇತಿ ಉದ್ದೇಶಗಳಿಗಾಗಿ ಹೊರಟಿತ್ತು. ಪೈಲಟ್ ಸೂರತ್‌ಗಡಕ್ಕೆ ಹಿಂದಿರುಗುತ್ತಿದ್ದಾಗ ಮೊಗಾದಲ್ಲಿ ಅಪಘಾತ ಸಂಭವಿಸಿದೆ.

ಬೇರೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ. ಇದು ದುರದೃಷ್ಟಕರ ಘಟನೆಯಾಗಿದ್ದು, ನಾವು ಪೈಲಟ್ ಅನ್ನು ಉಳಿಸಲು ಸಾಧ್ಯವಾಗಲಿಲ್ಲ. ಆದರೆ ಅದೃಷ್ಟವಶಾತ್ ಫೈಟರ್ ಜೆಟ್ ತೆರೆದ ಮೈದಾನಕ್ಕೆ ಅಪ್ಪಳಿಸಿತು. ಬೇರೆ ಯಾವುದೇ ಪ್ರಾಣಹಾನಿ ಇಲ್ಲಿ ಸಂಭವಿಸಿಲ್ಲ. ಲಂಗೇನಾ ನವಾನ್ ಗ್ರಾಮದ ನಿವಾಸಿಗಳು ಸುರಕ್ಷಿತರಾಗಿದ್ದಾರೆ. ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ ಎಂದು ಸಿಂಗ್ ಹೇಳಿದರು.

ಜೆಟ್ ಪತನಗೊಂಡ ಶಬ್ದವನ್ನು ಕೇಳಿದ ಸ್ಥಳೀಯರು ಸ್ಫೋಟ ಎಂದು ಭಾವಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಅದರ ನಂತರ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ ಭಾರತೀಯ ವಾಯುಪಡೆ, ಅಪಘಾತದ ಕಾರಣವನ್ನು ಪತ್ತೆ ಹಚ್ಚುಲು ತನಿಖಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ಹೇಳಿದೆ. ಪಶ್ಚಿಮ ವಲಯದಲ್ಲಿ ಐಎಎಫ್ ಬೈಸನ್ ವಿಮಾನ ಅಪಘಾತ ಸಂಭವಿಸಿದೆ. ಪೈಲಟ್, ಸ್ಕ್ವಾಡ್ರನ್ ಲೀಡರ್ ಅಭಿನವ್ ಚೌಧರಿ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ ಈ ನಷ್ಟಕ್ಕೆ ಐಎಎಫ್ ಸಂತಾಪ ಸೂಚಿಸುತ್ತದೆ ಮತ್ತು ಸಂತ್ರಸ್ತ ಕುಟುಂಬಕ್ಕೆ ಬೆಂಬಲವಾಗಿ ನಿಂತಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ಐಎಎಫ್ ಟ್ವೀಟ್ ಮಾಡಿದೆ.

ಈ ವರ್ಷದ ಮಾರ್ಚ್ 17 ರಂದು ಗ್ವಾಲಿಯರ್‌ನಲ್ಲಿ ಟೇಕಾಫ್ ಆಗುತ್ತಿದ್ದಾಗ ಮಿಗ್ -21 ಬೈಸನ್ ಫೈಟರ್ ಜೆಟ್ ಅಪಘಾತಕ್ಕೀಡಾಗಿ ಭಾರತೀಯ ವಾಯುಪಡೆಯ ಹಿರಿಯ ಫೈಟರ್ ಪೈಲಟ್ ಮೃತಪಟ್ಟಿದ್ದರು. ಇದನ್ನೂ ಓದಿ: Nigeria Plane Crash | ನೈಜೀರಿಯಾದಲ್ಲಿ ಕಿಡ್ನ್ಯಾಪ್ ಆಗಿದ್ದ ವಿದ್ಯಾರ್ಥಿಗಳ ರಕ್ಷಣೆಗೆ ಹೋಗ್ತಿದ್ದ ಮಿಲಿಟರಿ ವಿಮಾನ ಪತನ, 7 ಮಂದಿ ಸಾವು

Published On - 11:29 am, Fri, 21 May 21

ಅಲೆಗಳ ಅಬ್ಬರ ಕಂಡು ಮೀನುಗಾರರರೂ ಸಮುದ್ರಕ್ಕಿಳಿಯುತ್ತಿಲ್ಲ
ಅಲೆಗಳ ಅಬ್ಬರ ಕಂಡು ಮೀನುಗಾರರರೂ ಸಮುದ್ರಕ್ಕಿಳಿಯುತ್ತಿಲ್ಲ
ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು
ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು
‘ಸರಿಗಮಪ’ ಸೆಮಿ ಫೈನಲ್; ನಾಲ್ಕು ಸ್ಥಾನಕ್ಕೆ 9 ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್
‘ಸರಿಗಮಪ’ ಸೆಮಿ ಫೈನಲ್; ನಾಲ್ಕು ಸ್ಥಾನಕ್ಕೆ 9 ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್
ಬಾನು ಮುಷ್ತಾಕ್ ಕೃತಿ ಹಾರ್ಟ್ ಲ್ಯಾಂಪ್​ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
ಬಾನು ಮುಷ್ತಾಕ್ ಕೃತಿ ಹಾರ್ಟ್ ಲ್ಯಾಂಪ್​ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ