Nigeria Plane Crash | ನೈಜೀರಿಯಾದಲ್ಲಿ ಕಿಡ್ನ್ಯಾಪ್ ಆಗಿದ್ದ ವಿದ್ಯಾರ್ಥಿಗಳ ರಕ್ಷಣೆಗೆ ಹೋಗ್ತಿದ್ದ ಮಿಲಿಟರಿ ವಿಮಾನ ಪತನ, 7 ಮಂದಿ ಸಾವು

Nigeria Military Plane Crash: ವಿಮಾನ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ ಏಳು ಜನರು ಕೂಡ ಮೃತಪಟ್ಟಿದ್ದಾರೆ. ಏರ್ ಸ್ಟಾಫ್ ಮುಖ್ಯಸ್ಥ ಒಲಡಯೊ ಅಮವೊ ಈ ಬಗ್ಗೆ ಕೂಡಲೇ ತನಿಖೆ ಕೈಗೊಳ್ಳುವಂತೆ ಹೇಳಿದ್ದಾರೆ.

Nigeria Plane Crash | ನೈಜೀರಿಯಾದಲ್ಲಿ ಕಿಡ್ನ್ಯಾಪ್ ಆಗಿದ್ದ ವಿದ್ಯಾರ್ಥಿಗಳ ರಕ್ಷಣೆಗೆ ಹೋಗ್ತಿದ್ದ ಮಿಲಿಟರಿ ವಿಮಾನ ಪತನ, 7 ಮಂದಿ ಸಾವು
ನೈಜೀರಿಯಾ ವಿಮಾನ ಪತನ
Follow us
TV9 Web
| Updated By: ganapathi bhat

Updated on:Apr 06, 2022 | 7:48 PM

ದೆಹಲಿ: ನೈಜೀರಿಯಾ ರಾಜಧಾನಿ ಅಬುಜಾ ಎಂಬಲ್ಲಿ ಮಿಲಿಟರಿ ವಿಮಾನ ಪತನವಾಗಿ (Nigeria Military Plane Crash) ಏಳು ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ (ಫೆ.21) ನಡೆದಿದೆ. ನೈಜೀರಿಯಾ ಏರ್​ಫೋರ್ಸ್ ವಕ್ತಾರ ಇಬಿಕುನ್ಲೆ ದರಮೋಲಾ ವಿಮಾನ ಪತನಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ನೀಜೀರಿಯಾ ಏರ್​ಫೋರ್ಸ್ (NAF) ಬೀಚ್​ಕ್ರಾಫ್ಟ್ ಕಿಂಗ್​ಏರ್ B350i ವಿಮಾನ ಅಬುಜಾ ಏರ್​ಪೋರ್ಟ್​ಗೆ ಮರಳುತ್ತಿರುವ ವೇಳೆ ಪತನವಾಗಿದೆ. ವಿಮಾನದ ಎಂಜಿನ್ ವಿಫಲಗೊಂಡು ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ವಿಮಾನ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ ಏಳು ಜನರು ಕೂಡ ಮೃತಪಟ್ಟಿದ್ದಾರೆ. ಜತೆಗೆ, ವಕ್ತಾರರು ತಿಳಿಸಿರುವಂತೆ, ಏರ್ ಸ್ಟಾಫ್ ಮುಖ್ಯಸ್ಥ ಒಲಡಯೊ ಅಮವೊ ಈ ಬಗ್ಗೆ ಕೂಡಲೇ ತನಿಖೆ ಕೈಗೊಳ್ಳುವಂತೆ ಹೇಳಿದ್ದಾರೆ. ತನಿಖೆಯ ಮಾಹಿತಿ ಲಭ್ಯವಾಗುವವರೆಗೆ ಸಾರ್ವಜನಿಕರು ಶಾಂತ ರೀತಿಯಿಂದ ಕಾಯುವಂತೆ ತಿಳಿಸಲಾಗಿದೆ.

ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AIB) ವಿಮಾನದ ವಾಯ್ಸ್ ರೆಕಾರ್ಡರ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಧ್ವನಿಮುದ್ರಣವನ್ನು ಆಲಿಸಿ ಪಡೆದ ಮಾಹಿತಿಯ ಪ್ರಕಾರ, ಪೈಲೆಟ್ ವಿಮಾನವನ್ನು ರನ್ ವೇಗೆ ಇಳಿಸುತ್ತೇನೆ ಎಂದು ಖಚಿತವಾಗಿದ್ದರು. 400 ಮೀಟರ್ ದೂರದಲ್ಲಿರುವ ರನ್ ವೇಗೆ ವಿಮಾನ ತಲುಪುತ್ತದೆ ಎಂದೇ ಅಂದುಕೊಂಡಿದ್ದರು.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು, ಅಗ್ನಿ ನಂದಿಸಲು ಹರಸಾಹಸ ಪಟ್ಟಿರುವುದಾಗಿ ತಿಳಿಸಿದ್ದಾರೆ. ಬಸ್ಸಂಜುವಾದ ಕೃಷಿ ಸಮುದಾಯದ ಜನರು ವಿಮಾನ ಪತನವಾಗಿ ಅಗ್ನಿ ಹೊತ್ತಿಕೊಂಡಿದ್ದಾಗ, ಅದನ್ನು ಆರಿಸಿ, ವಿಮಾನದಲ್ಲಿದ್ದ ಜನರನ್ನು ರಕ್ಷಿಸಲು ಪ್ರಯತ್ನಿಸಿದ್ದರು.

ಮಿಲಿಟರಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ನೈಜೀರಿಯಾದ ಈ ವಿಮಾನ, ನೈಜೀರಿಯಾದ ಕಗರ ಪಟ್ಟಣದಿಂದ ಕಿಡ್ನ್ಯಾಪ್ ಆಗಿದ್ದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರನ್ನು ರಕ್ಷಿಸಲು ಹೋಗುತ್ತಿತ್ತು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬುಧವಾರ ಕಿಡ್ನ್ಯಾಪ್ ಆಗಿದ್ದರು.

ನೈಜೀರಿಯಾ ಮಿಲಿಟರಿ ವಿಮಾನ ಪತನದ ಬಗ್ಗೆ ಹಲವರು ಸಂತಾಪ ಸೂಚಿಸಿದ್ದಾರೆ. ನೈಜೀರಿಯಾ ರೋಗ ನಿಯಂತ್ರಣ ಕೇಂದ್ರದ ಮಹಾನಿರ್ದೇಶಕ ಚಿಕ್ವೆ ಇಹೆಕ್ವೆಜು ಟ್ವೀಟ್ ಮಾಡಿದ್ದಾರೆ. ಏರ್​ಫೋರ್ಸ್ ಕೊವಿಡ್ ನಿಯಂತ್ರಣದಲ್ಲಿ ಬಹಳಷ್ಟು ಶ್ರಮಿಸಿದೆ. ಏರ್​ಫೋರ್ಸ್​ನ ವಿಮಾನ ಪತನದಿಂದ ಬೇಸರವಾಗಿದೆ ಎಂದಿದ್ದಾರೆ.

We @NCDCgov are deeply saddened over the @NigAirForce fatal plane crash. The Air Force has been contributing its resources for Nigeria’s #COVID19 response activities

We pray for comfort for the family, colleagues, friends and loved ones of the deceased https://t.co/5cujOacNsd
— Chikwe Ihekweazu (@Chikwe_I) February 21, 2021

ಇದನ್ನೂ ಓದಿ:ವಿಜಯವಾಡದಲ್ಲಿ ಲ್ಯಾಂಡಿಂಗ್​ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಏರ್​​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನ

ಪೆಟ್ರೋಲ್​, ಡೀಸೆಲ್​ ಆಯ್ತು.. ಈಗ ದೇಶೀಯ ವಿಮಾನ ಪ್ರಯಾಣವೂ ತುಟ್ಟಿ

Published On - 10:56 am, Mon, 22 February 21

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ