ವಿಜಯವಾಡದಲ್ಲಿ ಲ್ಯಾಂಡಿಂಗ್ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಖತಾರ್ನ ದೋಹಾದಿಂದ ಗನ್ನಾವರಂನಲ್ಲಿರುವ ವಿಜಯವಾಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಲ್ಯಾಂಡ್ ಆಗಿ ವಿಮಾನ ಇನ್ನೇನು ನಿಲ್ಲಬೇಕು ಎನ್ನುವಾಗ ನಿಲ್ದಾಣದಲ್ಲಿರುವ ವಿದ್ಯುತ್ ಕಂಬಕ್ಕೆ ವಿಮಾನದ ರೆಕ್ಕೆಗೆ ತಾಗಿದೆ.
ವಿಜಯವಾಡ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದ ರೆಕ್ಕೆ ವಿದ್ಯುತ್ ಕಂಬಕ್ಕೆ ತಾಗಿದೆ. ಇದರಿಂದ ಒಂದು ಕ್ಷಣ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆ ಉಂಟಾಗಿಲ್ಲ. ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಖತಾರ್ನ ದೋಹಾದಿಂದ ಗನ್ನಾವರಂನಲ್ಲಿರುವ ವಿಜಯವಾಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಲ್ಯಾಂಡ್ ಆಗಿ ವಿಮಾನ ಇನ್ನೇನು ನಿಲ್ಲಬೇಕು ಎನ್ನುವಾಗ ನಿಲ್ದಾಣದಲ್ಲಿರುವ ವಿದ್ಯುತ್ ಕಂಬಕ್ಕೆ ವಿಮಾನದ ರೆಕ್ಕೆಗೆ ತಾಗಿದೆ. ತಕ್ಷಣಕ್ಕೆ ನಿಲ್ದಾಣದ ಸಿಬ್ಬಂದಿ ಬಂದು ಪ್ರಯಾಣಿಕರನ್ನು ಇಳಿಸಿದ್ದಾರೆ. ವಿಮಾನದಲ್ಲಿ ಸಿಬ್ಬಂದಿ ಸೇರಿ 64 ಜನರು ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ.
ಇದೇ ಮಾದರಿಯ ಘಟನೆ ಕೇರಳದ ಕೋಳಿಕ್ಕೋಡ್ನಲ್ಲಿ ಶುಕ್ರವಾರ ಸಂಭವಿಸಿತ್ತು. ಶಾರ್ಜಾದಿಂದ ಕೋಳಿಕ್ಕೋಡ್ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ, ತಿರುವನಂತಪುರದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲಾಗಿತ್ತು.
ಕೋಳಿಕ್ಕೋಡ್ ನಿಲ್ದಾಣದಲ್ಲಿ 12.40ಕ್ಕೆ ವಿಮಾನ ಲ್ಯಾಂಡ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆ ಎದುರಾದರ ನಂತರವೂ ಈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವುದು ಪೈಲಟ್ಗಳಿಗೆ ದೊಡ್ಡ ಸವಾಲಿನ ಸಂಗತಿ. ಇದೇ ಕಾರಣಕ್ಕೆ ಇಲ್ಲಿ ಸಾಕಷ್ಟು ದುರಂತಗಳು ಸಂಭವಿಸಿವೆ. ಹೀಗಾಗಿ, ತಿರುವನಂತಪುರದಲ್ಲೇ ವಿಮಾನವನ್ನು ಲ್ಯಾಂಡ್ ಮಾಡುವಂತೆ ಸೂಚಿಸಲಾಗಿತ್ತು.
ಇದನ್ನೂ ಓದಿ: Olympian Harassed: ದೆಹಲಿಯಲ್ಲಿ ಖ್ಯಾತ ಶೂಟರ್ ಮನು ಭಾಕರ್ ವಿಮಾನ ಹತ್ತದಂತೆ ತಡೆದು ಉದ್ಧಟತನ ಮೆರೆದ ಏರ್ ಇಂಡಿಯಾ ಅಧಿಕಾರಿಗಳು
Published On - 9:19 pm, Sat, 20 February 21