Viral Video: ಕೊಂಚ ಸ್ಲಿಪ್​ ಆದ್ರೆ ಬದುಕುಳಿಯುವುದೇ ಡೌಟು! ಯುವಕನ ಸ್ಟಂಟ್​ ವಿಡಿಯೋ ನೋಡಿದ್ರೆ ನೀವೂ ಬೆರಗಾಗ್ತೀರಾ

ಕೆಲವೊಂದು ಸ್ಟಂಟ್​ ವಿಡಿಯೋಗಳು ಕಣ್​ಕಟ್ಟುವಂತಿರುತ್ತದೆ. ಅಂತಹುದೇ ಒಂದು ಸ್ಟಂಟ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಕೊಂಚ ಸ್ಲಿಪ್​ ಆದ್ರೆ ಬದುಕುಳಿಯುವುದೇ ಡೌಟು! ಯುವಕನ ಸ್ಟಂಟ್​ ವಿಡಿಯೋ ನೋಡಿದ್ರೆ ನೀವೂ ಬೆರಗಾಗ್ತೀರಾ
ಯುವಕನ ಸ್ಟಂಟ್​ ವಿಡಿಯೋ ವೈರಲ್​
Follow us
shruti hegde
|

Updated on: May 18, 2021 | 3:44 PM

ಯುವಕರ ಸಾಹಸದ ಸ್ಟಂಟ್​ ವಿಡಿಯೋಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಯಾವುದೇ ಸಾಧನವಿಲ್ಲದೇ ಅದೆಷ್ಟೋ ಎತ್ತರದ ಕಟ್ಟಡವನ್ನು ಹತ್ತುವ ಯುವಕ, ಅಷ್ಟೇ ಎತ್ತರದಿಂದ ಕೆಳಗೆ ಹಾರಿ ಸ್ಟಂಟ್​ ಮಾಡುವ ಬಾಲಕ. ಹೀಗೆ ಅನೇಕ ವಿಡಿಯೋಗಳನ್ನು ನೋಡಿಯೇ ಇರುತ್ತೀರಿ. ಕೆಲವೊಂದು ವಿಡಿಯೋಗಳು ಕಣ್​ಕಟ್ಟುವಂತಿರುತ್ತದೆ. ಅಂತಹುದೇ ಒಂದು ಸ್ಟಂಟ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನೀವು ವಿಡಿಯೋದಲ್ಲಿ ನೋಡಬಹುದು. ಯುವಕನೊಬ್ಬ ಸೈಕಲ್​ನೊಂದಿಗೆ ಸಾಹಸ ಮಾಡುತ್ತಾನೆ. ಸೈಕಲ್​ ಏರಿದ ಯುವಕ ಸೈಕಲ್​ನ ಮುಂದಿನ ಚಕ್ರವನ್ನು ಮೇಲಕ್ಕೆ ಎತ್ತಿ, ಹಿಂದಿನ ಚಕ್ರದ ಮೂಲಕವೇ ಚಲಿಸುತ್ತಾನೆ. ಸೇತುವೆಯಲ್ಲಿ ಸಾಗುವ ಯುವಕ ಸೇತುವೆಯ ಮಧ್ಯದ ಅಂತರವನ್ನು ತಪ್ಪಿಸಿ, ಸೈಕಲ್​ ಹೊಡೆಯುತ್ತಾನೆ. ವಿಡಿಯೋ ನೋಡುತ್ತಿದ್ದಂತೆ ಆಶ್ಚರ್ಯವೆನಿಸುತ್ತದೆ.

ಅಪಾಯಕಾರಿಯಾದ ವಿಡಿಯೋ ಇದಾಗಿದೆ. ಟ್ವಿಟರ್​ನಲ್ಲಿ ಪೋಸ್ಟ್​ ಆಗುತ್ತಿದ್ದಂತೆಯೇ 60,000ಕ್ಕೂ ಹೆಚ್ಚು ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. ಇಂತಹ ಸ್ಟಂಟ್​ ಮಾಡಲು ಹೋಗಿ ಅದೆಷ್ಟೋ ಜನ ಜೀವ ಕಳೆದುಕೊಂಡಿದ್ದಾರೆ. ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಕುರಿತಾಗಿ ನೆಟ್ಟಿಗರು ಆಕ್ಷೇಪ ಹೊರಹಾಕಿದ್ದಾರೆ.

ಸ್ಟಂಟ್​ ಮಾಡೋಕೆ ಹೋಗಿ ಅವಾಂತರ: ನೋಡನೋಡುತ್ತಿದ್ದಂತೆ ಪಲ್ಟಿಯಾದ ರೇಸ್​ ಕಾರ್ ರೇಸ್​ನಲ್ಲಿ ಪಾಲ್ಗೊಂಡ ಸ್ಪೋರ್ಟ್ಸ್ ಕಾರು ಪಲ್ಟಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಹೊರವಲಯದ ಸಂಕ್ಲಾಪುರ ಗ್ರಾಮದ ಬಳಿ ಈ ಹಿಂದೆ ನಡೆದಿತ್ತು. ವಿಜಯನಗರ ಅಕಾಡೆಮಿ ಆಫ್ ಮೋಟೋ ಸ್ಪೋರ್ಟ್ಸ್ ಎಂಬ ಖಾಸಗಿ ಸಂಸ್ಥೆ ಆಯೋಜನೆ ಮಾಡಿದ್ದ ಕಾರ್ ರೇಸ್​ನಲ್ಲಿ ಅವಘಡ ಸಂಭವಿಸಿತ್ತು. ರೇಸ್​ ವೇಳೆ ಕಾರು ಚಾಲಕ ಸ್ಟಂಟ್​ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ನೋಡ ನೋಡುತ್ತಿದ್ದಂತೇ ವಾಹನ ಪಲ್ಟಿಯಾಗಿದೆ. ಆದರೆ, ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ಇದನ್ನೂ ಓದಿ: ಸ್ಟಂಟ್​ ಮಾಡೋಕೆ ಹೋಗಿ ಅವಾಂತರ: ನೋಡನೋಡುತ್ತಿದ್ದಂತೆ ಪಲ್ಟಿಯಾದ ರೇಸ್​ ಕಾರ್, ಮತ್ತೆ ಚಾಲಕನ ಕಥೆ?

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್