AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral video: ಹವಾಮಾನ ಕೆಟ್ಟಿದ್ದರೆ ಹೀಗೇ ಆಗುತ್ತದೆ! ವರದಿ ಓದುವಾಗ ಆ್ಯಂಕರ್​ ಹೇಗಾಗಿದ್ದಾರೆ ನೋಡಿ

ಮಹಿಳಾ ಆ್ಯಂಕರ್​ ಓರ್ವರು ನಿರೂಪಣೆ ಮಾಡುತ್ತಿರುವಾಗ ಸ್ಕ್ರೀನ್​ನಲ್ಲಿ ಆ್ಯಂಕರ್​ ತದ್ರೂಪಿ ಚಿತ್ರವೊಂದು ಕಾಣಿಸಿಕೊಳ್ಳಲು ಪ್ರಾರಂಭಿದ ವಿಡಿಯೋ ವೈರಲ್​ ಆಗಿದೆ. ನೀವೂ ನೋಡಿ ವಿಡಿಯೋ ಇಲ್ಲಿದೆ.

Viral video: ಹವಾಮಾನ ಕೆಟ್ಟಿದ್ದರೆ ಹೀಗೇ ಆಗುತ್ತದೆ! ವರದಿ ಓದುವಾಗ ಆ್ಯಂಕರ್​ ಹೇಗಾಗಿದ್ದಾರೆ ನೋಡಿ
ಆ್ಯಂಕರ್​
shruti hegde
|

Updated on: May 18, 2021 | 1:46 PM

Share

ಮುಂಬೈ: ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುವ ಸುದ್ದಿ- ಸಮಾಚಾರಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ವಿಶ್ರಾಂತಿ ಇಲ್ಲದೇ ನಿಯಂತರವಾಗಿ ಜನಗತ್ತಿನ ಆಗು-ಹೋಗುಗಳ ಕುರಿತಾದ ಮಾಹಿತಿಯನ್ನು ತಿಳಿಸುತ್ತದೆ. ಸಮಾಜದಲ್ಲಿ ನಡೆಯುತ್ತಿರು ಘಟನೆಯನ್ನು ಸರಳವಾಗಿ ಜನರಿಗೆ ತಲುಪಿಸಿವ ಕೆಲಸ ಮಾಧ್ಯಮದವರದ್ದು. ಹಾಗೆಯೇ, ವರದಿ ಓದುವ ಆ್ಯಂಕರ್​ ಕೆಲಸ ಸುಲಭವಲ್ಲ. ತತ್​ಕ್ಷಣದ ಸುದ್ದಿಯನ್ನು ತಪ್ಪಿಲ್ಲದೇ ಜನರಿಗೆ ತಿಳಿಸುವುದು, ಜೊತೆಗೆ ಎದುರಾಗುವ ತಾಂತ್ರಿಕ ದೋಷಗಳನ್ನೂ ಮೀರಿ ಜನರೆದುರು ನಿಲ್ಲಿವುದು ಕಷ್ಟಕರ. ಇದಕ್ಕೆ ಒಳ್ಳೆಯ ಬುದ್ಧಿವಂತಿಕೆ ಮತ್ತು ಚಾಣಾಕ್ಷತನ ಬೇಕು.

ಇದೀಗ ಮಹಿಳಾ ಆ್ಯಂಕರ್​ ಓರ್ವರು ನಿರೂಪಣೆ ಮಾಡುತ್ತಿರುವಾಗ ಸ್ಕ್ರೀನ್​ನಲ್ಲಿ ಆ್ಯಂಕರ್​ ತದ್ರೂಪಿ ಚಿತ್ರವೊಂದು ಕಾಣಿಸಿಕೊಳ್ಳಲು ಪ್ರಾರಂಭಿದ ವಿಡಿಯೋ ವೈರಲ್​ ಆಗಿದೆ. ಆ್ಯಂಕರ್​ಗೂ ಕೂಡಾ ಒಂದು ಕ್ಷಣ ವಿಚಿತ್ರ ಅನಿಸಿಬಿಡ್ತು. ಆದರೂ ಕೂಡಾ ಕಂಗಾಲಾಗದೇ ಬುದ್ಧಿವಂತಿಕೆಯಿಂದ ಸಮಯವನ್ನು ನಿಭಾಯಿಸಿದ್ದಾರೆ. ವಿಡಿಯೋ ಇದೆ ನೀವೂ ನೋಡಿ.

ಫಾಕ್ಸ್​9 ನ್ಯೂಸ್​ ಸುದ್ದಿ ನಿರೂಪಕಿ ಜೆನ್ನಿಫರ್​ ಮೆಕ್​ಡರ್ಮಡ್​ ಕ್ಲೋನ್​ ಅವರು ಸ್ಕ್ರೀನ್​ನಲ್ಲಿ ಕಾಣಿಸಿಕೊಂಡ ತದ್ರೂಪಿ ಚಿತ್ರ ಇದೀಗ ಸೋಷಿಲ್​ ಮಿಡಿಯಾಗಳಲ್ಲಿ ವೈರಲ್​ ಆಗುತ್ತಿದೆ.

ನಿಜವಾಗಿಯೂ ಅಲ್ಲಿ ಏನಾಯ್ತು? ಫಾಕ್ಸ್​9 ನ್ಯೂಸ್​ ಮಾಧ್ಯಮದ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ. ಫಾಕ್ಸ್​9 ನ್ಯೂಸ್​ ನಿರೂಪಕಿ ಜೆನ್ನಿಫರ್​ ಮೆಕ್​ಡರ್ಮಡ್​ ನಿರೂಪಣೆ ಮಾಡುತ್ತಿದ್ದರು. ಹವಾಮಾನ ವರದಿಯ ಕುರಿತಾಗಿ ಅಂದು ನಿರೂಪಣೆಯಲ್ಲಿ ತೊಡಗಿದ್ದರು. ಆಗ ತಾಂತ್ರಿಕ ಸಮಸ್ಯೆಯೊಂದು ಎದುರಾಗಿದೆ. ಇದ್ದಕ್ಕಿದ್ದಂತೆಯೇ ಆ್ಯಂಕರ್​ ತದ್ರೂಪಿ ಚಿತ್ರ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ. ತತ್​ಕ್ಷಣ ಆ್ಯಂಕರ್​ ಕೂಡಾ ಆಶ್ವರ್ಯಗೊಳ್ಳುತ್ತಾರೆ. ತನ್ನದೇ ತದ್ರೂಪಿ ಚಿತ್ರ ನೋಡಿ ಅವರೂ ಕೂಡಾ ನಗಲು ಪ್ರಾರಂಭಿಸುತ್ತಾರೆ. ಜೊತೆಗೆ ವಿವಿಧ ಆ್ಯಕ್ಷನ್​ ಮಾಡುವ ಮೂಲಕ ನಗುತ್ತಾರೆ.

ಏತನ್ಮಧ್ಯೆ, ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಮತ್ತೆ ಆ್ಯಂಕರ್​ ಹವಾಮಾನ ಮಾಹಿತಿಯನ್ನು ಓದಲು ಪ್ರಾರಂಭಿಸುತ್ತಾರೆ. ಈ ವಿಡಿಯೋವನ್ನು ಫಾಕ್ಸ್​ 9 ಯುಟ್ಯೂಬ್​ಗೆ ಪೋಸ್ಟ್​ ಮಾಡಿದೆ. ವಿಡಿಯೋ ನೋಡಿದ ನೆಟ್ಟಿಗರು ಈ ಕುರಿತು ಕಾಮೆಂಟ್​ ಮಾಡಿದ್ದು, ತಾಂತ್ರಿಕ ದೋಷದ ಬಳಿಕವು ಆಂಕರ್​​ ಯಾವುದೇ ಗಡಿಬಿಡಿಯಿಲ್ಲದೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಜೆನ್ನಿಫರ್​, ತಾಂತ್ರಿಕ ದೋಷವನ್ನು ತಮಾಷೆಯಾಗಿ ನಿರ್ವಹಿಸದಿದ್ದರೆ, ಜನರು ಇದನ್ನು ಸಾಮಾನ್ಯವಾದ ಒಂದು ವಿಡಿಯೋವಾಗಿ ನೋಡಿತ್ತಿದ್ದರಷ್ಟೆ, ಸಮಯವನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಡಿಯೋ ಇದುವರೆಗೆ 5 ಲಕ್ಷ 11 ಸಾವಿರ 675 ಬಾರಿ ವೀಕ್ಷಣೆಗಳನ್ನು ಪಡೆದಿದೆ. ಆ್ಯಂಕರ್​, ಸಮಯಕ್ಕೆ ತಕ್ಕಂತೆ ತಾಂತ್ರಿಕ ದೋಷವನ್ನೂ ಅರಿತು ಸಮಯವನ್ನು ನಿಭಾಯಿಸಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶಾರುಖ್​ ಖಾನ್​ ಮಗ ಆರ್ಯನ್​ಗೆ ಅಮೆರಿಕ ವಿವಿಯಲ್ಲಿ ಪದವಿ ಪ್ರದಾನ; ಫೋಟೋ ವೈರಲ್​

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು