Smiling Buddha: ಕೊನೆಗೂ ಬುದ್ಧ ನಗುಬೀರಿದ: ಭಾರತದ ಮೊದಲ ನ್ಯೂಕ್ಲಿಯರ್ ಪರೀಕ್ಷೆ ಪೋಖ್ರಾನ್​ನಲ್ಲಿ ನಡೆದು ಇಂದಿಗೆ 47 ವರ್ಷ

ಆ ವರ್ಷ ಬುದ್ಧ ಪೂರ್ಣಿಮೆ ದಿನವೇ ಪರೀಕ್ಷೆ ನಡೆಸಿದ ಕಾರಣ ಸ್ಮೈಲಿಂಗ್ ಬುದ್ಧ ಎಂದು ನಾಮಕರಣ ಮಾಡಿದ್ದರು ಮತ್ತು ನ್ಯೂಕ್ಲಿಯರ್ ಪರೀಕ್ಷೆ ಯಶಸ್ವಿಯಾದ ತಕ್ಷಣ ಬಾಬಾ ಅಟಾಮಿಕ್ ರಿಸರ್ಚ್​ ಸೆಂಟರ್​ನ ನಿರ್ದೇಸಕರಾಗಿದ್ದ ರಾಜಾರಾಮಣ್ಣ ಕೊನೆಗೂ ಬುದ್ಧ ನಗುಬೀರಿದ ಎಂದು ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಹೇಳಿದ್ದರು ಎನ್ನುವುದು ವಿಶೇಷ.

Smiling Buddha: ಕೊನೆಗೂ ಬುದ್ಧ ನಗುಬೀರಿದ: ಭಾರತದ ಮೊದಲ ನ್ಯೂಕ್ಲಿಯರ್ ಪರೀಕ್ಷೆ ಪೋಖ್ರಾನ್​ನಲ್ಲಿ ನಡೆದು ಇಂದಿಗೆ 47 ವರ್ಷ
ಪೋಖ್ರಾನ್​ ಪರೀಕ್ಷೆ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಇಂದಿರಾ ಗಾಂಧಿ (ಚಿತ್ರ: ಹಿಂದೂಸ್ಥಾನ್​ ಟೈಮ್ಸ್​)
Follow us
Skanda
| Updated By: Digi Tech Desk

Updated on:May 18, 2021 | 11:43 AM

ಭಾರತ ಅತ್ಯಂತ ಯಶಸ್ವಿಯಾಗಿ ಮೊಟ್ಟ ಮೊದಲ ನ್ಯೂಕ್ಲಿಯರ್ ಪರೀಕ್ಷೆ ಪೂರೈಸಿ ಇಂದಿಗೆ 47 ವರ್ಷವಾಗಿದೆ. ರಾಜಸ್ತಾನದ ಪೋಖ್ರಾನ್​ನಲ್ಲಿ 1974ರ ಮೇ.18 ರಂದು ಸ್ಮೈಲಿಂಗ್ ಬುದ್ಧ ಎಂಬ ಹೆಸರಿನೊಂದಿಗೆ ಮಾಡಿದ ಈ ಪರೀಕ್ಷೆ ಭಾರತದ ಇತಿಹಾಸದ ಪುಟದಲ್ಲಿ ಅಚ್ಚಳಿಯದ ಸಂಗತಿ. ಆ ವರ್ಷ ಬುದ್ಧ ಪೂರ್ಣಿಮೆ ದಿನವೇ ಪರೀಕ್ಷೆ ನಡೆಸಿದ ಕಾರಣ ಸ್ಮೈಲಿಂಗ್ ಬುದ್ಧ ಎಂದು ನಾಮಕರಣ ಮಾಡಿದ್ದರು ಮತ್ತು ನ್ಯೂಕ್ಲಿಯರ್ ಪರೀಕ್ಷೆ ಯಶಸ್ವಿಯಾದ ತಕ್ಷಣ ಬಾಬಾ ಅಟಾಮಿಕ್ ರಿಸರ್ಚ್​ ಸೆಂಟರ್​ನ ನಿರ್ದೇಸಕರಾಗಿದ್ದ ರಾಜಾರಾಮಣ್ಣ ಕೊನೆಗೂ ಬುದ್ಧ ನಗುಬೀರಿದ ಎಂದು ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಹೇಳಿದ್ದರು ಎನ್ನುವುದು ವಿಶೇಷ.

ಅಂದಿನ ಮಟ್ಟಿಗೆ ಯುಎನ್​ಎಸ್​ಸಿ (United Nations Security Council) ಶಾಶ್ವತ ಸದಸ್ಯತ್ವ ಹೊಂದಿಲ್ಲದ ರಾಷ್ಟ್ರವೊಂದು ಅಧಿಕೃತವಾಗಿ ನ್ಯೂಕ್ಲಿಯರ್ ಪರೀಕ್ಷೆ ನಡೆಸಿದ್ದು ಅದೇ ಮೊದಲಾಗಿದ್ದು, ಅದರಲ್ಲಿ ಯಶಸ್ವಿಯೂ ಆಯಿತೆಂಬುದು ಗಮನಾರ್ಹ. ಸದರಿ ನ್ಯೂಕ್ಲಿಯರ್​ ಪರೀಕ್ಷೆ ಸಾಕಷ್ಟು ಚರ್ಚೆಗೊಳಗಾಗಿತ್ತಲ್ಲದೇ ಅಮೆರಿಕಾ ಹಾಗೂ ವಿಶ್ವದ ಇನ್ನಿತರ ಯಾವುದೇ ಗುಪ್ತಚರ ಇಲಾಖೆಗೆ ಗೊತ್ತಾಗದಂತೆ ಭಾರತ ಇದನ್ನು ನಿರ್ವಹಿಸಿತ್ತು ಎನ್ನುವುದು ಸಹ ಸಾಕಷ್ಟು ಕುತೂಹಲಕಾರಿ. ಅಲ್ಲದೇ ಇದರ ಬೆನ್ನಲ್ಲೇ ಭಾರತಕ್ಕೆ ಅಮೆರಿಕಾದಂತಹ ರಾಷ್ಟ್ರಗಳು ನ್ಯೂಕ್ಲಿಯರ್ ಪ್ರಸರಣಕ್ಕೆ ಈ ಪರೀಕ್ಷೆ ಕಾರಣವಾಗಲಿದೆ ಎಂಬ ನೆಪವೊಡ್ಡಿ ಹಲವು ನಿರ್ಬಂಧಗಳನ್ನೂ ಒಡ್ಡಿದ್ದವು.

ಅವತ್ತಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ 1972ರ ಸೆಪ್ಟೆಂಬರ್​ನಲ್ಲಿ ಬಾಬಾ ಅಟಾಮಿಕ್ ರಿಸರ್ಚ್​ ಸೆಂಟರ್​ ವಿಜ್ಞಾನಿಗಳಿಗೆ ಪರೀಕ್ಷೆ ನಡೆಸಲು ಸಿದ್ಧತೆ ನಡೆಸುವಂತೆ ಹೇಳಿದ್ದರಾದರೂ ಅದು ನೆರವೇರಲು ಸುಮಾರು 2 ವರ್ಷ ಬೇಕಾಯಿತು. 1974ರ ಯಶಸ್ಸಿನ ನಂತರ 1998ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲಾವಧಿಯಲ್ಲಿ ಅದೇ ಸ್ಥಳದಲ್ಲಿ ಪೋಖ್ರಾನ್ 2 ಪರೀಕ್ಷೆ ನಡೆಸಲಾಯಿತು. ಮೇ 1998ರಲ್ಲಿ ನಡೆದ ಈ ಪರೀಕ್ಷೆಯು ಐದು ಸರಣಿ ನ್ಯೂಕ್ಲಿಯರ್ ಸ್ಪೋಟಗಳಿಗೆ ಸಾಕ್ಷಿಯಾಗಿತ್ತು. ಅಂದಿನಿಂದ ಪೋಖ್ರಾನ್ 2 ನೆನಪಿಗಾಗಿ ಪ್ರತಿವರ್ಷ ಮೇ 11ನೇ ತಾರೀಖನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: National Technology Day: ರಾಷ್ಟ್ರೀಯ ತಂತ್ರಜ್ಞಾನ ದಿನ ಇತಿಹಾಸ, ಮಹತ್ವ, ಈ ವರ್ಷದ ಘೋಷವಾಕ್ಯ ಏನು?

Published On - 11:30 am, Tue, 18 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ