Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಿಯಾಟಕ್ಕೆ ಹೊಣೆ ಯಾರು? ಕೊರೊನಾ ಸೋಂಕಿಗೆ ಅವಳಿ ಪುತ್ರರನ್ನು ಕಳೆದುಕೊಂಡ ಪೋಷಕರು

ತಮ್ಮ ಅವಳಿ ಮಕ್ಕಳಿಬ್ಬರನ್ನೂ ಕಳೆದುಕೊಂಡು ಪೋಷಕರು ನರಳುತ್ತಿರುವ ಘಟನೆಯೊಂದು ಮೀರತ್​​ನಲ್ಲಿ ನಡೆದಿದೆ. ಈ ಘಟನೆ ಎಂಥವರಿಗೂ ಮನಕಲಕುವಂತಿದೆ.

ವಿಧಿಯಾಟಕ್ಕೆ ಹೊಣೆ ಯಾರು? ಕೊರೊನಾ ಸೋಂಕಿಗೆ ಅವಳಿ ಪುತ್ರರನ್ನು ಕಳೆದುಕೊಂಡ ಪೋಷಕರು
Follow us
shruti hegde
|

Updated on: May 18, 2021 | 12:36 PM

ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರು ಅದೆಷ್ಟೋ ಮಂದಿ. ಮಕ್ಕಳು ಪೋಷಕರನ್ನು ಕಳೆದುಕೊಂಡು ನೋವು ಅನುಭವಿಸುತ್ತಿದ್ದರೆ, ಇನ್ನು ಕೆಲವೆಡೆ ಪೋಷಕರು ಹೆತ್ತ ಮಕ್ಕಳನ್ನು ಕಳೆದುಕೊಂಡು ದುಃಖಿಸುತ್ತಿದ್ದಾರೆ. ಇಲ್ಲಿ ತಮ್ಮ ಅವಳಿ ಮಕ್ಕಳಿಬ್ಬರನ್ನೂ ಕಳೆದುಕೊಂಡು ಪೋಷಕರು ನರಳುತ್ತಿರುವ ಘಟನೆಯೊಂದು ನಡೆದಿದೆ. ಈ ಘಟನೆ ಎಂಥವರಿಗೂ ಮನಕಲಕುವಂತಿದೆ.

ಮೂಲತಃ ಹೈದರಾಬಾದ್​ನಲ್ಲಿ ಇಂಜಿನಿಯರ್​ಆಗಿ ಜೋಫ್ರೆಡ್​ ವರ್ಗೀಸ್​ ಗ್ರೆಗೊರಿ ಮತ್ತು ರಾ​ಲ್ಫ್ರೆಡ್​​ ಜಾರ್ಜ್​ ಗ್ರೆಗೊರಿ ಕೆಲಸ ನಿರ್ವಹಿಸುತ್ತಿದ್ದರು. ಏಪ್ರಿಲ್​ 24ನೇ ತಾರೀಕಿನಂದು ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿತು. ಸೋಂಕಿನ ತೀವ್ರತೆಯಿಂದ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು. ಸುದೀರ್ಘವಾಗಿ ಸೋಂಕಿಗೆ ಹೋರಾಡಿದರೂ ಚಿಕಿತ್ಸೆಗೆ ದೇಹ ಸ್ಪಂದಿಸದೇ ಕಳೆದ ವಾರ ನಿಧನರಾಗಿದ್ದಾರೆ.

ಅವಳಿ-ಜವಳಿ ಪುತ್ರರ ಕುರಿತಾಗಿ ಮಾತನಾಡಿದ ಅವರ ತಂದೆ, ‘ಅವರಿಬ್ಬರೂ ಬದುಕುವಾಗ ಒಟ್ಟಿಗೇ ಬದುಕಿದ್ದರೂ, ಸಾಯುವಾಗಲೂ ಜೊತೆಗಿದ್ದಾರೆ. ಒಬ್ಬರಿಗೆ ಕೊರೊನಾ ಸೋಂಕು ತಗುಲಿದ್ದೇ ತಡ ಇನ್ನೋರ್ವನಿಗೂ ಸೋಂಕು ತಗುಲಿದೆ. ಒಬ್ಬ ಮಗ ಸೋಂಕಿನ ತೀವ್ರತೆಯಿಂದ ನಿಧನಾಗುತ್ತಿದ್ದಂತೆಯೇ ಮತ್ತೋರ್ವನಿಗೂ ಸೊಂಕಿನ ತೀವ್ರತೆ ಹೆಚ್ಚಾಗತೊಡಗಿತು. ಆತನೂ ನಿಧನನಾಗಿದ್ದಾನೆ ಎಂದು ನೋವು ಹಂಚಿಕೊಂಡಿದ್ದಾರೆ.

ಪುತ್ರರ ಆಸೆ ಮತ್ತು ಕನಸಿನ ಕುರಿತಾಗಿ ಮಾತನಾಡಿದ ಅವರ ತಂದೆ, ಶಿಕ್ಷಣಕ್ಕಾಗಿ ಇಬ್ಬರೂ ಪೋಷಕರ ಬಳಿ ಪಡೆದ ಹಣವನ್ನು, ತಾವು ಸ್ವಂತ ದುಡಿದು ತೀರುಸುವತ್ತ ನನ್ನ ಬಳಿ ಮಾತನಾಡುತ್ತಿದ್ದರು. ಮತ್ತು ಕೆಲಸಕ್ಕಾಗಿ ಕೊರಿಯಾ ಮತ್ತು ಜರ್ಮಿನಿಗೆ ಹೋಗುವ ಕನಸು ಕಂಡಿದ್ದರು ಎಂದು ಪುತ್ರರ ಕುರಿತಾಗಿ ಹೇಳಿದ್ದಾರೆ.

ಅವಳಿಗಳಿಗೆ, ಮೊದಲು ಮಾಡಿಸಿದ ಆರ್​ಟಿ-ಪಿಸಿಆರ್​ ಪರೀಕ್ಷೆಯಲ್ಲಿ ಕೊವಿಡ್​ ಪಾಸಿಟಿವ್​​​​ ವರದಿ ದಾಖಲಾಯಿತು. ಅದಾದ ಕೆಲವು ದಿನಗಳ ಬಳಿಕ ಎರಡನೇ ಆರ್​ಟಿ-ಪಿಸಿಆರ್​ ಪರೀಕ್ಷೆಯಲ್ಲಿ ನೆಗೆಟಿವ್​​​ ವರದಿ ಬಂದಿತ್ತು. ಹಾಗಾಗಿ ಆಸ್ಪತ್ರೆಯ ಸಿಬ್ಬಂದಿ ಅವಳಿ ಮಕ್ಕಳನ್ನು ಕೊವಿಡ್​ ವಾರ್ಡ್​ನಿಂದ ಸಾಮಾನ್ಯ ಐಸಿಯು ವಾರ್ಡ್​ಗೆ ಸ್ಥಳಾಂತರ ಮಾಡಲು ನಿರ್ಧರಿಸಿದ್ದರು. ಆದರೆ, ಇನ್ನೆರಡು ದಿನಗಳ ಕಾಲ ಮಕ್ಕಳ ಚಿಕಿತ್ಸೆಗಾಗಿ ಕೊವಿಡ್​ ವಾರ್ಡ್​ನಲ್ಲಿಯೇ ಇರಲಿ ಇಂದು ತಂದೆ ಕೋರಿಕೆಯ ಮೇರೆಗೆ ಕೊವಿಡ್​ ವಾರ್ಡ್​ನಲ್ಲಿಯೇ ಇರಿಸಲಾಗಿತ್ತು.

ಎರಡು ದಿನಗಳ ಬಳಿಕ ಜೋಸೆಫ್ ಅವರು ನಿಧನರಾದರು. ರಾಲ್ಫ್ರೆಡ್ ಕೂಡಾ ಗಂಭೀರ ಸ್ಥಿತಿಯಲ್ಲಿದ್ದರು. ಕೊನೆ ಕ್ಷಣದಲ್ಲಿ ಅವರ ತಾಯಿಯೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ ರಾಲ್ಫ್ರೆಡ್ ಅವರಿಗೆ, ತಾಯಿ ಧೈರ್ಯ ತುಂಬುತ್ತಿದ್ದರು. ಆದರೆ ಆತನ ಆರೋಗ್ಯದ ಸ್ಥಿತಿಯಿಂದ ಬದುಕುವುದಿಲ್ಲ ಎಂಬ ಸತ್ಯವನ್ನು ಆತ ಮನಗಂಡಿದ್ದ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್ ಬೆಡ್ ಸಿಗದೆ ದಾವಣಗೆರೆ ಜಿಲ್ಲಾ ಕೊವಿಡ್ ಆಸ್ಪತ್ರೆ ಆವರಣದಲ್ಲಿ ಮಹಿಳೆ ಸಾವು