ಆಕ್ಸಿಜನ್ ಬೆಡ್ ಸಿಗದೆ ದಾವಣಗೆರೆ ಜಿಲ್ಲಾ ಕೊವಿಡ್ ಆಸ್ಪತ್ರೆ ಆವರಣದಲ್ಲಿ ಮಹಿಳೆ ಸಾವು
64 ವರ್ಷದ ದುರ್ಗಮ್ಮ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಕೊವಿಡ್ ವರದಿ ನೆಗೆಟಿವ್ ಬಂದಿತ್ತು. ಉಸಿರಾಟ ಪ್ರಮಾಣ 60 ರಷ್ಟಿತ್ತು. ಆಕ್ಸಿಜನ್ಗಾಗಿ ಪರದಾಟ ಶುರುವಾಗಿತ್ತು. ಹೀಗಾಗಿ ಚಿಕಿತ್ಸೆಗಾಗಿ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಸೂಕ್ತ ಸಮಯಕ್ಕೆ ಆಕ್ಸಿಜನ್ ಬೆಡ್ ಸಿಗದ ಹಿನ್ನೆಲೆ ದುರ್ಗಮ್ಮ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಕಾರಣ ಸೋಂಕಿತರಿಗೆ ಆಕ್ಸಿಜನ್ ಬೆಡ್ಗಳ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡರು ಕೆಲವು ಕಡೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆಕ್ಸಿಜನ್ ಬೆಡ್ ಸಿಗದೆ ಮಹಿಳೆಯೊಬ್ಬರು ದಾವಣಗೆರೆ ಜಿಲ್ಲಾ ಕೊವಿಡ್ ಆಸ್ಪತ್ರೆ ಆವರಣದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ತಡರಾತ್ರಿ ನಡೆದಿದ್ದು, ಮೃತ ಮಹಿಳೆ ದಾವಣಗೆರೆ ನಗರದ ರಾಜೀವ್ ಗಾಂಧಿ ಬಡಾವಣೆ ನಿವಾಸಿ ದುರ್ಗಮ್ಮ ಎಂದು ತಿಳಿದುಬಂದಿದೆ.
64 ವರ್ಷದ ದುರ್ಗಮ್ಮ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಕೊವಿಡ್ ವರದಿ ನೆಗೆಟಿವ್ ಬಂದಿತ್ತು. ಉಸಿರಾಟ ಪ್ರಮಾಣ 60 ರಷ್ಟಿತ್ತು. ಆಕ್ಸಿಜನ್ಗಾಗಿ ಪರದಾಟ ಶುರುವಾಗಿತ್ತು. ಹೀಗಾಗಿ ಚಿಕಿತ್ಸೆಗಾಗಿ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಸೂಕ್ತ ಸಮಯಕ್ಕೆ ಆಕ್ಸಿಜನ್ ಬೆಡ್ ಸಿಗದ ಹಿನ್ನೆಲೆ ದುರ್ಗಮ್ಮ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವೆಂಟಿಲೇಟರ್ ಬೆಡ್ ಸಿಗದೆ ಮೂವರು ಬಲಿ ಗದಗ: ಜಿಲ್ಲೆಯ ರೋಣ ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಸಿಗದೆ ಕೊರೊನಾಗೆ ಮೂವರು ಬಲಿಯಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಿನ್ನೆಲೆ ಮೂವರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ವೆಂಟಿಲೇಟರ್ ಅಗತ್ಯತೆ ಬಗ್ಗೆ ತಿಳಿಸಿದ್ದರು. ಆದರೆ ವೆಂಟಿಲೇಟರ್ ಬೆಡ್ ಸಿಗದೆ ಮೂವರು ನರಳಿ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಹೊಳೆಆಲೂರು ಗ್ರಾಮದ 56 ವರ್ಷದ ಸೋಂಕಿತ, ಮುದೇನಗುಡಿ ಗ್ರಾಮದ ಸರೋಜಾ ಉಳ್ಳಾಗಡ್ಡಿ (60), ರೋಣ ಮೂಲದ ಆರ್ ಕಳಸಣ್ಣವರ (58) ಎಂಬ ನಾನ್ ಕೊವಿಡ್ ರೋಗಿ ನಿನ್ನೆ ಮೃತಪಟ್ಟಿದ್ದಾರೆ. ಸೋಂಕಿಗೆ ಎಎಸ್ಐ ಶಾಂತರಾಜು ಬಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ಪೂರ್ವ ಠಾಣೆ ಎಎಸ್ಐ ಶಾಂತರಾಜು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಠಾಣೆ ಎಎಸ್ಐ ಶಾಂತರಾಜು (57)ಗೆ ಕಳೆದ ಒಂದು ವಾರದ ಕೆಳಗೆ ಸೋಂಕು ಕಾಣಿಸಿಕೊಂಡಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸೋಂಕಿಗೆ ಕೃಷಿ ಇಲಾಖೆಯ ಅಧಿಕಾರಿ ಬಲಿ ಮಂಡ್ಯ: ಮಹಾಮಾರಿ ಕೊರೊನಾ ಸೋಂಕಿನಿಂದ ಕೃಷಿ ಇಲಾಖೆಯ ಅಧಿಕಾರಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಪಾಂಡವಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತೌಸೀಫ್ ಅಹ್ಮದ್ ಮೃತಪಟ್ಟ ಅಧಿಕಾರಿ. 35 ವರ್ಷದ ತೌಸೀಫ್ ಅಹಮದ್ ಪಾಂಡವಪುರ ತಾಲೂಕಿನ ದಾಮಡಹಳ್ಳಿ ಗ್ರಾಮದ ಹುಣಸೂರಿನಲ್ಲಿ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿದ್ದರು.
ಇದನ್ನೂ ಓದಿ
ವಿದ್ಯುತ್ ಗುತ್ತಿಗೆದಾರರ ನಿರ್ಲಕ್ಷ್ಯ, ವಿದ್ಯುತ್ ತಂತಿ ಸ್ಪರ್ಶಿಸಿ ಬೈಕ್ ಸವಾರ ಸಾವು
ಕೊರೊನಾ ಸೋಂಕು ಗ್ರಾಮಗಳಲ್ಲಿ ಹರಡದಂತೆ ಎಚ್ಚರಿಕೆ; ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ ದಾವಣಗೆರೆ ಜಿಲ್ಲಾಡಳಿತ
(Woman died in davanagere district covid hospital premises Without getting an oxygen bed)