Viral Video: ಟೆನ್-ಪಿನ್ ಬೌಲಿಂಗ್ ಆಡಿದ ಅಜ್ಜಿ, ಒಂದೇ ಬೌಲಿಂಗ್ಗೆ ಸ್ಟ್ರೈಕ್; ಅಜ್ಜಿಯ ಸಾಮರ್ಥ್ಯಕ್ಕೆ ನೆಟ್ಟಿಗರ ಪ್ರಶಂಸೆ
ಟೆನ್-ಪಿಂಗ್ ಬೌಲಿಂಗ್ ಆಟ ಆಡಿದ ಆಡಿದ ಅಜ್ಜಿ ನೋಡಿ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೀವೂ ನೋಡಿ..
ವಯಸ್ಸು ಸಂಖ್ಯೆಯಷ್ಟೇ.. ಆಟ ಆಡಲು ಶಕ್ತಿ, ಸಾಮರ್ಥ್ಯವಿದ್ದರೆ ಸಾಕು. ಯಾವ ವಯಸ್ಸಿನಲ್ಲೂ ಆಡಿ ಗೆಲ್ಲಬಹುದು ಎಂಬುದಕ್ಕೆ ಉತ್ತಮ ಉದಾಹಣೆಯಾಗಿ ಇಲ್ಲೋರ್ವ ವೃದ್ಧೆಯಿದ್ದಾರೆ. ಇವರು ಟೆನ್-ಪಿಂಗ್ ಬೌಲಿಂಗ್ ಆಟ ಆಡಿದ ವಿಡಿಯೋವನ್ನು ಸುದರ್ಶನ್ ಕೃಷ್ಣಮೂರ್ತಿ ಎನ್ನುವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅಜ್ಜಿಯ ಕೌಶಲ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಜ್ಜಿ ಹಳದಿ ಬಣ್ಣದ ಸೀರೆಯುಟ್ಟು ಮುಖಗವಸು ಧರಿಸಿ, ಕಾಲಿಗೆ ಶೂ ಹಾಕಿಕೊಂಡು ಆಟಕ್ಕೆಂದು ಸಿದ್ಧರಾಗಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಕೈಯಲ್ಲಿ ಚೆಂಡು ಹಿಡಿದು ಬಾಲ್ ಟ್ರ್ಯಾಕ್ ಮೂಲಕ ಚೆಂಡನ್ನು ಎಸೆಯುತ್ತಾರೆ. ಎಲ್ಲಾ ಪಿನ್ಗಳು ನೆಲಕ್ಕುರುಳಿ ಸ್ಟ್ರೈಕ್ ಆಗುತ್ತದೆ. ಅಜ್ಜಿ ಒಮ್ಮೆಲೆ ಹಿಂತಿರುಗಿದಾಗ ಮುಖದಲ್ಲಿನ ನಗು ಆಟ ಗೆದ್ದ ಖುಷಿಯನ್ನು ತೋರಿಸುತ್ತದೆ.
ಹಾಯ್ ಟ್ವಿಟರ್, ದಯವಿಟ್ಟು ನನ್ನ ಅಜ್ಜಿ ಸೀರೆಯುಟ್ಟು ಸ್ಟ್ರೈಕ್ ಬೌಲಿಂಗ್ ಮಾಡುವುದನ್ನು ನೋಡಿ ಪ್ರಶಂಸೆ ನೀಡಿ, ಆಟ ಗೆದ್ದ ಖುಷಿಯಲ್ಲಿ ತನ್ನ ಮುಖಗವಸನ್ನು ಮೂಗಿಗೆ ಮುಚ್ಚಿಕೊಳ್ಳುತ್ತಾ ಸಂತೋಷದಿಂದ ಹಿಂತಿರುಗುತ್ತಾರೆ ಎಂಬುದಾಗಿ ಸುದರ್ಶನ್ ಕೃಷ್ಣಮೂರ್ತಿಯವರು ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವಯಸ್ಸಿಗೆ ಸವಾಲು ಒಡ್ಡಿ, ಮನಸ್ಸಿಗೆ ಖುಷಿ ನೀಡುವ ಆಟಗಳನ್ನು ಆಡುತ್ತಾ ಆರೋಗ್ಯವಾಗಿರುವ ಅಜ್ಜಿಯಂದಿರನ್ನು ನೋಡಿದರೆ ಮನಸ್ಸಿಗೆ ಖುಷಿ ಸಿಗುವುದಂತೂ ಸತ್ಯ. ಮಕ್ಕಳು ತಮಾಷೆ ಮಾಡುತ್ತಾ, ಮೊಮ್ಮಕ್ಕಳೊಂದಿಗೆ ತರಲೆ ಮಾಡುತ್ತಾ ಖುಷಿಯಿಂದಿರುವ ಅಜ್ಜ-ಅಜ್ಜಿಯರು, ವಯಸ್ಸು ಕೇಲವ ಸಂಖ್ಯೆಯಷ್ಟೇ ಎಂಬುದನ್ನು ಸಾರಿ ಹೇಳುತ್ತಾರೆ.
ಅಜ್ಜಿ ಆಡಿದ ಸ್ಟ್ರೈಕ್ ಬೌಲಿಂಗ್ ಆಟ ಸಾಮಾಜಿಕ ಜಾಲತಾಣದಲ್ಲಿ 4,31,100 ವೀಕ್ಷಣೆ ಗಳಿಸಿಕೊಂಡಿದೆ. ಈ ಮೂಲಕ ಅಜ್ಜಿ ನೆಟ್ಟಿಗರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ‘ಜೀವನವನ್ನು ಹೇಗೆ ನಿಭಾಯಿಸಬೇಕು ಜೊತೆಗೆ ಜೀವನದಲ್ಲಿ ಹೇಗೆ ದೃಢವಾಗಿರಬೇಕು ಎಂಬುದನ್ನು ಅಜ್ಜಿ ಹೇಳಿಕೊಟ್ಟಿದ್ದಾರೆ. ಈ ಪ್ರಸ್ತುತ ಸಮಯದಲ್ಲಿ ಮುಖಗವಸನ್ನು ಧರಿಸಿದ ಅಜ್ಜಿ, ಸುರಕ್ಷತಾ ಕ್ರಮವನ್ನು ಅನುಸರಿಸಿ ಎನ್ನುವ ಸಂದೇಶವನ್ನು ಸಾರುತ್ತಿದ್ದಾರೆ’. ಇವರನ್ನು ನೋಡಿ ಇದೀಗ ನನ್ನ ಅಜ್ಜಿ ನನಗೆ ನೆನಪಾಗುತ್ತಿದ್ದಾರೆ ಎಂದು ನೆಟ್ಟಿಗರೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
Hi Twitter, please appreciate my grandma bowling a strike in her saree, and then proceeding to ensure her mask covers her nose#QueenShit, if you ask me! ?? pic.twitter.com/T3g4x5dpbk
— Sudarshan Krishnamurthy (@sudkrish) May 17, 2021