Viral Video: ಮಣ್ಣಿನ ರಾಡಿಯಲ್ಲಿ ಬಿದ್ದು-ಎದ್ದೇಳಲು ಹೆಣಗಾಡುತ್ತಿದ್ದ ಆನೆ ದೃಶ್ಯ ಸೆರೆ; ವೈರಲ್ ಆಯ್ತು ವಿಡಿಯೋ
ಮಣ್ಣಿನ ರಾಡಿಯಲ್ಲಿ ಆನೆ ಸಿಲುಕಿಕೊಂಡು ಒದ್ದಾಡುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಆನೆಯನ್ನು ರಕ್ಷಿಸಿದ ಸಿಬ್ಬಂದಿಗೆ ನೆಟ್ಟಿಗರು ಶ್ಲಾಘಿಸಿದ್ದಾರೆ.
ಮಣ್ಣಿನ ರಾಡಿಯಲ್ಲಿ ಬಿದ್ದು- ಎದ್ದೇಳಲು ಸಾಧ್ಯವಾಗದೇ ಒದ್ದಾಡುತ್ತಿದ್ದ ಆನೆಯನ್ನು ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಧಿಕಾರಿಗಳು ರಕ್ಷಿಸಿದ್ದಾರೆ. ಬಂಡೀಪುರದ ಟೈಗರ್ ರಿಸರ್ವ್ ಭಾನುವಾರ ವಿಡಿಯೋ ಕ್ಲಿಪ್ಅನ್ನು ಟ್ವೀಟ್ ಮಾಡುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋ ಕ್ಲಿಪ್ನಲ್ಲಿ ನೋಡುವಂತೆ ಆನೆಯೊಂದು ಮಣ್ಣಿನ ಕೆಸರಿನಲ್ಲಿ ಸಿಲುಕಿಕೊಂಡು ಎದ್ದೇಳಲು ಕಸರತ್ತು ಮಾಡುತ್ತಿತ್ತು. ಮಣ್ಣಿನ ರಾಡಿಯಲ್ಲಿ ಇದ್ದಿದ್ದರಿಂದ ಕಾಲು ಜಾರುತ್ತಿತ್ತು. ಆದರೂ ಪ್ರಯತ್ನ ಬಿಡದೇ ತನ್ನ ಕಾಲುಗಳನ್ನು ನೆಲಕ್ಕೆ ಊರಲು ಒಂದೇ ಸಮನೆ ಪ್ರಯತ್ನಿಸುತ್ತಿತ್ತು. ಕೊನೆಗೂ ಮೇಲೇರಲು ಸಾಧ್ಯವಾಗಲೇ ಇಲ್ಲ . ಇದನ್ನು ಗಮನಿಸಿದ ಅರಣ್ಣ ಸಿಬ್ಬಂದಿ ಜೆಸಿಬಿಯಿಂದ ಆನೆಯನ್ನು ಮುಂದಕ್ಕೆ ದೂಡಿದರು. ಮಣ್ಣಿನ ರಾಡಿ ಬಿಟ್ಟು ಸಮವಾದ ನೆಲಕ್ಕೆ ಆನೆ ಸೇರಿತು. ಆ ಬಳಿಕ ಆನೆ ನಿಧಾನವಾಗಿ ಕಾಲುಗಳನ್ನು ನೆಲಕ್ಕೆ ಊರಿ ಮೇಲೆದ್ದು ನಿಂತಿತು.
One female elephant, stuck in the fresh mud puddle in Moleyur range of Bandipur Tiger Reserve, rescued successfully.@ntca_india @ArvindLBJP @aranya_kfd @kudremukh_wild @brt_tiger @DharwadForest @nagaraholetr @moefcc pic.twitter.com/U4ZTvFzd1D
— Bandipur Tiger Reserve (@Bandipur_TR) May 16, 2021
ಭಾರತೀಯ ಅರಣ್ಯ ಸೇವೆಯ ರಮೇಶ್ ಪಾಂಡೆ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿ, ‘ಮಣ್ಣಿನ ರಾಡಿಯಲ್ಲಿ ಅಥವಾ ಜಾರುವ ನೆಲದಲ್ಲಿ ತೂಕದ ಪ್ರಾಣಿ ಬಿದ್ದರೆ ಅವುಗಳಿಗೆ ಮೇಲೆರಲು ಸಾಧ್ಯವಾಗುವುದಿಲ್ಲ. ಆನೆಯು ತುಂಬಾ ದಣಿದಿತ್ತು. ಜಾರುವ ಮಣ್ಣಿನಿಂದ ಹೊರಬರಲು ಸಹಾಯ ಮಾಡಿದ ಬಂಡೀಪುರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
Sometimes wrong posture coupled with heavy weight in a slushy ground can make an elephant helpless. Thanks to officials and staffs of @Bandipur_TR for timely nudge to the female elephant. She had exhausted. Kudos to all involved in this rescue. VC: BTR pic.twitter.com/Sx2e6tZiTm
— Ramesh Pandey (@rameshpandeyifs) May 16, 2021
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿದ್ದಂತೆಯೇ, ಆನೆಯನ್ನು ರಕ್ಷಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರು. ಓರ್ವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ‘ಆನೆ ತುಂಬಾ ಹಸಿವಿನಿಂದ ಬಳಲುತ್ತಿತ್ತು’ ಎಂದು ಬರೆದುಕೊಂಡಿದ್ದಾರೆ. ಇನ್ನೋರ್ವರು ‘ತುಂಬಾ ಒಳ್ಳೆಯ ಕೆಲಸ’ ಎಂಬುದಾಗಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೈತ್ಯಾಕಾರದ ಆನೆ ಕ್ರಿಕೆಟ್ ಆಡುವುದನ್ನು ನೋಡಿದರೆ ನೀವೂ ಆಶ್ಚರ್ಯಪಡ್ತೀರಾ; ಇಲ್ಲಿದೆ ವಿಡಿಯೋ