ದೈತ್ಯಾಕಾರದ ಆನೆ ಕ್ರಿಕೆಟ್​ ಆಡುವುದನ್ನು ನೋಡಿದರೆ ನೀವೂ ಆಶ್ಚರ್ಯಪಡ್ತೀರಾ; ಇಲ್ಲಿದೆ ವಿಡಿಯೋ

ದೈತ್ಯಾಕಾರದ ಆನೆ ಕ್ರಿಕೆಟ್​ ಆಡುವುದನ್ನು ನೋಡಿದರೆ ನೀವೂ ಆಶ್ಚರ್ಯಪಡ್ತೀರಾ; ಇಲ್ಲಿದೆ ವಿಡಿಯೋ
ಕ್ರಿಕೆಟ್​ ಆಡುತ್ತಿರುವ ದೈತ್ಯಾಕಾರದ ಆನೆ

ದೈತ್ಯಾಕಾರದ ಆನೆ ಸ್ಟೈಲ್ ಆಗಿ ಬ್ಯಾಟ್​ ಹಿಡಿದು ಕ್ರಿಕೆಟ್​ ಆಡಲು ನಿಂತಿದೆ. ಚೆಂಡು ಎದುರು ಬರುತ್ತಿದ್ದಂತೆ ತನ್ನ ಸೊಂಡಿಲಿನಿಂದ ಹಿಡಿದ ಬ್ಯಾಟ್​ ಮೂಲಕ ಬೀಸಿ ಬೀಸಿ ಚೆಂಡನ್ನು ಹೊಡೆಯುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.

shruti hegde

|

May 10, 2021 | 3:30 PM

ದೇಶದೆಲ್ಲೆಡೆ ಕೊರೊನಾ ವೈರಸ್​ ವ್ಯಾಪಕವಾಗಿ ಹರಡುವಿಕೆಯಿಂದ ಈ ಬಾರಿಯ ಐಪಿಎಲ್​ ಕ್ರಿಕೆಟ್​ ಪಂದ್ಯಾವಳಿಯನ್ನು ಮುಂದೂಡಲಾಯಿತು. ಹೀಗಿರುವಾಗ ಗುಂಪೊಂದು ಸೇರಿ ಕ್ರಿಕೆಟ್​ ಆಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕ್ರಿಕೆಟ್​ ಟೀಂನಲ್ಲಿ ಬ್ಯಾಟಿಂಗ್​ ಮಾಡುತ್ತಿರುವ ದೈತ್ಯಾಕಾರನನ್ನು ನೋಡಿ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. ಹಾಗಾದರೆ ಯಾರಿರಬಹುದು ಅಂತಹ ದೈತ್ಯ ಆಟಗಾರ? ವಿಡಿಯೋ ಇಲ್ಲಿದೆ ನೀವೂ ನೋಡಿ.

ದೈತ್ಯಾಕಾರದ ಆನೆ ಸ್ಟೈಲ್ ಆಗಿ ಬ್ಯಾಟ್​ ಹಿಡಿದು ಕ್ರಿಕೆಟ್​ ಆಡಲು ನಿಂತಿದೆ. ಚೆಂಡು ಎದುರು ಬರುತ್ತಿದ್ದಂತೆ ತನ್ನ ಸೊಂಡಿಲಿನಿಂದ ಹಿಡಿದ ಬ್ಯಾಟ್​ ಮೂಲಕ ಬೀಸಿ ಬೀಸಿ ಚೆಂಡನ್ನು ಹೊಡೆಯುತ್ತಿದೆ. ಪ್ರತಿ ಚೆಂಡು ಕೂಡಾ ಸಿಕ್ಸ್​ ಗಡಿಯಾಚೆಗೆ ಹೋಗಿ ಬೀಳುತ್ತಿದೆ. 30 ಸೆಕೆಂಡುಗಳಿರುವ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಿಸಿದ್ದಾರೆ. ಬ್ಯಾಟ್​ ಹಿಡಿದು ನಿಂತ ಅನೆಯನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಸ್ಥಳದಲ್ಲಿ ಆನೆ ಹೊಡೆದ ಚೆಂಡನ್ನು ಹಿಡಿಯಲು, ಮತ್ತು ಆನೆಯನ್ನು ಔಟ್​ ಮಾಡಲು ಆಟಗಾರರು ನಿಂತಿದ್ದಾರೆ. ಅತಿ ಚಾಣುಕ್ಯತನದಿಂದ ಆನೆ ಸಿಕ್ಸರ್​ ಹೊಡೆಯುವ ದೃಶ್ಯ ನೋಡಿದ ನೆಟ್ಟಿಗರು ಆನೆಯ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ ಪುಟವೊಂದರಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋಕ್ಕೆ ಕಮೆಂಟ್ಸ್​ಗಳ ಸುರಿಮಳೆಯೇ ಬಂದಿದೆ. ಮುಂದಿನ ಐಪಿಲ್​ಗೆ ಗಜರಾಜನನ್ನು ಆಯ್ಕೆ ಮಾಡುವುದಾಗಿ ನೆಟ್ಟಿಗರು ಪ್ರಶಂಸೆ ಪಟ್ಟಿದ್ದಾರೆ.

ಕ್ರಿಕೆಟ್​ ಅಂದಾಕ್ಷಣ ಜನರ ಕಿವಿ ನೆಟ್ಟಗಾಗುತ್ತದೆ. ಅಷ್ಟು ಇಷ್ಟದ ಕ್ರಿಕೆಟ್​ ಆಟಕ್ಕೆ ಸಂಬಂಧಿಸಿದ ವಿಷಯವಂತೂ ಹೆಚ್ಚು ಚರ್ಚೆಯಾಗುವುದು ಸಾಮಾನ್ಯ. ಇಲ್ಲಿ, ಆನೆ ಬ್ಯಾಟ್​ ಹಿಡಿದು ಕ್ರಿಕೆಟ್​ ಆಡುತ್ತಿರುವ ದೃಶ್ಯ ಮತ್ತು ಆನೆಗೆ ಕ್ರಿಕೆಟ್​ ಆಟದ ಮೇಲಿರುವ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ವೈರಲ್ ವಿಡಿಯೋ: ವಿಷಕಾರಿ ಹಾವಿನೆದುರು ಕಾಳಗಕ್ಕಿಳಿದು ಗೆದ್ದ ಸಣ್ಣ ಜೇಡ..!

ಪೆಟ್ರೋಲ್, ಡೀಸೆಲ್ ಖರ್ಚೇ ಇಲ್ಲ, ಟೈರ್​ ಹತ್ತಿ ರಸ್ತೆಯಲ್ಲಿ ಚಲಿಸಿದ ಬಾಲಕ! ಸ್ಟಂಟ್ ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada