AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ವಿಡಿಯೋ: ವಿಷಕಾರಿ ಹಾವಿನೆದುರು ಕಾಳಗಕ್ಕಿಳಿದು ಗೆದ್ದ ಸಣ್ಣ ಜೇಡ..!

ಸಣ್ಣ ಜೇಡವೊಂದು ವಿಷಕಾರಿ ಹಾವನ್ನು ಬೇಟೆಯಾಡಿದ ರೀತಿ ನೋಡಿದರೆ ನಿಮಗೆ ಆಶ್ಚರ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ವೈರಲ್ ವಿಡಿಯೋ: ವಿಷಕಾರಿ ಹಾವಿನೆದುರು ಕಾಳಗಕ್ಕಿಳಿದು ಗೆದ್ದ ಸಣ್ಣ ಜೇಡ..!
ಹಾವಿನೊಂದಿಗೆ ಕಾಳಗಕ್ಕಿಳಿದು ಗೆದ್ದ ಜೇಡ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Jan 22, 2021 | 5:46 PM

ಜನರು ಸಾಮಾನ್ಯವಾಗಿ ಹಾವನ್ನು ನೋಡಿದ ಕೂಡಲೇ ಹೆದರಿ ಓಡಿಹೋಗುತ್ತಾರೆ. ವಿಶೇಷವಾಗಿ, ವಿಷಕಾರಿ ಹಾವುಗಳ ವಿಷಯಕ್ಕೆ ಬಂದಾಗಲಂತೂ ಜನರ ಸ್ಥಿತಿ ಹೇಳಲಾಗದು. ಆದರೆ, ಸಣ್ಣ ಜೇಡವೊಂದು ವಿಷಕಾರಿ ಹಾವನ್ನು ಬೇಟೆಯಾಡಿದ ರೀತಿ ನೋಡಿದರೆ ನಿಮಗೆ ಆಶ್ಚರ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ವಿಡಿಯೋ ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ . ಏಕೆಂದರೆ, ಜೇಡ ಕೂಡ ಹಾವುಗಳನ್ನು ಬೇಟೆಯಾಡಬಹುದೆಂದು ಯಾರೂ ಊಹಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವೀಡಿಯೊದಲ್ಲಿ, ಜೇಡರ ಬಲೆಯಲ್ಲಿ ವಿಷಕಾರಿ ಹಾವೊಂದು ಸಿಕ್ಕಿಬಿಳುತ್ತದೆ ಮತ್ತು ಅದರಿಂದ ಹೊರಬರಲು ಭಾರಿ ಪ್ರಯತ್ನ ನಡೆಸುತ್ತದೆ. ಆದರೆ ಅದೇ ಬಲೆಯಲ್ಲಿ ವಿಶ್ರಮಿಸುತ್ತಿದ್ದ ಜೇಡ ವಿಷಕಾರಿ ಹಾವಿನ ಮೇಲೆ ಎರಗಿ, ಹಾವಿನ ಮೇಲೆ ಪದೇ ಪದೇ ದಾಳಿ ಮಾಡಿ ಅದನ್ನು ಕೊಂದು ಹಾಕಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಜನರು ತುಂಬಾ ಆಶ್ಚರ್ಯಚಕಿತರಾಗಿದ್ದಾರೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾ ರಾಮನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಗಳಿಸುತ್ತಿದೆ. ಆದರೆ ಘಟನೆ ನಡೆದ ಸ್ಥಳದ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

ನಿಜವಾದ ಪಾಠದಲ್ಲಿ ಓದಿದ ಕಥೆ.. ಇದೇ ಅರಣ್ಯ ಸೇವೆಯ ಅಧಿಕಾರಿ ಸುಧಾ ರಾಮನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಇನ್ನೊಂದು ವಿಡಿಯೋದಲ್ಲಿ ಬಾಯಾರಿದ ಹಕ್ಕಿಯೊಂದು ಬಾಟಲಿಯಲ್ಲಿ ಅರ್ಧ ತುಂಬಿದ್ದ ನೀರಿನೊಳಕ್ಕೆ ಸಣ್ಣ ಕಲ್ಲುಗಳನ್ನು ಹಾಕಿ, ನೀರನ್ನು ಕುಡಿದು ತನ್ನ ದಾಹ ತೀರಿಸಿಕೊಂಡಿದೆ. ಈ ಮೂಲಕ ನಾವು ಬಾಲ್ಯದಲ್ಲಿ ಓದಿದ ಕಥೆ ನಿಜವಾಗಿ ನಮ್ಮ ಕಣ್ಣೆದುರು ಬಂದಿದೆ.