ಪೆಟ್ರೋಲ್, ಡೀಸೆಲ್ ಖರ್ಚೇ ಇಲ್ಲ, ಟೈರ್​ ಹತ್ತಿ ರಸ್ತೆಯಲ್ಲಿ ಚಲಿಸಿದ ಬಾಲಕ! ಸ್ಟಂಟ್ ವಿಡಿಯೋ ವೈರಲ್​

ರಸ್ತೆಯಲ್ಲಿ ಬಾಲಕ ಟ್ರಕ್ ಟೈರ್​ ಮೇಲೆ ನಿಂತು ತನ್ನ ಕಾಲುಗಳ ಸಹಾಯದಿಂದ ಟೈಯರ್​ಅನ್ನು ಓಡಿಸುತ್ತಾನೆ. ಬಾಲಕನ ಸ್ಟಂಟ್​ ವಿಡಿಯೋ ವೈರಲ್​.. ವಿಡಿಯೋ ಇಲ್ಲಿದೆ ನೀವೂ ನೋಡಿ.

ಪೆಟ್ರೋಲ್, ಡೀಸೆಲ್ ಖರ್ಚೇ ಇಲ್ಲ, ಟೈರ್​ ಹತ್ತಿ ರಸ್ತೆಯಲ್ಲಿ ಚಲಿಸಿದ ಬಾಲಕ! ಸ್ಟಂಟ್ ವಿಡಿಯೋ ವೈರಲ್​
ಟ್ರಕ್​ ಟೈರ್​ ಮೇಲೆ ಹತ್ತಿ ನಿಂತ ಬಾಲಕ
Follow us
shruti hegde
|

Updated on:May 10, 2021 | 12:18 PM

ಸಾಮಾಜಿಕ ಜಾಲತಾಣದಲ್ಲಿ ಬಾಲಕರ ಸ್ಟಂಟ್​ ವಿಡಿಯೋಗಳು ಆಗಾಗ ಹೆಚ್ಚು ವೈರಲ್ ಅಗುತ್ತಿರುತ್ತದೆ. ಅದೆಷ್ಟೋ ಎತ್ತರದ ಕಟ್ಟಡವನ್ನು ಹತ್ತಿದ ಸಾಹಸ, ಕೈಕಾಲುಗಳನ್ನು ಸರಳಪಳಿಯಂತೆ ತಿರುಚುವ ಸಾಹಸಗಳನ್ನು ನೋಡಿಯೇ ಇರುತ್ತೀರಿ. ಅಂತಹುದೇ ಒಂದು ಸ್ಟಂಟ್​ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​ ಅಗುತ್ತಿದೆ. ಬಾಲಕನ ಟ್ಯಾಲೆಂಟ್​ ನಿಮ್ಮನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ವಿಡಿಯೋ ಇಲ್ಲಿದೆ ನೋಡಿ.

ರಸ್ತೆಯಲ್ಲಿ ಬಾಲಕ ಟ್ರಕ್ ಟೈರ್​ ಮೇಲೆ ನಿಂತು ತನ್ನ ಕಾಲುಗಳ ಸಹಾಯದಿಂದ ಟೈರ್​ಅನ್ನು ಓಡಿಸುತ್ತಾನೆ. ಮತ್ತು ಟೈರ್​ಅನ್ನು ತನ್ನ ಕಾಲುಗಳ ಸಹಾಯದಿಂದ ಹಿಂದಕ್ಕೆ ಎಳೆಯುತ್ತಾನೆ. ಈತನ ಸಾಹಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ಬಾಲಕನ ಸ್ಟಂಟ್​ ನೋಡಿ ಆಶ್ಚರ್ಯಗೊಂಡಿದ್ದಾರೆ.

ವಿಡಿಯೋವನ್ನು ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಗಮನಿಸಿದಂತೆ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿರುತ್ತವೆ. ಆ ಸಮಯದಲ್ಲಿ ಬಾಲಕ ರಸ್ತೆಯ ಬದಿಯಲ್ಲಿ ಟ್ರಕ್​ ಟೈರ್​​ಅನ್ನು ಹಿಡಿದು ನಿಂತಿರುವುದನ್ನು ನೋಡಬಹುದು. ಬಳಿಕ ರಸ್ತೆಯ ಮಧ್ಯಕ್ಕೆ ಬಂದು ಟೈರ್​ ಮೇಲೆ ಹತ್ತಿ ನಿಂತು ಟೈಯರ್​ ಓಡಿಸಲು ಪ್ರಾರಂಭಿಸುತ್ತಾನೆ. ತನ್ನ ಕಾಲುಗಳ ಮೂಲಕ ಟೈರ್​ಅನ್ನು ಓಡಿಸುವ ರೀತಿ ಆಶ್ಚರ್ಯವನ್ನು ಉಂಟುಮಾಡುತ್ತದೆ.

ಮೇ 8ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಮತ್ತು 100ಕ್ಕೂ ಹೆಚ್ಚು ಲೈಕ್ಸ್​ಗಳು ಮತ್ತು ರಿಟ್ವೀಟ್​ಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ಸ್ಟಂಟ್​ ಮಾಡೋಕೆ ಹೋಗಿ ಅವಾಂತರ: ನೋಡನೋಡುತ್ತಿದ್ದಂತೆ ಪಲ್ಟಿಯಾದ ರೇಸ್​ ಕಾರ್, ಮತ್ತೆ ಚಾಲಕನ ಕಥೆ?

Published On - 12:15 pm, Mon, 10 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ