ಕಾಶ್ಮೀರದಲ್ಲಿ 20 ಬಾರಿ ಸಾವಿನಿಂದ ಪಾರಾಗಿದ್ದ ಜೈಷೆ ಉಗ್ರ ಸೇರಿ ಮೂವರನ್ನು ಕೊಂದ ಭದ್ರತಾ ಪಡೆಗಳು
Security forces kill 3 terrorists in an encounter at Kishtwar in Jammu and Kashmir: ಕಾಶ್ಮೀರದ ಕಿಶ್ತವಾರ್ನಲ್ಲಿ ನಡೆದ ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ. ಎರಡು ವರ್ಷಗಳಿಂದ ತಪ್ಪಿಸಿಕೊಳ್ಳುತ್ತಿದ್ದು, 20ಕ್ಕೂ ಹೆಚ್ಚು ಬಾರಿ ಸಾವಿನ ದವಡೆಯಿಂದ ಪಾರಾಗಿದ್ದ ಸೈಫುಲ್ಲಾ ಎನ್ನುವ ನೊಟೋರಿಯಸ್ ಜೈಷೆ ಉಗ್ರ ಈ ಮೂವರಲ್ಲಿ ಒಬ್ಬ ಎನ್ನಲಾಗಿದೆ.

ನವದೆಹಲಿ, ಫೆಬ್ರುವರಿ 22: ಜಮ್ಮು ಮತ್ತು ಕಾಶ್ಮೀರದ ಕಿಶ್ತವಾರ್ನಲ್ಲಿ (Kishtwar) ಭದ್ರತಾ ಪಡೆಗಳು ಮೂವರು ಉಗ್ರಗಾಮಿಗಳನ್ನು ಕೊಂದುಹಾಕಿದ್ದಾರೆ. ಈ ಮೂವರಲ್ಲಿ ಒಬ್ಬಾತ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರ ಸೈಫುಲ್ಲಾ ಎಂದು ಹೇಳಲಾಗಿದೆ. ಈ ಪಾಕ್ ಮೂಲದ ಉಗ್ರಗಾಮಿ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ. ಕಳೆದ ಎರಡು ವರ್ಷಗಳಲ್ಲಿ ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ತಿರುಗುತ್ತಿರುತ್ತಾನೆ. 20ಕ್ಕೂ ಹೆಚ್ಚು ಬಾರಿ ಸಾವಿನ ದವಡೆಯಿಂದ ತಪ್ಪಿಸಿಕೊಂಡಿರುತ್ತಾನೆ. ಕೊನೆಗೆ ಕಿಶ್ತವಾರ್ನಲ್ಲಿ ಎನ್ಕೌಂಟರ್ನಲ್ಲಿ ಆತನ ಸಂಹಾರವಾಗಿದೆ.
ಕಿಶ್ತವಾರ್ನಲ್ಲಿ ಉಗ್ರಗಾಮಿಗಳು ನುಸುಳಿದ್ದಾರೆ ಎಂದು ಗುಪ್ತಚರರಿಂದ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಭದ್ರತಾ ಪಡೆಗಳು ಕಾರ್ಯಾಚರಣೆ ಶುರು ಮಾಡಿವೆ. ಗುಡ್ಡದ ಬಳಿ ಮಣ್ಣಿನ ಮನೆಯೊಂದರ ಒಳಗೆ ಉಗ್ರರು ಇರುವ ಜಾಗಕ್ಕೆ ಭದ್ರತಾ ಪಡೆಗಳು ಹೋಗುತ್ತಿದ್ದಂತೆಯೇ, ಉಗ್ರರಿಂದ ಗುಂಡಿನ ದಾಳಿಯಾಗುತ್ತದೆ. ಯೋಧರು ಪ್ರತಿದಾಳಿ ನಡೆಸುತ್ತಾರೆ. ಇದರಲ್ಲಿ ಮೂವರು ಉಗ್ರರು ಹತ್ಯೆಗೊಳ್ಳುತ್ತಾರೆ.
ಇದನ್ನೂ ಓದಿ: ಎಂಟು ಮಂದಿ ಶಂಕಿತ ಉಗ್ರರ ಬಂಧನ; ಗಾರ್ಮೆಂಟ್ಸ್ ಫ್ಯಾಕ್ಟರಿ ಮತ್ತಿತರೆಡೆಯಲ್ಲಿ ಕೆಲಸ ಮಾಡುತ್ತಿದ್ದವರಿವರು
ಎರಡು ಅಸ್ಸಾಲ್ಟ್ ರೈಫಲ್ಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ತಂಡಗಳಲ್ಲಿ ಜಮ್ಮು ಕಾಶ್ಮೀರ ರಾಜ್ಯದ ಪೊಲೀಸ್, ಸಿಆರ್ಪಿಎಫ್ ಮತ್ತು ವಿಶೇಷ ಪಡೆಗಳು ಇದ್ದವು.
ಇದೇ ಕಿಶ್ತವಾರ್ನಲ್ಲಿ ಇತ್ತೀಚೆಗೆ ಹಲವು ಬಾರಿ ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಕಾಳಗಗಳು ನಡೆದಿವೆ. ಇತ್ತೀಚೆಗೆ ನಡೆದ ಎನ್ಕೌಂಟ್ನಲ್ಲಿ ಜೇಷೆ ಉಗ್ರ ಆದಿಲ್ ಎಂಬಾತನನ್ನು ಗುಂಡಿನಿಂದ ಹೊಡೆದು ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: ಭಾರತೀಯರು ಬೇರೆಯವರಿಗೆ ಸೇವೆ ಸಲ್ಲಿಸಿದ್ದೇ ಆಯ್ತು, ಸ್ವಂತದ್ದೇನೂ ಸಾಧಿಸಲಿಲ್ಲ: ಸ್ಯಾಮ್ ಪಿತ್ರೋಡಾ
ಕಿಶ್ತವಾರ್ನ ಛಾತ್ರೂ ಅರಣ್ಯ ಪ್ರದೇಶದಲ್ಲಿ ಜನವರಿ ತಿಂಗಳಲ್ಲಿ ಐದಾರು ಬಾರಿ ಎನ್ಕೌಂಟರ್ ಪ್ರಕರಣಗಳು ನಡೆದಿವೆ. ತ್ರಾಶಿ ಐ ಆಪರೇಷನ್ ಕೈಗೊಂಡಿದ್ದ ಭದ್ರತಾ ಪಡೆಗಳು ಕಿಶ್ತವಾರ್ನ ಛಾತ್ರೂ, ಸೋನ್ನಾರ್, ದೋಲ್ಗಂ, ಡಿಚ್ಚರ್ ಮೊದಲಾದ ಸ್ಥಳಗಳಲ್ಲಿ ಉಗ್ರರ ಬೆನ್ನಟ್ಟಿ ಹೋಗಿದ್ದವು. ಈ ಕಿಶ್ತವಾರ್ ಪ್ರದೇಶವು ಬಹಳ ಕ್ಷಿಷ್ಟಕರವಾದ ದಟ್ಟ ಅರಣ್ಯ ಮತ್ತು ಗುಡ್ಡಗಾಡು ಇರುವ ಸ್ಥಳವಾಗಿದ್ದು, ಉಗ್ರರಿಗೆ ಅಡಗಿಕೊಳ್ಳಲು ಪ್ರಶಸ್ತ ಎನಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
