AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಸ್ಸಿಯ ಸಾರ್ವಕಾಲಿಕ ವಿಶ್ವ ದಾಖಲೆ ಮುರಿದ ಎಂಬಾಪೆ!

Kylian mbappé New World Record: ಲಿಯೋನೆಲ್ ಮೆಸ್ಸಿಯ ಜಾದೂಗಿರಿ, ಮಿರೋಸ್ಲಾವ್ ಕ್ಲೋಸ್ ಅವರ ಸುದೀರ್ಘ ದಾಖಲೆಗಳನ್ನೆಲ್ಲಾ ಫ್ರಾನ್ಸ್‌ನ 'ವೇಗದ ಸರದಾರ' ಕಿಲಿಯನ್ ಎಂಬಾಪೆ ಮಿಯಾಮಿಯ ಮೈದಾನದಲ್ಲಿ ಧೂಳೀಪಟ ಮಾಡಿದ್ದಾರೆ. ಈ ಮೂಲಕ ವಿಶ್ವ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ಗೋಲುಗಳ ಸರದಾರನಾಗಿ ಹೊರಹೊಮ್ಮಿದ್ದಾರೆ.

ಝಾಹಿರ್ ಯೂಸುಫ್
|

Updated on:Jul 19, 2026 | 8:50 AM

Share
ಫ್ರಾನ್ಸ್‌ನ ಯುವ ತಾರೆ ಕಿಲಿಯನ್ ಎಂಬಾಪೆ (Kylian Mbappé) ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ಐತಿಹಾಸಿಕ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. (PC: Getty Images)

1 / 5
ಜುಲೈ 18ರ ಶನಿವಾರದಂದು ಮಿಯಾಮಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ ಫ್ರಾನ್ಸ್ ಪರ ಎರಡು ಅದ್ಭುತ ಗೋಲುಗಳನ್ನು ಬಾರಿಸಿದ್ದರು. ಈ ಗೋಲುಗಳ ಮೂಲಕ ಎಂಬಾಪೆ  ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರ ದಾಖಲೆಯನ್ನು ಎಂಬಾಪೆ ಮುರಿದರು. (PC: Getty Images)

2 / 5
ಇದಕ್ಕೂ ಮುನ್ನ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ವಿಶ್ವ ದಾಖಲೆ ಲಿಯೋನೆಲ್ ಮೆಸ್ಸಿ ಹೆಸರಿನಲ್ಲಿತ್ತು. ಮೆಸ್ಸಿ 33 ಪಂದ್ಯಗಳ ಮೂಲಕ ಒಟ್ಟು 21 ಗೋಲು ಬಾರಿಸಿ ಈ ವರ್ಲ್ಡ್​ ರೆಕಾರ್ಡ್​ ನಿರ್ಮಿಸಿದ್ದರು. ಮೆಸ್ಸಿಗೂ ಮುನ್ನ ಈ ದಾಖಲೆ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ (16 ಗೋಲು) ಹೆಸರಿನಲ್ಲಿತ್ತು. (PC: Getty Images)

3 / 5
ಇದೀಗ 22 ಪಂದ್ಯಗಳ ಮೂಲಕ ಕಿಲಿಯನ್ ಎಂಬಾಪೆ, ಮೆಸ್ಸಿಯ ವಿಶ್ವ ದಾಖಲೆ ಮುರಿದಿದ್ದಾರೆ. ಅದು ಸಹ ಕೊನೆಯ ಪಂದ್ಯದಲ್ಲಿ 2 ಗೋಲು ಬಾರಿಸಿ ಎಂಬುದು ವಿಶೇಷ. ಈ ಗೋಲುಗಳೊಂದಿಗೆ ವಿಶ್ವಕಪ್​ ಅಂಗಳದಲ್ಲಿ ಕಿಲಿಯನ್ ಎಂಬಾಪೆ ಅವರ ಒಟ್ಟಾರೆ ಗೋಲುಗಳ ಸಂಖ್ಯೆ 22 ಕ್ಕೇರಿದೆ. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. (PC: Getty Images)

4 / 5
ಇದಾಗ್ಯೂ ಈ ವಿಶ್ವ ದಾಖಲೆ ಮುರಿಯಲು ಲಿಯೋನೆಲ್ ಮೆಸ್ಸಿಗೆ ಉತ್ತಮ ಅವಕಾಶವಿದೆ. ಭಾನುವಾರ ಸ್ಪೇನ್ ವಿರುದ್ಧ ನಡೆಯುವ ಫೈನಲ್ ಪಂದ್ಯದಲ್ಲಿ ಮೆಸ್ಸಿ 2 ಗೋಲು ದಾಖಲಿಸಿದರೆ ಮತ್ತೆ ವಿಶ್ವಕಪ್​ ಇತಿಹಾಸದಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಎಲ್ಲರ ಕಣ್ಣು ಅಂತಿಮ ಪಂದ್ಯದತ್ತ ನೆಟ್ಟಿದೆ. (PC: Getty Images)

5 / 5

Published On - 8:47 am, Sun, 19 July 26

ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ನಂದಿನಿ ಹಾಲಿನ ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್​​

ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ

ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ

ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್

ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ

ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ

‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’

10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್

ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ