‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪತ್ನಿ ಚೆನ್ನಮ್ಮ ನಿಧನಕ್ಕೆ ಕುಟುಂಬದಲ್ಲಿ ಆಳವಾದ ದುಃಖ ಆವರಿಸಿದೆ. ಅವರ ಸಹೋದರ ತಮ್ಮ ನೋವನ್ನು ತೋಡಿಕೊಂಡಿದ್ದು, ಚೆನ್ನಮ್ಮ ಅವರನ್ನು ದೇವರು ಎಂದಿದ್ದಾರೆ. ರಾಜಕೀಯ ಎತ್ತರದಲ್ಲಿದ್ದರೂ ಚೆನ್ನಮ್ಮ ಎಂದಿಗೂ ತುಂಬಿದ ಕೊಡದಂತೆ ಗಂಭೀರವಾಗಿ, ಸರಳವಾಗಿ ಮತ್ತು ನಿಗರ್ವಿಯಾಗಿ ಜೀವನ ನಡೆಸಿದ್ದರು.
ಹಾಸನ, ಜುಲೈ 18: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಕುಟುಂಬದ ಸದಸ್ಯರಿಗೆ ಆಘಾತ ಉಂಟಾಗಿದೆ. ಚೆನ್ನಮ್ಮ ಅವರ ಸಹೋದರ ವಿಶ್ವನಾಥ್, ಅಕ್ಕನ ನಿಧನಕ್ಕೆ ಅತೀವ ದುಃಖ ವ್ಯಕ್ತಪಡಿಸಿದ್ದು, ‘‘ಅವರು ನಮ್ಮ ಕುಟುಂಬಕ್ಕೆ ದೇವರಾಗಿದ್ದರು. ನಮ್ಮನ್ನು ಸಾಕಿ, ಬೆಳೆಸಿದ್ದು ಅವರೇ. ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಚೆನ್ನಮ್ಮ ವಹಿಸಿಕೊಂಡಿದ್ದರು. ನಾವು ಅವರ ಹಾಕಿದ ಗೆರೆ ದಾಟುತ್ತಿರಲಿಲ್ಲ. ಅವರು ನಮಗೆ ದೇವರು. ಅವರ ನೆರವಿನಿಂದಲೇ ನಾವು ಉತ್ತಮ ಉದ್ಯೋಗ ಪಡೆದು ಗೌರವಯುತ ಜೀವನ ನಡೆಸಲು ಸಾಧ್ಯವಾಯಿತು. ಪತಿ ಪ್ರಧಾನಿ, ಪುತ್ರ ಮುಖ್ಯಮಂತ್ರಿ ಮತ್ತು ಸಚಿವರಾದರು, ಅಳಿಯ ದೊಡ್ಡ ವೈದ್ಯರಾದರೂ ಚೆನ್ನಮ್ಮ ಅವರು ಎಂದಿಗೂ ಸರಳತೆ ಕಾಯ್ದುಕೊಂಡಿದ್ದರು. ಯಾವುದೇ ಅಹಂ ಇಲ್ಲದೆ ಜೀವನ ಸಾಗಿಸಿದರು’’ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ

