AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನಮ್ಮ ದೇವೇಗೌಡರ ಮನೆಯ ಮಹಾಲಕ್ಷ್ಮೀ, ಅವರ ದಾಂಪತ್ಯ ಆದರ್ಶ: ಬ್ರಹ್ಮಾಂಡ ಗುರೂಜಿ

ಚೆನ್ನಮ್ಮ ದೇವೇಗೌಡರ ಮನೆಯ ಮಹಾಲಕ್ಷ್ಮೀ, ಅವರ ದಾಂಪತ್ಯ ಆದರ್ಶ: ಬ್ರಹ್ಮಾಂಡ ಗುರೂಜಿ

Vinay Kashappanavar
| Edited By: |

Updated on: Jul 19, 2026 | 12:14 PM

Share

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಬ್ರಹ್ಮಾಂಡ ಗುರೂಜಿ ಸಂತಾಪ ವ್ಯಕ್ತಪಡಿಸಿದ್ದು, ದೇವೇಗೌಡರ ಯಶಸ್ಸಿನ ಹಿಂದಿದ್ದ ಮನೆಯ ಮಹಾಲಕ್ಷ್ಮಿ ಹಾಗೂ ಪರಮ ದೈವಭಕ್ತೆ ಚೆನ್ನಮ್ಮನವರ ಆದರ್ಶ ದಾಂಪತ್ಯವನ್ನು ಇಂದಿನ ಪೀಳಿಗೆ ಕಲಿಯಬೇಕೆಂದು ಹೇಳಿದ್ದಾರೆ. ಮನೆಯ ಮಕ್ಕಳು, ಮೊಮ್ಮಕ್ಕಳ ಯಶಸ್ಸು ಕೀರ್ತಿ ಪಡೆಯಲು ಮತ್ತು ದೇವೇಗೌಡರನ್ನು ಮೂರು ಬಾರಿ ಬದುಕಿಸಿದ್ದು ಕೂಡ ಇದೇ ಚೆನ್ನಮ್ಮನವರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರು, ಜುಲೈ 19:  ಚೆನ್ನಮ್ಮನವರು ದೇವೇಗೌಡರ ಮನೆಯ ಮಹಾಲಕ್ಷ್ಮೀ. ಮನೆಯ ಮಕ್ಕಳು, ಮೊಮ್ಮಕ್ಕಳ ಯಶಸ್ಸು ಕೀರ್ತಿ ಪಡೆಯಲು ಮತ್ತು ದೇವೇಗೌಡರನ್ನು ಮೂರು ಬಾರಿ ಬದುಕಿಸಿದ್ದು ಕೂಡ ಪರಮ ದೈವ ಭಕ್ತೆ ಚೆನ್ನಮ್ಮನವರು. ಗಂಡ ಹೊರಗೆ ಹೋಗಿ ಬಂದರೆ ದೃಷ್ಟಿ ತೆಗೆಯುತ್ತಿದ್ದ ಅವರ ದಾಂಪತ್ಯ ನೋಡಿ ಇಂದಿನವರು ಕಲಿಯಬೇಕು ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ದೇವೇಗೌಡರ ಪತ್ನಿ ಅವರಿಗೆ 89 ವರ್ಷ ವಯಸ್ಸಾಗಿತ್ತು. ಈ ಒಂಭತ್ತು ಎನ್ನುವುದು ಗಂಡಾಂತರ. ಗಂಡು ಅಥವಾ ಹೆಣ್ಣು ಯಾರಿಗೇ ಆದರೂ 9ರ ಘಟ್ಟ ತುಂಬಿದಾಗ ಗಂಡಾಂತರ ಇರುತ್ತೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us