Viral video: ಜನ-ಮನಗೆದ್ದ ರಾಧೆ ಚಿತ್ರದ ಹಾಡಿಗೆ ನೃತ್ಯ ಮಾಡಿದ ವೈದ್ಯರು; ‘ರಿಯಲ್ ಹಿರೋ’ ಎಂದು ಶ್ಲಾಘಿಸಿದ ನೆಟ್ಟಿಗರು
ಇತ್ತೀಚೆಗೆ ಬಿಡುಗಡೆಗೊಂಡ ಸಲ್ಮಾನ್ಖಾನ್ ಚಿತ್ರವಾದ ರಾಧೆಯ ‘ಸೀಟಿ ಮಾರ್’ ಹಾಡಿಗೆ ವೈದ್ಯರೆಲ್ಲ ಸೇರಿ ಆಸ್ಪತ್ರೆಯಲ್ಲಿ ಸಕತ್ ಸ್ಟೆಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಪತ್ರೆಯಲ್ಲಿ 24ಗಂಟೆ ಕೆಲಸ ನಿರ್ವಹಿಸುತ್ತಿರುವ ವೈದ್ಯರು ತಮ್ಮ ಮಾನಸಿಕ ಒತ್ತಡದಿಂದ ಹೊರಬರುಲು ನೃತ್ಯ ಮಾಡಿದ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂತಹುದೇ ಮತ್ತೊಂದು ವೈದ್ಯರ ಡಾನ್ಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ಸಲ್ಮಾನ್ಖಾನ್ ಚಿತ್ರವಾದ ರಾಧೆಯ ‘ಸೀಟಿ ಮಾರ್’ ಹಾಡಿಗೆ ಸಕತ್ ಸ್ಟೆಪ್ ಹಾಕಿದ್ದಾರೆ. ವಿವಿಧ ಸ್ಟೆಪ್ಗಳ ಮೂಲಕ ರಂಜಿಸಿರುವ ವೈದ್ಯರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಯಲ್ ಹಿರೋ ಎಂದು ಕಾಮೆಂಟ್ ಮಾಡುವ ಮೂಲಕ ಶ್ಲಾಘಿಸಿದ್ದಾರೆ.
ಸಲ್ಮಾನ್ ಖಾನ್ ನಟನೆಯ ರಾಧೆ ಚಿತ್ರ ಇದೀಗ ಪ್ರೇಕ್ಷಕರ ಮನಗೆದ್ದಿದ್ದು, ರಾಧೆ ಚಿತ್ರದ ಹಾಡು ಕೂಡಾ ಎಲ್ಲರ ಬಾಯಲ್ಲಿ ಗುನುಗುತ್ತಿದೆ. ಅದರಲ್ಲೂ ಸೀಟಿ ಮಾರ್ ಹಾಡು ಎಲ್ಲರ ಮನಗೆದ್ದಿದೆ. ಕೊವಿಡ್ ಸಾಂಕ್ರಾಮಿಕದಿಂದಾಗಿದ ದಿನದ 24 ಗಂಟೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಮನರಂಜನೆಯೇ ಇಲ್ಲದಾಂತಾಗಿದೆ. ಪ್ರತಿನಿತ್ಯ ರೋಗಿಗಳ ನೋವು, ಜೊತೆಗೆ ಸೋಂಕಿಗೆ ಬಲಿಯಾಗುತ್ತಿರುವ ಮೃತದೇಹಗಳನ್ನು ನೋಡಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ತಮ್ಮ ಕುಟುಂಬದಿಂದ ದೂರವಿದ್ದು ಆಸ್ಪತ್ರೆಯಲ್ಲಿಯೇ ದಿನಪೂರ್ತಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಾನಸಿಕ ಒತ್ತಡದಿಂದ ಹೊರಬರಲು ಏನಾದರೂ ಮನೋರಂಜನೆ ಬೇಕೇ ಬೇಕು. ಹೀಗಿರುವಾಗ ವೈದ್ಯರೆಲ್ಲ ಸೇರಿ ಡಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
View this post on Instagram
ವಿಡಿಯೋದಲ್ಲಿ ಗಮನಿಸುವಂತೆ ವೈದ್ಯರು ಮುಖಗವಸು ಧರಿಸಿರುತ್ತಾರೆ. ಸಂಗೀತ ಪ್ರಾರಂಭವಾಗುತ್ತಿದ್ದಂತೆಯೇ ವೈದ್ಯರು ಸ್ಲೋಮೋಷನ್ನಲ್ಲಿ ಖಡಕ್ ಲುಕ್ ಕೊಡುತ್ತಾ ಎಂಟ್ರಿಯಾಗುತ್ತಾರೆ. ಹಿಂದಿರುವ ಮತ್ತೋರ್ವ ವೈದ್ಯರು ಪಲ್ಟಿ ಹೊಡೆಯುತ್ತಾ ಎಂಟ್ರಿಕೊಡುತ್ತಾರೆ. ಸಲ್ಮಾನ್ ಖಾನ್ ಮತ್ತು ದಿಶಾ ಪಟಾನಿ ನಟಿಸಿರುವ ಹಾಡಿನ ಸಂಗೀತಕ್ಕೆ ನೃತ್ಯ ಮಾಡುತ್ತಾರೆ.
ವೈದ್ಯರು ಡಾನ್ಸ್ ಮಾಡುತ್ತಿರುವ ವಿಡಿಯೋವನ್ನು ದಿಶಾ ಪಟಾನಿ ಫ್ಯಾನ್ಸ್ ಕ್ಲಬ್ವೊಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ವೈದ್ಯರ ಸ್ಥೈರ್ಯ ಮತ್ತು ಶಕ್ತಿ! ಎಂಬುದಾಗಿ ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿಈ ವಿಡಿಯೋ ಪೋಸ್ಟ್ ಆದ ಬಳಿಕ ನೆಟ್ಟಿಗರು ವೈದ್ಯರ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿವರೆಗೆ 36,000 ಜನ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರಿಂದ ಕಾಮೆಂಟ್ಸ್ಗಳ ಸುರಿಮಳೆಯೇ ಬಂದಿದೆ. ಓರ್ವರು ‘ರಿಯಲ್ ಹಿರೋ’ ಎಂಬುದಾಗಿ ವೈದ್ಯರನ್ನು ಹೊಗಳಿದ್ದಾರೆ.
ಇದನ್ನೂ ಓದಿ: ವಿವಾಹ ಮೆರವಣಿಗೆಯಲ್ಲಿ ಉತ್ತರಾಖಂಡದ ಆ್ಯಂಬುಲೆನ್ಸ್ ಚಾಲಕ ಪಿಪಿಇ ಕಿಟ್ ಧರಿಸಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್