World Telecommunication Day 2021: ಇಂದು ವಿಶ್ವ ದೂರಸಂಪರ್ಕ ದಿನ; ಈ ಕಾಲಘಟ್ಟದ ಜತೆಗಾರನಿಗೊಂದು ಶುಭಾಶಯ

World Telecommunication Day: ವಿಶ್ವ ದೂರಸಂಪರ್ಕ ದಿನವನ್ನು (ವರ್ಡ್​ ಟೆಲಿಕಮ್ಯುನಿಕೇಶನ್​ ಡೇ) ಪ್ರತೀ ವರ್ಷ ಮೇ 17 ರಂದು ಆಚರಿಸಲಾಗುತ್ತದೆ. ಟೆಲಿಕಮ್ಯುನಿಕೇಶನ್​ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಲೇ ಇದೆ. ಪ್ರಸ್ತುತ ದಿನದಲ್ಲಿ ಸಂವಹನ ನಡೆಸಲು ದೂರವಾಣಿ ಸಂಪರ್ಕ ಅತ್ಯಂತ ಮಹತ್ತರ ಪಾತ್ರವಹಿಸಿದೆ.

World Telecommunication Day 2021: ಇಂದು ವಿಶ್ವ ದೂರಸಂಪರ್ಕ ದಿನ; ಈ ಕಾಲಘಟ್ಟದ ಜತೆಗಾರನಿಗೊಂದು ಶುಭಾಶಯ
World Telecommunication Day 2021
Follow us
shruti hegde
|

Updated on:May 17, 2021 | 12:57 PM

ವಿಶ್ವ ದೂರಸಂಪರ್ಕ ದಿನವನ್ನು (ವರ್ಡ್​ ಟೆಲಿಕಮ್ಯುನಿಕೇಶನ್​ ಡೇ) ಪ್ರತೀ ವರ್ಷ ಮೇ 17 ರಂದು ಆಚರಿಸಲಾಗುತ್ತದೆ. ಟೆಲಿಕಮ್ಯುನಿಕೇಶನ್​ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಲೇ ಇದೆ. ವಿಶ್ವದಾದ್ಯಂತ ಮಾಹಿತಿಯನ್ನು ರವಾನೆ ಮಾಡುವುದು ಮತ್ತು ಒಬ್ಬರಿಗೊಬ್ಬರು ಡಿಜಿಟಲ್​ ಮೂಲಕ ಸಂವಹನ ನಡೆಸಲು ಸಹಾಕಾರಿಯಾಗುವ ಒಂದೊಳ್ಳೆ ಮಾರ್ಗ.

ಪ್ರಸ್ತುತ ಸಂದರ್ಭವು ದೂರವಾಣಿ ಕರೆಯ ಬಳಕೆ ಮತ್ತು ಅದರ ಪಾತ್ರದ ಕುರಿತಾಗಿ ಜನರಿಗೆ ಅರಿವು ಮೂಡಿಸುತ್ತಿದೆ. ಇಡೀ ದೇಶವೇ ಕೊರೊನಾ ಎಂಬ ಮಹಾಮಾರಿಯ ಆಕ್ರಮಣಕ್ಕೆ ಒಳಗಾಗಿದೆ. ಇದರಿಂದ ಆಚೆ ಬರಲು ಎಲ್ಲರೂ ಒಂದಾಗಿ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರವು ಲಾಕ್​ಡೌನ್​ ಮೊರೆಹೋಗುವ ಸಂದರ್ಭ ಎದುರಾಗಿದೆ. ಅನಗತ್ಯವಾಗಿ ಹೊರಡೆ ಸುತ್ತಾಡುವಂತಿಲ್ಲ. ಒಬ್ಬರಿಗೊಬ್ಬರು ಮುಖಾಮುಖಿ ಭೇಟಿ ಇಲ್ಲ. ಹೀಗಿರುವಾಗ ಡಿಜಿಟಲ್​ ವ್ಯವಸ್ಥೆ ಜನರಿಗೆ ಸಹಾಯಕವಾಗಿದೆ. ಅದೆಷ್ಟೇ ದೂರವಿರಲಿ ದೂರವಾಣಿ ಸಂಪರ್ಕದ ಮೂಲಕ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಬಹುದು. ಸಂವಹನ ನಡೆಸಬಹುದು.

ವರ್ಡ್​ ಟೆಲಿಕಮ್ಯುನಿಕೇಶನ್​ ದಿನವು ಇಂಟರ್​ನ್ಯಾಷನಲ್​ ಟೆಲಿಗ್ರಾಫ್​ ಯೂನಿಯನ್​(ಐಟಿಯು)ನೊಂದಿಗೆ ಸಂಪರ್ಕವನ್ನು ಹೊಂದಿದೆ. 1876ರಲ್ಲಿ ದೂರವಾಣಿಯನ್ನು ಆವಿಷ್ಕರಿಸಲಾಯಿತು. ಆಗಿನ ಕಾಲಘಟ್ಟದಲ್ಲಿ ಒಬ್ಬರಿಂದ ಒಬ್ಬರಿಗೆ ಸಂವಹನ ನಡೆಸಲು ಮುಖಾಮುಖಿ ಭೇಟಿಯೇ ಆಗಬೇಕಿತ್ತು. ಇಲ್ಲವೇ ಪತ್ರದ ಸಂದೇಶದ ಮೂಲಕ ಸಂವಹನ ಏರ್ಪಡಬೇಕಿತ್ತು. ಇವಗಳನ್ನೆಲ್ಲಾ ಮೀರಿ ದೂರವಾಣಿ ಸಂಪರ್ಕ ಆವಿಷ್ಕಾರಗೊಂಡಾಗಿನಿಂದ ತಂತ್ರಜ್ಞಾನದ ಯುಗದ ಏಳಿಗೆ ಪ್ರಾರಂಭವಾಯಿತು. ನಂತರ 1957ರಲ್ಲಿ ಮೊದಲ ಉಪಗ್ರಹವನ್ನು ಪ್ರಾರಂಭಿಸಲಾಯಿತು. ಆ ಬಳಿಕ ಇಂಟರ್​ನೆಟ್​ ಆರಂಭಗೊಂಡಿತು. ಆ ಬಳಿಕ ಐಟಿಯು(ಇಂಟರ್​ನ್ಯಾಷನಲ್​ ಟೆಲಿಗ್ರಾಫ್​ ಯೂನಿಯನ್​) ಇಂಟರ್​ನ್ಯಾಷನಲ್​ ಟೆಲಿಕಮ್ಯುನಿಕೇಷನ್​ ಎಂಬ ಬದಲಾವಣೆಯ ಮೂಲಕ ಜಗತ್ತಿನಾದ್ಯಂತ ಹೆಸರು ಪಡೆಯಿತು. ಈ ಇತಿಹಾಸವು ಸಂವಹನ ಕ್ಷೇತ್ರದಲ್ಲಿನ ಅತ್ಯಂತ ಪ್ರಮುಖ ಬದಲಾವಣೆಯಾಗಿದೆ. ಆದ್ದರಿಂದ ವರ್ಡ್​ ಕಮ್ಯುನಿಕೆಶನ್​ ದಿನವನ್ನು ಇಂದಿಗೂ ಆಚರಿಸಲಾಗುತ್ತದೆ.

ಕೊವಿಡ್​ 19 ಸಮಯದಲ್ಲಿ ಮಕ್ಕಳ ಶಾಲಾ ಶಿಕ್ಷಣದಿಂದ ಹಿಡಿದು ವಯಸ್ಕರು ಮನೆಯಿಂದಲೇ ಕೆಲಸ ಮಾಡುವವವರೆಗೆ (Wok from Home) ಡಿಜಿಟಲ್​ ಕ್ಷೇತ್ರ ಅಭಿವೃದ್ಧಿ ಹೊಂದಿದೆ. ಕುಟುಂಬದವರೊಂದಿಗೆ ನಿರಂತರ ಸಂಪರ್ಕ, ಹಳ್ಳಿಯಲ್ಲಿರುವ ವಯಸ್ಕರು-ಪಟ್ಟಣದಲ್ಲಿರುವ ಮಕ್ಕಳೊಂದಿಗೆ ಸಂಪರ್ಕಕ್ಕೆ ಸೇತುವೆಯಾಗಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿರುವ ಕುಟುಂಬಸ್ಥರು-ಸಂಬಂಧಿಕರೊಂದಿಗೆ ಮಾತನಾಡಲು ದೂರವಾಣಿಯ ಮೂಲಕ ಸಂಪರ್ಕ ಸಹಾಯಕಾರಿಯಾಗಿದೆ.

ಇದನ್ನೂ ಓದಿ: ವರ್ಕ್​ ಫ್ರಮ್​ ಹೋಮ್​ ಕಾಲದಲ್ಲಿ ರಿಲಯನ್ಸ್ ಜಿಯೋ 4ಜಿ ಸ್ಪೀಡ್‌ ಎಲ್ಲರಿಗಿಂತ ತುಂಬಾ ಮುಂದೆ ಇದೆಯೆಂದ ಟ್ರಾಯ್!

Published On - 12:55 pm, Mon, 17 May 21

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ