ವಿಮಾನದ ಟಾಯ್ಲೆಟ್​ ತ್ಯಾಜ್ಯವನ್ನು ಗಾಳಿಯಲ್ಲೇ ಎಸೀತಾರಾ? ಹಾಗಾದ್ರೆ ಅದು ಎಲ್ಲಿಗೆ ಹೋಗುತ್ತೆ? ಕುತೂಹಲಕಾರಿ ಸತ್ಯ ಇಲ್ಲಿದೆ

ವಿಮಾನದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಆ ತ್ಯಾಜ್ಯ ಗಾಳಿಯಲ್ಲೇ ಹಾರಿ ಹೋಗುತ್ತದಾ? ಅಷ್ಟೊಂದು ಜನರನ್ನು ಹೊತ್ತ ವಿಮಾನ ಆ ತ್ಯಾಜ್ಯವನ್ನೆಲ್ಲಾ ಎಲ್ಲಿ ವಿಸರ್ಜಿಸುತ್ತದೆ? ಎಂಬ ಹಲವು ವರ್ಷಗಳ ಕುತೂಹಲಕಾರಿ ಪ್ರಶ್ನೆಗೆ ಅಸಲಿ ಉತ್ತರವನ್ನು ನಿಮಗಾಗಿ ಹೊತ್ತು ತಂದಿದ್ದೇವೆ.

ವಿಮಾನದ ಟಾಯ್ಲೆಟ್​ ತ್ಯಾಜ್ಯವನ್ನು ಗಾಳಿಯಲ್ಲೇ ಎಸೀತಾರಾ? ಹಾಗಾದ್ರೆ ಅದು ಎಲ್ಲಿಗೆ ಹೋಗುತ್ತೆ? ಕುತೂಹಲಕಾರಿ ಸತ್ಯ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
Skanda
| Updated By: Digi Tech Desk

Updated on: May 17, 2021 | 1:33 PM

ವಿಮಾನಯಾನ ಸುರಕ್ಷಿತ ಹಾಗೂ ಸುಂದರ ಅನುಭೂತಿಯನ್ನು ನೀಡುವ ಪಯಣ ಎನ್ನುವುದು ಸತ್ಯವಾದರೂ ಅದರ ಜತೆಗೆ ಇಂದಿಗೂ ಹಲವು ಕಲ್ಪನೆಗಳು, ಊಹಾಪೋಹಗಳು, ಕುತೂಹಲಗಳು ವಿಮಾನದ ರೆಕ್ಕೆಯಂತೆಯೇ ನಮ್ಮೆಲ್ಲರ ಮನಸ್ಸಿನಲ್ಲಿ ಚಾಚಿಕೊಂಡಿವೆ. ಬೆಂಗಳೂರು, ಮಂಗಳೂರು ಸೇರಿದಂತೆ ವಿಮಾನ ನಿಲ್ದಾಣಗಳುಳ್ಳ ನಗರ ಪ್ರದೇಶದಲ್ಲಿ ಜನಿಸಿದವರ ಹೊರತಾಗಿ ಬಹುತೇಕರು ಆಗಸದಲ್ಲಿ ಹಾರುವ ಹಕ್ಕಿಯಷ್ಟಗಲದ ವಿಮಾನವನ್ನು ನೋಡಿರುವುದೇ ಹೆಚ್ಚು. ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ವಿಮಾನದ ಸದ್ದು ಕೇಳಿದರೆ ಮಕ್ಕಳಾದಿಯಾಗಿ ಎಲ್ಲರೂ ಮನೆಯಿಂದ ಆಚೆ ಬಂದು ಕತ್ತೆತ್ತಿ ಆಕಾಶದಲ್ಲಿ ಕಾಣುವ ಪುಟ್ಟ ವಿಮಾನಕ್ಕೆ ಹುಡುಕಾಡುತ್ತಾರೆ. ಆ ಸಂಭ್ರಮವನ್ನು ವಿಮಾನದಲ್ಲಿ ಓಡಾಡುವವರಿಗೆ ಹೇಳಲಿಕ್ಕಾಗುವುದಿಲ್ಲ ಬಿಡಿ! ವಿಮಾನದ ಶಬ್ಧ ಕೇಳಿದ್ದಕ್ಕಿಂತ ಮುಂದೆ ನೋಡಿದರೆ ವಿಮಾನ ಕಾಣುತ್ತದೆ ಎಂಬ ಲೆಕ್ಕಾಚಾರದಿಂದ ಹಿಡಿದು, ಮುಖವೆತ್ತಿ ಮೇಲೆ ನೋಡುವಾಗ ವಿಮಾನದಲ್ಲಿದ್ದವರು ಮಲ, ಮೂತ್ರ ವಿಸರ್ಜನೆ ಮಾಡಿದರೆ ನಮ್ಮ ಮೈಮೇಲೆ ಬೀಳುವುದಿಲ್ಲವಾ ಎಂಬ ಮುಗ್ಧತೆಯ ತನಕ ಒಂದೊಂದೇ ಕುತೂಹಲಗಳು ನಮ್ಮ ಸುತ್ತ ಗಿರಕಿ ಹೊಡೆಯುತ್ತವೆ. ಅಸಲಿಗೆ ಈ ಪ್ರಶ್ನೆ ತುಂಟಾಟದ್ದೆನಿಸಿದರೂ ವಿಮಾನದಲ್ಲಿ ಓಡಾಡುವ ಹಲವರಿಗೆ ಇದರ ಉತ್ತರ ಗೊತ್ತಿರಲಿಕ್ಕಿಲ್ಲ. ಅಂದಹಾಗೆ, ವಿಮಾನದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಆ ತ್ಯಾಜ್ಯ ಗಾಳಿಯಲ್ಲೇ ಹಾರಿ ಹೋಗುತ್ತದಾ? ಅಷ್ಟೊಂದು ಜನರನ್ನು ಹೊತ್ತ ವಿಮಾನ ಆ ತ್ಯಾಜ್ಯವನ್ನೆಲ್ಲಾ ಎಲ್ಲಿ ವಿಸರ್ಜಿಸುತ್ತದೆ? ಎಂಬ ಹಲವು ವರ್ಷಗಳ ಕುತೂಹಲಕಾರಿ ಪ್ರಶ್ನೆಗೆ ಅಸಲಿ ಉತ್ತರವನ್ನು ನಿಮಗಾಗಿ ಹೊತ್ತು ತಂದಿದ್ದೇವೆ.

ವಿಮಾನದಲ್ಲಿ ವಿಸರ್ಜಿಸಲ್ಪಟ್ಟ ಮನುಷ್ಯ ತ್ಯಾಜ್ಯ ಎಲ್ಲಿ ಹೋಗುತ್ತದೆ ಎನ್ನುವುದಕ್ಕಿಂತ ಮೊದಲು ಅದು ಗಾಳಿಯಲ್ಲಿ ತೇಲಿಬಂದು ಭೂಮಿಗೆ ಬೀಳುವುದಿಲ್ಲ ಎನ್ನುವುದನ್ನಂತೂ ಸ್ಪಷ್ಟಪಡಿಸಿಬಿಡುತ್ತೇವೆ. ಆಕಾಶದಲ್ಲಿ ಹಾರುವ ಕಾಗೆಯೋ, ಬೆಳಕ್ಕಿಯೋ ಅಪ್ಪಿತಪ್ಪಿ ಹಿಕ್ಕೆ ಹಾಕಿದರೆ ತಲೆ ಮೇಲೆ ಬೀಳಬಹುದೆಂಬ ಭಯ ವಿಮಾನದ ವಿಚಾರದಲ್ಲಿ ಬೇಕಿಲ್ಲ. ಪ್ರಯಾಣಿಕರು ವಿಸರ್ಜಿಸಿದ ತ್ಯಾಜ್ಯವೆಲ್ಲಾ ವಿಮಾನದ ಟ್ಯಾಂಕ್ ಒಂದರಲ್ಲಿ ಶೇಖರಿಸಲ್ಪಡುವ ವ್ಯವಸ್ಥೆ ಇರುವುದರಿಂದ ಆಕಾಶದಲ್ಲಿ ಹೋಗುಹೋಗುತ್ತಲೇ ಉದುರಿಸಿಕೊಂಡು ಹೋಗುವ ಪ್ರಮೇಯ ವಿಮಾನಕ್ಕೆ ಬರುವುದಿಲ್ಲ.

ಈಗಂತೂ ಬಹುತೇಕ ವಿಮಾನಗಳಲ್ಲಿ ವ್ಯಾಕ್ಯೂಮ್ ಸೌಲಭ್ಯ ಇರುವುದರಿಂದ ನೀರಿನ ಬಳಕೆ ಇರುವುದಿಲ್ಲ. ಅಂದರೆ, ಕಮೋಡ್​ನಿಂದ ವಿಸರ್ಜಿಸಲ್ಪಟ್ಟ ತ್ಯಾಜ್ಯ ವ್ಯಾಕ್ಯೂಮ್ ಸಹಾಯದಿಂದ ನೇರವಾಗಿ ಶೇಖರಣಾ ಟ್ಯಾಂಕ್​ಗೆ ಹೋಗುತ್ತದೆ. ಅಲ್ಲಿ ಘನ ಹಾಗೂ ದ್ರವ ರೂಪದ ತ್ಯಾಜ್ಯಗಳು ಬೇರ್ಪಡುವ ವ್ಯವಸ್ಥಿತ ತಂತ್ರಜ್ಞಾನವೂ ಇದ್ದು, ಪ್ರಯಾಣಿಕರು ವಿಸರ್ಜಿಸಿದ ಮಲ, ಮೂತ್ರಾದಿಗಳು ಅಲ್ಲಿಗೆ ಹೋಗುತ್ತವೆ. ಈ ವಿಮಾನದ ಟ್ಯಾಂಕ್​ಗಳು 200ಲೀಟರ್​ಗೂ ಅಧಿಕ ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಕಾರಣ ಅವು ಭರ್ತಿಯಾಗುವ ಸಾಧ್ಯತೆ ಇರುವುದಿಲ್ಲ.

ಪ್ರಯಾಣದ ಸಂದರ್ಭದಲ್ಲಿ ಒಂದೆಡೆ ಶೇಖರಿಸಲ್ಪಟ್ಟ ತ್ಯಾಜ್ಯಗಳನ್ನೆಲ್ಲಾ ವಿಮಾನ ನಿಲ್ದಾಣಕ್ಕೆ ತಲುಪಿದ ನಂತರ ಖಾಲಿ ಮಾಡಲಾಗುತ್ತದೆ. ನಿಲ್ದಾಣದ ಸಿಬ್ಬಂದಿ ವಿಮಾನದ ಟ್ಯಾಂಕ್​ಗೆ ಪೈಪ್​ ಒಂದನ್ನು ಜೋಡಿಸಿ ಅದು ನಿಲ್ದಾಣದ ಇನ್ನೊಂದು ಜಾಗಕ್ಕೆ ವರ್ಗವಾಗುವಂತೆ ಮಾಡುತ್ತಾರೆ. ಇದೆಲ್ಲಾ ಕೆಲವೇ ಕೆಲವು ನಿಮಿಷಗಳಲ್ಲಿ ಆಗಿಹೋಗುವ ಕೆಲಸವಾಗಿದ್ದು, ಖಾಲಿ ಮಾಡಿದ ನಂತರ ಅದನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡಲಾಗುತ್ತದೆ. ಇತ್ತೀಚೆಗೆ ಆಧುನಿಕ ಸೌಲಭ್ಯಗಳು ಬಂದ ನಂತರ ಇದರ ನಿರ್ವಹಣೆ ಇನ್ನೂ ಸುಲಭವಾದ ಕಾರಣ ಬಹುತೇಕ ಯಾಂತ್ರಿಕವಾಗಿಯೇ ಮಾಡಲಾಗುತ್ತದೆ.

ಇದು ವಿಮಾನದಲ್ಲಿ ತ್ಯಾಜ್ಯ ವಿಸರ್ಜನೆಗೆ ಇರುವ ಕ್ರಮಬದ್ಧ ಮಾರ್ಗವಾಗಿದ್ದು, ಇನ್ನುಮುಂದೆ ಯಾರಾದರೂ ಗಾಳಿಯಲ್ಲಿ ಹೋಗುವಾಗ ವಿಮಾನದಿಂದ ತ್ಯಾಜ್ಯ ಹೊರಬೀಳುತ್ತದಾ ಎಂಬ ಅನುಮಾನ ವ್ಯಕ್ತಪಡಿಸಿದರೆ ನೀವು ಈ ಉತ್ತರ ನೀಡುವ ಮೂಲಕ ಸಂದೇಹ ನಿವಾರಿಸಬಹುದು.

ಇದನ್ನೂ ಓದಿ: ಮನೆಯಲ್ಲಿದ್ದ ಚಿನ್ನಾಭರಣವನ್ನ ತ್ಯಾಜ್ಯಕ್ಕೆ ಎಸೆದು.. ನಂತ್ರ ಕಸದ ಲಾರಿ ಹಿಂದೆ ಓಡಿದ ಮಹಿಳೆ, ಮುಂದೇನಾಯ್ತು?

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್