ಮನೆಯಲ್ಲಿದ್ದ ಚಿನ್ನಾಭರಣವನ್ನ ತ್ಯಾಜ್ಯಕ್ಕೆ ಎಸೆದು.. ನಂತ್ರ ಕಸದ ಲಾರಿ ಹಿಂದೆ ಓಡಿದ ಮಹಿಳೆ, ಮುಂದೇನಾಯ್ತು?
ಮುಂಬೈ: ಹಬ್ಬ ಹರಿದಿನಗಳೆಂದರೆ ಭಾರತೀಯರಿಗೆ ಅದೇನೋ ಭಾವನಾತ್ಮಕ ನಂಟು. ಹಬ್ಬಗಳು ಹತ್ತಿರವಾಗುತ್ತಿದ್ದಂತೆಯೇ ಮನೆಯನ್ನು ಚೊಕ್ಕಗೊಳಿಸಿ, ಹಳೆಯದಾದ ವಸ್ತುಗಳನ್ನು ತೊರೆದು, ಹೊಸತನವನ್ನು ಸ್ವಾಗತಿಸಲು ಸಜ್ಜಾಗುತ್ತಾರೆ. ಆದರೆ, ಮಹಾರಾಷ್ಟ್ರದ ಪುಣೆಯ ಪಿಂಪ್ಳೆ ಸೌದಾಗರ್ ಏರಿಯಾದ ನಿವಾಸಿಯೊಬ್ಬರು ದೀಪಾವಳಿ ಹಬ್ಬಕ್ಕೆಂದು ಮನೆಯನ್ನು ಸ್ವಚ್ಛಗೊಳಿಸಲು ಹೋಗಿ ಫಜೀತಿಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ. ರೇಖಾ ಸೇಲುಕಾರ್ ಎಂಬುವವರು ಹೊಸತನವನ್ನು ಬರಮಾಡಿಕೊಳ್ಳುವ ಭರದಲ್ಲಿ ಮನೆಯಲ್ಲಿದ್ದ ಹಳೆಯ ವಸ್ತುಗಳನ್ನೆಲ್ಲಾ ಕಸದ ತೊಟ್ಟಿಗೆ ಬಿಸಾಡಿದರು. ಈ ನಡುವೆ, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನೊಳಗೊಂಡ ಬ್ಯಾಗ್ವೊಂದನ್ನು ಸಹ ಕಸದ ತೊಟ್ಟಿಗೆ […]
ಮುಂಬೈ: ಹಬ್ಬ ಹರಿದಿನಗಳೆಂದರೆ ಭಾರತೀಯರಿಗೆ ಅದೇನೋ ಭಾವನಾತ್ಮಕ ನಂಟು. ಹಬ್ಬಗಳು ಹತ್ತಿರವಾಗುತ್ತಿದ್ದಂತೆಯೇ ಮನೆಯನ್ನು ಚೊಕ್ಕಗೊಳಿಸಿ, ಹಳೆಯದಾದ ವಸ್ತುಗಳನ್ನು ತೊರೆದು, ಹೊಸತನವನ್ನು ಸ್ವಾಗತಿಸಲು ಸಜ್ಜಾಗುತ್ತಾರೆ. ಆದರೆ, ಮಹಾರಾಷ್ಟ್ರದ ಪುಣೆಯ ಪಿಂಪ್ಳೆ ಸೌದಾಗರ್ ಏರಿಯಾದ ನಿವಾಸಿಯೊಬ್ಬರು ದೀಪಾವಳಿ ಹಬ್ಬಕ್ಕೆಂದು ಮನೆಯನ್ನು ಸ್ವಚ್ಛಗೊಳಿಸಲು ಹೋಗಿ ಫಜೀತಿಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.
ರೇಖಾ ಸೇಲುಕಾರ್ ಎಂಬುವವರು ಹೊಸತನವನ್ನು ಬರಮಾಡಿಕೊಳ್ಳುವ ಭರದಲ್ಲಿ ಮನೆಯಲ್ಲಿದ್ದ ಹಳೆಯ ವಸ್ತುಗಳನ್ನೆಲ್ಲಾ ಕಸದ ತೊಟ್ಟಿಗೆ ಬಿಸಾಡಿದರು. ಈ ನಡುವೆ, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನೊಳಗೊಂಡ ಬ್ಯಾಗ್ವೊಂದನ್ನು ಸಹ ಕಸದ ತೊಟ್ಟಿಗೆ ಎಸೆದುಬಿಟ್ಟಿದರು. ಇಷ್ಟಾದರೂ, ಸುಮಾರು ಹೊತ್ತಿನ ತನಕ ಬ್ಯಾಗ್ ಕಾಣೆಯಾಗಿರುವುದು ರೇಖಾ ಗಮನಕ್ಕೆ ಬರಲೇಯಿಲ್ಲ. ಆಮೇಲೆ, ಸಡನ್ ಆಗಿ ನೆನಪಾಗಿ ಬ್ಯಾಗ್ ಕಾಣದೆ ಇದ್ದಾಗ ಮನೆಯೆಲ್ಲಾ ಹುಡುಕಾಡಿದ್ದಾರೆ. ಕೊನೆಗೆ, ಕಸದ ಜೊತೆ ಬ್ಯಾಗ್ನ ಬಿಸಾಡಿರುವುದು ಅವರಿಗೆ ಹೊಳೆದಿದೆ.
ತಕ್ಷಣ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಂಜಯ್ ಕುಟೆ ಎಂಬುವವರನ್ನು ಸಂಪರ್ಕಿಸಿದ ಸೇಲುಕಾರ್ ಕಸದ ಪಾಲಾದ ತಮ್ಮ ಮಾಂಗಲ್ಯ ಸರ, ಎರಡು ಜೊತೆ ಗೆಜ್ಜೆ ಸೇರಿದಂತೆ 3 ಲಕ್ಷ ರೂಪಾಯಿ ಮೌಲ್ಯದ ಆಭರಣಗಳಿದ್ದ ಬ್ಯಾಗ್ನ ಹುಡುಕಿಕೊಡುವಂತೆ ಮನವಿ ಮಾಡಿಕೊಂಡರು. ಕೂಡಲೇ ಕಾರ್ಯಪ್ರವೃತ್ತರಾದ ಸಂಜಯ್ ಸ್ಥಳೀಯ ಪತ್ರಿಕೆಗೆ ಮಾಹಿತಿ ನೀಡಿದರೂ ಅಷ್ಟರಲ್ಲಾಗಲೇ ಬಿಸಾಡಿದ್ದ ಕಸ ಇನ್ನೊಂದು ಗಾಡಿಗೆ ವರ್ಗಾಯಿಸಿ ವಿಲೇವಾರಿ ಮಾಡಲಾಗಿತ್ತು. ನಂತರ, ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಸುಶೀಲ್ ಕಸದ ಗಾಡಿಯ ವಿವರ ತರಿಸಿಕೊಂಡು ಡೇಟಾ ಅನಾಲಿಸ್ಟ್ ಹೇಮಂತ್ ಲಖನ್ ಎಂಬುವವರ ಸಹಾಯದಿಂದ ವಾಹನ ಎಲ್ಲಿಗೆ ಹೋಗಿದೆ ಎಂದು ಪತ್ತೆಮಾಡಿದ್ದಾರೆ.
ಕೊನೆಗೆ, ಕಸವನ್ನು ಜಾಲಾಡಿದಾಗ ರೇಖಾ ಅವರ ಬ್ಯಾಗ್ ಪತ್ತೆಯಾಗಿದ್ದು ಅದನ್ನು ಅಧಿಕಾರಿಗಳ ಸಮ್ಮುಖದಲ್ಲಿ ಅವರಿಗೆ ಹಸ್ತಾಂತರಿಸಲಾಗಿದೆ. ಲಕ್ಷ್ಮೀ ಪೂಜೆಯ ಸಂದರ್ಭದಲ್ಲೇ ಕಸದ ಪಾಲಾಗಿದ್ದ ಬಂಗಾರ ಮತ್ತೆ ತಮ್ಮ ಕೈ ಸೇರಿರುವುದು ಸೇಲುಕಾರ್ ಕುಟುಂಬಕ್ಕೆ ಸಾಕ್ಷಾತ್ ಲಕ್ಷ್ಮಿಯೇ ಮರಳಿ ಬಂದಷ್ಟು ಸಂತಸವಾಗಿದೆ. ತಾವು ಮಾಡಿದ ಸಣ್ಣ ತಪ್ಪಿನಿಂದ ಅಧಿಕಾರಿಗಳು ಶ್ರಮ ಪಡುವಂತಾಗಿದ್ದಕ್ಕೆ ಕ್ಷಮೆ ಕೇಳಿ ನಂತರ ಕೃತಜ್ಞತೆ ಸಲ್ಲಿಸಿದ್ದಾರೆ.