ಸ್ನೇಹಿತನ ಜನ್ಮದಿನವನ್ನು ಆಚರಿಸಲು ನದಿ ದಡಕ್ಕೆ ಹೋದ ನಾಲ್ವರು ನೀರಿನಲ್ಲಿ ಮುಳುಗಿ ಸಾವು

ಸ್ನೇಹಿತನ ಜನ್ಮದಿನವನ್ನು ಆಚರಿಸಲು ನದಿ ದಡಕ್ಕೆ ಹೋದ ನಾಲ್ವರು ನೀರಿನಲ್ಲಿ ಮುಳುಗಿ ಸಾವು
ಸಾಂದರ್ಭಿಕ ಚಿತ್ರ

ಮುಲುಗು: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ದೀಪಾವಳಿ ದಿನದಂದು ದುರಂತವೊಂದು ಸಂಭವಿಸಿದೆ. ಗೋದಾವರಿ ನದಿಯಲ್ಲಿ ಮುಳುಗಿ ನಾಲ್ಕು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಸ್ನೇಹಿತನ ಜನ್ಮದಿನವನ್ನು ಆಚರಿಸಲು ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಮುಲುಗು ಜಿಲ್ಲೆಯ ವೆಂಕಟಪುರಂ ಗ್ರಾಮದ ರಂಗರಾಜಪುರಂ ಕಾಲೋನಿ ಬಳಿಯ ಗೋದಾವರಿ ನದಿ ತೀರದಲ್ಲಿ ಹುಟ್ಟುಹಬ್ಬ ಆಚರಿಸಲು ಬಂದ ಯುವಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮೃತ ಯುವಕರನ್ನು ರಾಯವರಪು ಪ್ರಕಾಶ್ (19), ತುಮ್ಮ ಕಾರ್ತಿಕ್ (19), ಕೆ ಅನ್ವೇಶ್ (20) ಮತ್ತು ಎಸ್ ಶ್ರೀಕಾಂತ್ (20) ಎಂದು ಗುರುತಿಸಲಾಗಿದೆ. […]

Ayesha Banu

|

Nov 16, 2020 | 8:54 AM

ಮುಲುಗು: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ದೀಪಾವಳಿ ದಿನದಂದು ದುರಂತವೊಂದು ಸಂಭವಿಸಿದೆ. ಗೋದಾವರಿ ನದಿಯಲ್ಲಿ ಮುಳುಗಿ ನಾಲ್ಕು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಸ್ನೇಹಿತನ ಜನ್ಮದಿನವನ್ನು ಆಚರಿಸಲು ಬಂದಿದ್ದಾಗ ಈ ಘಟನೆ ಸಂಭವಿಸಿದೆ.

ಮುಲುಗು ಜಿಲ್ಲೆಯ ವೆಂಕಟಪುರಂ ಗ್ರಾಮದ ರಂಗರಾಜಪುರಂ ಕಾಲೋನಿ ಬಳಿಯ ಗೋದಾವರಿ ನದಿ ತೀರದಲ್ಲಿ ಹುಟ್ಟುಹಬ್ಬ ಆಚರಿಸಲು ಬಂದ ಯುವಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮೃತ ಯುವಕರನ್ನು ರಾಯವರಪು ಪ್ರಕಾಶ್ (19), ತುಮ್ಮ ಕಾರ್ತಿಕ್ (19), ಕೆ ಅನ್ವೇಶ್ (20) ಮತ್ತು ಎಸ್ ಶ್ರೀಕಾಂತ್ (20) ಎಂದು ಗುರುತಿಸಲಾಗಿದೆ.

ಶಶಿ ಕುಮಾರ್​ನ ಜನ್ಮದಿನವನ್ನು ಆಚರಿಸಲು 16 ಸ್ನೇಹಿತರ ಗುಂಪು ನದಿಯ ದಡಕ್ಕೆ ಬಂದಿತ್ತು. ಘಟನೆ ಸ್ಥಳವು ವೆಂಕಟಪುರಂನಿಂದ 3 ಕಿ.ಮೀ ದೂರದಲ್ಲಿದೆ. 16 ಜನರಲ್ಲಿ ನಾಲ್ವರು ಗೋದಾವರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ಯುವಕರು ಆಳದ ಅಂದಾಜನ್ನು ಲೆಕ್ಕ ಹಾಕದೆ ಈ ರೀತಿ ಸಾಹಸ ಮಾಡಲು ಹೋಗಿ ಸಾವನ್ನಪ್ಪಿದ್ದಾರೆ. ಉಳಿದ ಯುವಕರು ಪೊಲೀಸರಿಗೆ ಹಾಗೂ ಗ್ರಾಮಸ್ಥರಿಗೆ ಘಟನೆಯ ಬಗ್ಗೆ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಂಕಟಪುರಂ ಇನ್ಸ್‌ಪೆಕ್ಟರ್, ಕೆ.ಶಿವ ಪ್ರಸಾದ್ ಮತ್ತು ಸಬ್ ಇನ್ಸ್‌ಪೆಕ್ಟರ್ ಎಚ್.ತಿರುಪತಿ ಮತ್ತು ಇತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿ ಯುವಕರ ಶವ ಹುಡುಕಲು ಹರ ಸಾಹಸ ಪಟ್ಟಿದ್ದಾರೆ. ಕೊನೆಗೆ ಈಜುಗಾರರು ಮತ್ತು ಮೀನುಗಾರರ ಸಹಾಯದಿಂದ ದೇಹಗಳನ್ನು ಪತ್ತೆ ಮಾಡಿ ಹೊರ ತೆಗೆಯಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada