ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ಶಿಫ್ಟ್
ದೆಹಲಿ: ಅಕ್ಟೋಬರ್ 1 ರಂದು ಕೊರೊನಾ ಸೋಂಕು ಧೃಡಪಟ್ಟ ಬಳಿಕ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರನ್ನು ಗುರಗಾಂವ್‌ನ ಮೆಡಂತಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಇಂದು ಆರೋಗ್ಯದಲ್ಲಿ ಕೊಂಚ ಏರುಪೇರಾದ ಕಾರಣದಿಂದಾಗಿ ಅಹ್ಮದ್ ಪಟೇಲ್ ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ಅವರ ಕುಟುಂಬ ತಿಳಿಸಿದೆ. ಹಿರಿಯ ರಾಜಕಾರಣಿ ಅಹ್ಮದ್ ಪಟೇಲ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಮಗ ಫೈಸಲ್ ಪಟೇಲ್ ಪೋಸ್ಟ್ ಮಾಡಿದ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಅಹ್ಮದ್ ಪಟೇಲ್ ಅವರಿಗೆ ಕೆಲವು […]
ದೆಹಲಿ: ಅಕ್ಟೋಬರ್ 1 ರಂದು ಕೊರೊನಾ ಸೋಂಕು ಧೃಡಪಟ್ಟ ಬಳಿಕ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರನ್ನು ಗುರಗಾಂವ್‌ನ ಮೆಡಂತಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಆದರೆ ಇಂದು ಆರೋಗ್ಯದಲ್ಲಿ ಕೊಂಚ ಏರುಪೇರಾದ ಕಾರಣದಿಂದಾಗಿ ಅಹ್ಮದ್ ಪಟೇಲ್ ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ಅವರ ಕುಟುಂಬ ತಿಳಿಸಿದೆ. ಹಿರಿಯ ರಾಜಕಾರಣಿ ಅಹ್ಮದ್ ಪಟೇಲ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಮಗ ಫೈಸಲ್ ಪಟೇಲ್ ಪೋಸ್ಟ್ ಮಾಡಿದ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಅಹ್ಮದ್ ಪಟೇಲ್ ಅವರಿಗೆ ಕೆಲವು ವಾರಗಳ ಹಿಂದೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಈಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುರಗಾಂವ್‌ನ ಮೆಡಂತಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ. ಅಲ್ಲದೆ ಅವರ ಶೀಘ್ರ ಚೇತರಿಕೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕೆಂದು ನಾವು ವಿನಂತಿಸುತ್ತೇವೆ ಎಂದು ಫೈಸಲ್ ಪಟೇಲ್ ಟ್ವೀಟ್ ಮಾಡಿದ್ದಾರೆ.
— Faisal Patel (@mfaisalpatel) November 15, 2020