ದೆಹಲಿಯನ್ನು ಆವರಿಸಿದ ಪಟಾಕಿ ಹೊಗೆ: ರಾಷ್ಟ್ರ ರಾಜಧಾನಿಯಲ್ಲಿ ಹದಗೆಟ್ಟ ವಾಯು ಗುಣಮಟ್ಟ
ದೆಹಲಿ: ಪಟಾಕಿ ಬಿಟ್ಟಾಕಿ ಅಂದ್ರೂ ಕೇಳದೆ, ಎಗ್ಗಿಲ್ಲದೆ ಪಟಾಕಿ ಸಿಡಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಜನರು ಪಟಾಕಿ ನಿಷೇಧವನ್ನು ನಿರ್ಲಕ್ಷಿಸಿರುವ ಪರಿಣಾಮವಾಗಿ ನಗರದ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಕಳೆದ ನಾಲ್ಕು ವರ್ಷಗಳ ದೀಪಾವಳಿ ಹಬ್ಬದ ವೇಳೆಯಿದ್ದ ವಾಯು ಗುಣಮಟ್ಟವನ್ನು ಹೋಲಿಸಿದರೆ ಈ ಬಾರಿಯ ದೀಪಾವಳಿಯಲ್ಲಿ ಅತ್ಯಂತ ಕಳಪೆ ವಾಯು ಗುಣಮಟ್ಟ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) 414 ದಾಖಲಾಗಿದೆ. ಜೊತೆಗೆ, ಭಾನುವಾರ […]
ದೆಹಲಿ: ಪಟಾಕಿ ಬಿಟ್ಟಾಕಿ ಅಂದ್ರೂ ಕೇಳದೆ, ಎಗ್ಗಿಲ್ಲದೆ ಪಟಾಕಿ ಸಿಡಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಜನರು ಪಟಾಕಿ ನಿಷೇಧವನ್ನು ನಿರ್ಲಕ್ಷಿಸಿರುವ ಪರಿಣಾಮವಾಗಿ ನಗರದ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಕಳೆದ ನಾಲ್ಕು ವರ್ಷಗಳ ದೀಪಾವಳಿ ಹಬ್ಬದ ವೇಳೆಯಿದ್ದ ವಾಯು ಗುಣಮಟ್ಟವನ್ನು ಹೋಲಿಸಿದರೆ ಈ ಬಾರಿಯ ದೀಪಾವಳಿಯಲ್ಲಿ ಅತ್ಯಂತ ಕಳಪೆ ವಾಯು ಗುಣಮಟ್ಟ ಕಂಡುಬಂದಿದೆ.
ಕಳೆದ 24 ಗಂಟೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) 414 ದಾಖಲಾಗಿದೆ. ಜೊತೆಗೆ, ಭಾನುವಾರ ಮಧ್ಯಾಹ್ನದ ವೇಳೆಗೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಗಾಳಿಯ ಗುಣಮಟ್ಟ ಕೊಂಚ ಸುಧಾರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
2019ರ ದೀಪಾವಳಿಯಲ್ಲಿ (ಅಕ್ಟೋಬರ್ 27) ವಾಯು ಗುಣಮಟ್ಟ ಸೂಚ್ಯಂಕವು 337 (AQI) ಪ್ರದರ್ಶಿಸಿತ್ತು. ನಂತರದ ಎರಡು ದಿನಗಳ ಕಾಲ, ಅತ್ಯಂತ ಕಳಪೆ ವಾಯು ಗುಣಮಟ್ಟ ಮುಂದುವರಿದಿದ್ದು 368 ಮತ್ತು 400 (AQI) ವರದಿಯಾಗಿತ್ತು. 2018ರ ದೀಪಾವಳಿಯಲ್ಲಿ, ವಾಯು ಗುಣಮಟ್ಟ ಸೂಚ್ಯಂಕ 281 (AQI) ಆಗಿತ್ತು. ಮರುದಿನ 390 (AQI) ಆಗಿದ್ದು, ಮೂರು ದಿನಗಳ ಕಾಲ ಅತ್ಯಂತ ಕಳಪೆ ವಾಯು ಗುಣಮಟ್ಟ ಕಂಡುಬಂದಿತ್ತು. 2017ರ ದೀಪಾವಳಿಯಲ್ಲಿ (ಅಕ್ಟೋಬರ್ 19), 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 319 (AQI) ಆಗಿತ್ತು. ನಂತರದ ಒಂದು ದಿನ ಅತ್ಯಂತ ಕಳಪೆ ವಾಯು ಗುಣಮಟ್ಟ ಮುಂದುವರಿದಿತ್ತು.
ಈ ನಡುವೆ, ಪಟಾಕಿ ಹೊಡೆದಿರುವ ಕಾರಣಕ್ಕೆ 32 ಜನರ ಮೇಲೆ ಕೇಸ್ ದಾಖಲಿಸಿರುವ ದೆಹಲಿ ಪೊಲೀಸರು, 55 ಪಟಾಕಿ ವ್ಯಾಪಾರಿಗಳನ್ನು ಸಹ ಬಂಧಿಸಿದ್ದಾರೆ. ಜೊತೆಗೆ, 3,407.85 ಕೆ.ಜಿ ಪಟಾಕಿ ವಶಪಡಿಸಿಕೊಂಡಿದ್ದಾರೆ.