ಅಕ್ಕನ ಮಗಳ ಮೊಬೈಲ್​ ಎಕ್ಸ್​ಚೇಂಜ್​ ಮಾಡಲ್ಲ ಎಂದಿದ್ದಕ್ಕೆ.. ಅಂಗಡಿ ಮುಂದೆ ಬೆಂಕಿ ಹಚ್ಚಿಕೊಂಡುಬಿಟ್ಟ!

ದೆಹಲಿ: ಮೊಬೈಲ್ ಫೋನ್​ ಬದಲಿಸಿಕೊಡಲು ನಿರಾಕರಿಸಿದ ಅಂಗಡಿ ಮಾಲೀಕನ ನಡೆಗೆ ಬೇಸತ್ತು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಗರದ ರೋಹಿಣಿಯಲ್ಲಿ ನಡೆದಿದೆ. 40 ವರ್ಷದ ಭೀಮ್ ಸಿಂಗ್ ಎಂಬಾತ ತನ್ನ ಅಕ್ಕನ ಮಗಳ ಆನ್​ಲೈನ್ ಕ್ಲಾಸ್​ಗಾಗಿ ಒಂದು ತಿಂಗಳ ಹಿಂದೆಯಷ್ಟೇ ದಕ್ಷಿಣ ರೋಹಿಣಿ ಮಾಲ್​ನಲ್ಲಿರುವ ಮೊಬೈಲ್ ಫೋನ್​ ಮಳಿಗೆಯಲ್ಲಿ ಮೊಬೈಲ್ ಒಂದನ್ನು ಖರೀದಿಸಿದ್ದನು. ಆದರೆ, ಆ ಮೊಬೈಲ್ ಸರಿಯಾಗಿ ಕೆಲಸ ಮಾಡದ ಕಾರಣ ಅದನ್ನು ಬದಲಿಸಿಕೊಡುವಂತೆ ಅಂಗಡಿ ಮಾಲೀಕನಿಗೆ ಭೀಮ್ ಸಿಂಗ್ ಮನವಿ ಮಾಡಿಕೊಂಡನು. ಆದರೆ, […]

ಅಕ್ಕನ ಮಗಳ ಮೊಬೈಲ್​ ಎಕ್ಸ್​ಚೇಂಜ್​ ಮಾಡಲ್ಲ ಎಂದಿದ್ದಕ್ಕೆ.. ಅಂಗಡಿ ಮುಂದೆ ಬೆಂಕಿ ಹಚ್ಚಿಕೊಂಡುಬಿಟ್ಟ!
ಪ್ರಾತಿನಿಧಿಕ ಚಿತ್ರ
Follow us
KUSHAL V
|

Updated on: Nov 15, 2020 | 1:25 PM

ದೆಹಲಿ: ಮೊಬೈಲ್ ಫೋನ್​ ಬದಲಿಸಿಕೊಡಲು ನಿರಾಕರಿಸಿದ ಅಂಗಡಿ ಮಾಲೀಕನ ನಡೆಗೆ ಬೇಸತ್ತು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಗರದ ರೋಹಿಣಿಯಲ್ಲಿ ನಡೆದಿದೆ. 40 ವರ್ಷದ ಭೀಮ್ ಸಿಂಗ್ ಎಂಬಾತ ತನ್ನ ಅಕ್ಕನ ಮಗಳ ಆನ್​ಲೈನ್ ಕ್ಲಾಸ್​ಗಾಗಿ ಒಂದು ತಿಂಗಳ ಹಿಂದೆಯಷ್ಟೇ ದಕ್ಷಿಣ ರೋಹಿಣಿ ಮಾಲ್​ನಲ್ಲಿರುವ ಮೊಬೈಲ್ ಫೋನ್​ ಮಳಿಗೆಯಲ್ಲಿ ಮೊಬೈಲ್ ಒಂದನ್ನು ಖರೀದಿಸಿದ್ದನು.

ಆದರೆ, ಆ ಮೊಬೈಲ್ ಸರಿಯಾಗಿ ಕೆಲಸ ಮಾಡದ ಕಾರಣ ಅದನ್ನು ಬದಲಿಸಿಕೊಡುವಂತೆ ಅಂಗಡಿ ಮಾಲೀಕನಿಗೆ ಭೀಮ್ ಸಿಂಗ್ ಮನವಿ ಮಾಡಿಕೊಂಡನು. ಆದರೆ, ಕಂಪನಿಯ ನೀತಿಯನ್ನು ಉಲ್ಲೇಖಿಸಿ ಅಂಗಡಿ ಮಾಲೀಕ ಮೊಬೈಲ್​ ಎಕ್ಸ್​ಚೇಂಜ್​ ಮಾಡಲು ನಿರಾಕರಿಸಿದ್ದಾನೆ. ಆತನ ವರ್ತನೆಯಿಂದ ಬೇಸತ್ತು ಸಿಂಗ್ ಕಳೆದ ಶುಕ್ರವಾರ ಮಧ್ನಾಹ್ನ ಅಂಗಡಿಯ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಸದ್ಯ, ಘಟನೆಯಲ್ಲಿ ತೀವ್ರ ಸುಟ್ಟು ಗಾಯಗಳಾಗಿರುವ ಸಿಂಗ್​ನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೀಮ್​ ಸಿಂಗ್​ ಸಹೋದರಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು ಎಂದು ಹೇಳಲಾಗಿದೆ. ಆಕೆಯ ಅಗಲಿಕೆಯ ನಂತರ 12ನೇ ತರಗತಿಯಲ್ಲಿ ಓದುತಿದ್ದ ಸಹೋದರಿಯ ಮಗಳ ಆನ್​ಲೈನ್​ ಕ್ಲಾಸ್​ಗಾಗಿ 14 ಸಾವಿರ ರೂ. ಖರ್ಚು ಮಾಡಿ ಫೋನ್ ಖರೀದಿಸಿದ್ದರು ಎಂದು ಸಹ ತಿಳಿದುಬಂದಿದೆ.

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ