AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ್ ಸಿಎಮ್ ಸಹ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು | Uttarakhand CM too celebrates Deepavali with soldiers

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿಸ್ಸಂದೇಹವಾಗಿ ಒಂದು ಹೊಸ ಪರಂಪರೆಯನ್ನು ಹುಟ್ಟುಹಾಕಿದ್ದಾರೆ. ಪ್ರತಿಸಲ ದೀಪಾವಳಿ ಹಬ್ಬವನ್ನು ಗಡಿ ಕಾಯುವ ಸೈನಿಕರೊಂದಿಗೆ ಅವರು ಆಚರಿಸುತ್ತಿರುವುದು ಇತರ ನಾಯಕರಿಗೂ ಪ್ರೇರೇಪಣೆ ಒದಗಿಸುತ್ತಿದೆ. ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಈ ಬಾರಿಯ ದೀಪಾವಳಿಯನ್ನು ಶನಿವಾರದಂದು ಭಾರತ–ಚೀನಾ ಗಡಿ ಭಾಗದಲ್ಲಿರುವ ಉತ್ತರಾಕ್ಷಿಯಲ್ಲಿ ಇಂಡೋ–ಟಬೆಟಿಯನ್ ಬಾರ್ಡರ್ ಪೊಲೀಸ್ ದಳದೊಂದಿಗೆ (ಐಟಿಬಿಪಿ) ಆಚರಿಸಿದ್ದಾರೆ. ಕೊಪಾಂಗ್ ಪ್ರದೇಶದಲ್ಲಿ ಐಟಿಬಿಪಿ ಜವಾನರನ್ನು ಭೇಟಿಯಾದ ನಂತರ ರಾವತ್, ಜಿಲ್ಲೆಯ ಹರ್ಸಿಲ್ ಕಣಿವೆ ಪ್ರದೇಶದಲ್ಲಿ ಸ್ಥಿತಗೊಂಡಿರುವ ಸೇನಾ ತುಕುಡಿಗಳೊಂದಿಗೆ […]

ಉತ್ತರಾಖಂಡ್ ಸಿಎಮ್ ಸಹ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು | Uttarakhand CM too celebrates Deepavali with soldiers
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 14, 2020 | 8:34 PM

Share

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿಸ್ಸಂದೇಹವಾಗಿ ಒಂದು ಹೊಸ ಪರಂಪರೆಯನ್ನು ಹುಟ್ಟುಹಾಕಿದ್ದಾರೆ. ಪ್ರತಿಸಲ ದೀಪಾವಳಿ ಹಬ್ಬವನ್ನು ಗಡಿ ಕಾಯುವ ಸೈನಿಕರೊಂದಿಗೆ ಅವರು ಆಚರಿಸುತ್ತಿರುವುದು ಇತರ ನಾಯಕರಿಗೂ ಪ್ರೇರೇಪಣೆ ಒದಗಿಸುತ್ತಿದೆ.

ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಈ ಬಾರಿಯ ದೀಪಾವಳಿಯನ್ನು ಶನಿವಾರದಂದು ಭಾರತಚೀನಾ ಗಡಿ ಭಾಗದಲ್ಲಿರುವ ಉತ್ತರಾಕ್ಷಿಯಲ್ಲಿ ಇಂಡೋಟಬೆಟಿಯನ್ ಬಾರ್ಡರ್ ಪೊಲೀಸ್ ದಳದೊಂದಿಗೆ (ಐಟಿಬಿಪಿ) ಆಚರಿಸಿದ್ದಾರೆ.

ಕೊಪಾಂಗ್ ಪ್ರದೇಶದಲ್ಲಿ ಐಟಿಬಿಪಿ ಜವಾನರನ್ನು ಭೇಟಿಯಾದ ನಂತರ ರಾವತ್, ಜಿಲ್ಲೆಯ ಹರ್ಸಿಲ್ ಕಣಿವೆ ಪ್ರದೇಶದಲ್ಲಿ ಸ್ಥಿತಗೊಂಡಿರುವ ಸೇನಾ ತುಕುಡಿಗಳೊಂದಿಗೆ ಸಮಯ ಕಳೆದರು.

ಆಮೇಲೆ ಅವರನ್ನು ಉದ್ದೇಶಿಸಿ ಮಾತಾಡಿದ ರಾವತ್, ‘‘ಇಂದು ನಿಮ್ಮೊಂದಿಗೆ ಸಮಯ ಕಳೆಯುವ ಸಂದರ್ಭ ಸಿಕ್ಕಿದ್ದು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ. ನಮ್ಮ ರಾಜ್ಯವು ಸೇನೆ ಮತ್ತು ಅರೆ ಸೇನಾ ಪಡೆಗಳೊಂದಿಗೆ ಗಾಢವಾದ ಸಂಬಂಧ ಹೊಂದಿದೆ. ನನ್ನ ತಂದೆ ಸಹ ಸೇನೆಯಲ್ಲಿದ್ದರು, ಈ ಕಾರಣದಿಂದಲೇ ನಾನು ಯೋಧರೊಂದಿಗೆ ವಿಶೇಷವಾದ ಬಾಂಧವ್ಯವನ್ನು ಹೊದಿದ್ದೇನೆ,’’ ಎಂದು ಹೇಳಿದರು. ‘‘ತಮ್ಮ ಕುಟುಂಬದಿಂದ ಸಹಸ್ರಾರು ಮೈಲಿ ದೂರದಲ್ಲಿದ್ದುಕೊಂಡು, ನಾವು ನೆಮ್ಮದಿಯ ಜೀವನ್ ನಡೆಸಬೇಕೆಂಬ ನಿಸ್ವಾರ್ಥ ಮನೋಬಾದಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ನಾವು ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಮ್ಮ ಸುರತಕ್ಷತೆಗಾಗಿ ತಮ್ಮ ಜೀವವನ್ನೇ ಬಲಿಕೊಡುವ ನಮ್ಮ ಯೋಧರ ತ್ಯಾಗವನ್ನು ದೇಶವು ಕೃತಜ್ಞತೆಯಿಂದ ನೆನೆಯುತ್ತದೆ,’’ ಎಂದು ರಾವತ್ ಹೇಳಿದರು.