4 ಬಾರಿ MLA ಆದ್ರೂ ಪುಟ್ಟ ಮನೆಯಲ್ಲಿ ವಾಸ್ತವ್ಯ: ಶಾಸಕನ ವೈರಲ್​ ಫೋಟೋ ಹಿಂದಿನ ಅಸಲಿಯತ್ತು ಏನು?

ಬಿಹಾರದ ಬಲ್ರಾಮ್​ಪುರದಲ್ಲಿ ಐದನೇ ಬಾರಿ ಶಾಸಕರಾಗಿ ಆಯ್ಕೆಯಾದ ಸಿಪಿಐ(ಎಂ)(ಎಲ್) ಪಕ್ಷದ ಮೆಹಬೂಬ್ ಅಲಮ್ ಅವರ ಮಗ ಚಿಕ್ಕ ಮನೆಯಲ್ಲಿ ಶುಭಾಶಯ ಕೋರುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಅಲ್ಲದೇ ಅಲನ್ ಸರಳ ಜೀವಿ, ಸ್ವಂತ ಮನೆಯೂ ಇಲ್ಲದ ಶಾಸಕ ಎಂಬ ವರದಿಗಳು ಆಂಗ್ಲ ಸುದ್ದಿತಾಣಗಳಲ್ಲಿ ಹರಿದಾಡುತ್ತಿವೆ. ಅಲನ್ ನಿಜಕ್ಕೂ ಬಡವರೇ? ಈ ಮಾಹಿತಿಯ ಸತ್ಯಾಸತ್ಯತೆಯನ್ನು ಬೆನ್ನತ್ತಿದ ಟಿವಿ9 ಡಿಜಿಟಲ್ ತಂಡಕ್ಕೆ ಹಲವು ಅಚ್ಚರಿಯ ಮಾಹಿತಿಗಳು ಲಭಿಸಿತು. ಈ ಬಾರಿ ಚುನಾವಣೆಯಲ್ಲಿ ಅವರು ಘೋಷಿಸಿದ ಆಸ್ತಿಯ […]

4 ಬಾರಿ MLA ಆದ್ರೂ ಪುಟ್ಟ ಮನೆಯಲ್ಲಿ ವಾಸ್ತವ್ಯ: ಶಾಸಕನ ವೈರಲ್​ ಫೋಟೋ ಹಿಂದಿನ ಅಸಲಿಯತ್ತು ಏನು?
Follow us
ಪೃಥ್ವಿಶಂಕರ
|

Updated on: Nov 14, 2020 | 7:16 PM

ಬಿಹಾರದ ಬಲ್ರಾಮ್​ಪುರದಲ್ಲಿ ಐದನೇ ಬಾರಿ ಶಾಸಕರಾಗಿ ಆಯ್ಕೆಯಾದ ಸಿಪಿಐ(ಎಂ)(ಎಲ್) ಪಕ್ಷದ ಮೆಹಬೂಬ್ ಅಲಮ್ ಅವರ ಮಗ ಚಿಕ್ಕ ಮನೆಯಲ್ಲಿ ಶುಭಾಶಯ ಕೋರುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಅಲ್ಲದೇ ಅಲನ್ ಸರಳ ಜೀವಿ, ಸ್ವಂತ ಮನೆಯೂ ಇಲ್ಲದ ಶಾಸಕ ಎಂಬ ವರದಿಗಳು ಆಂಗ್ಲ ಸುದ್ದಿತಾಣಗಳಲ್ಲಿ ಹರಿದಾಡುತ್ತಿವೆ.

ಅಲನ್ ನಿಜಕ್ಕೂ ಬಡವರೇ? ಈ ಮಾಹಿತಿಯ ಸತ್ಯಾಸತ್ಯತೆಯನ್ನು ಬೆನ್ನತ್ತಿದ ಟಿವಿ9 ಡಿಜಿಟಲ್ ತಂಡಕ್ಕೆ ಹಲವು ಅಚ್ಚರಿಯ ಮಾಹಿತಿಗಳು ಲಭಿಸಿತು. ಈ ಬಾರಿ ಚುನಾವಣೆಯಲ್ಲಿ ಅವರು ಘೋಷಿಸಿದ ಆಸ್ತಿಯ ಮೌಲ್ಯ 31.8 ಲಕ್ಷ. 2015ರ ಬಿಹಾರ ವಿಧಾನಸಭೆ ಚುನಾವಣೆಗಿಂತ ಅವರ ಆಸ್ತಿ 8.84 ಲಕ್ಷ ಏರಿಕೆಯಾಗಿದೆ! ಸ್ವಂತ ಮನೆ ಇಲ್ಲದಿದ್ದರೂ ಅಲನ್ ಅವರು ಲಕ್ಷಾಧೀಶ್ವರರೇ.

ಅಬ್ಬಬ್ಬಾ..ಎಷ್ಟೆಲ್ಲಾ ಕೇಸ್! ಅಲನ್ ಅವರ ಕ್ರಿಮಿನಲ್ ಹಿನ್ನೆಲೆ ತಿಳಿದರೆ ನೀವು ನಿಜಕ್ಕೂ ದಂಗಾಗುತ್ತೀರಿ!. ಬಿಹಾರದಲ್ಲಿ ಆಯ್ಕೆಯಾದ ಶೇ.70 ಎಂಎಲ್​ಎಗಳಿಗೆ ಶುದ್ಧಾಂಗ ಅಪರಾಧ ಹಿನ್ನೆಲೆಯಿದೆ. ಅಲನ್ ಅವರೂ ಈ ಲೆಕ್ಕದಲ್ಲಿ ಹಿಂದೆಬಿದ್ದಿಲ್ಲ. 2015ರಲ್ಲಿ ಚುನಾವಣೆಗೆ ನಿಲ್ಲುವಾಗ 3 ಕೊಲೆ ಆರೋಪವೂ ಸೇರಿ 13 ಅಪರಾಧಗಳನ್ನು ಅಫಿಡವಿಟ್​ನಲ್ಲಿ ಘೋಷಿಸಿದ್ದರು. ಈಬಾರಿ ಈ ಸಂಖ್ಯೆಯಲ್ಲೂ ಪ್ರಗತಿ ಕಂಡಿದೆ. ಒಟ್ಟು 28 ಪ್ರಕರಣಗಳಲ್ಲಿ ಮೆಹಬೂಬ್ ಅಲನ್ ಆರೋಪಿಯಾಗಿದ್ದಾರೆ.

ಅಫಿಡವಿಟ್​ನಲ್ಲಿ ಕೃಷಿಕರೆಂದು ಅಲನ್ ಘೋಷಿಸಿಕೊಳ್ಳುತ್ತಾರೆ. ಅವರ ಮೇಲಿನ ಆರೋಪಗಳನ್ನು ಗಮನಿಸಿದರೆ ಕೊಲೆ, ದಂಗೆಗೆ ಪ್ರಚೋದನೆ, ಅಧಿಕಾರಿಗಳಿಗೆ ದೈಹಿಕ ಹಲ್ಲೆ ಪ್ರಕರಣಗಳು ಕಾಣಸಿಗುತ್ತವೆ. 2014ರ ಲೋಕಸಭೆ ಚುನಾವಣೆಗೆ ಕಾತಿಹಾರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅವರನ್ನು ಕೊಲೆ ಪ್ರಕರಣದಲ್ಲಿ ನಾಮಿನೇಶನ್ ಫೈಲ್ ಮಾಡಿದ ನಂತರ ಪೋಲೀಸರು ಬಂಧಿಸಿದ್ದರು.

ಬಿಹಾರ ಸಿಪಿಐ(ಎಂ)(ಎಲ್) ನ ರಾಜ್ಯ ಶಾಖೆಯ ಸದಸ್ಯರೂ ಆದ ಅವರನ್ನು ಪಕ್ಷ ಸಮರ್ತಿಸಿಕೊಂಡಿದೆ. ಮೆಹಬೂಬ್ ಅಲನ್ ಅವರನ್ನು ವ್ಯವಸ್ಥಿತ ಸಂಚಿಗೆ ಗುರಿಪಡಿಸಲಾಗುತ್ತಿದೆ. ಹೀಗಾಗಿಯೇ ಅವರ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿಕೆ ನೀಡಿದೆ.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ