ದೀಪಾವಳಿ ಬಂದ್ರೆ ಸಾಕು.. ಈ ಊರಿನ ಶ್ವಾನಗಳಿಗೆ ಅದೇನು ಮರ್ಯಾದೆ, ಅದೇನು ಸನ್ಮಾನ.. ವಾಹ್!
ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು! ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, […]
ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು! ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, ನೇಪಾಳದಲ್ಲಿ ದೀಪಾವಳಿ ಹಬ್ಬವನ್ನು 5 ದಿನಗಳ ಕಾಲ ಆಚರಿಸಿಲಾಗುತ್ತದೆ. ಹಬ್ಬದ ಎರಡನೇ ದಿನವನ್ನು ಕುಕ್ಕುರ್ ತಿಹಾರ್ ಎಂದು ಆಚರಸಿಲಾಗುತ್ತದೆ. ಇದರ ಭಾಗವಾಗಿ, ಶ್ವಾನಗಳಿಗೆ ಅಂದು ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ, ಅವುಗಳಿಗೆ ರುಚಿರುಚಿಯಾದ ಭಕ್ಷ್ಯ ಭೋಜ್ಯಗಳನ್ನು ನೀಡಲಾಗುತ್ತದೆ.
ಅಂತೆಯೇ, ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಇಂದು ಕುಕ್ಕುರ್ ತಿಹಾರ್ ಅಂಗವಾಗಿ ನಗರದ ಪ್ರಾಣಿ ದಯಾ ಸಂಘವೊಂದರಲ್ಲಿರುವ ಶ್ವಾನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅವುಗಳಿಗೆ ಹಲವು ಖಾದ್ಯಗಳನ್ನು ಸಹ ನೀಡಲಾಯಿತು. ಮನುಷ್ಯರ ಹಾಗೂ ಶ್ವಾನಗಳ ನಡುವಿನ ಸಹಸ್ರಾರು ವರ್ಷಗಳ ಬಾಂಧವ್ಯದ ಪ್ರತೀಕವಾಗಿ ಈ ಕುಕ್ಕುರ್ ತಿಹಾರ್ ಹಬ್ಬವನ್ನು ಆಚರಿಸಲಾಗುತ್ತದೆ.