Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಕುರಿತ ಒಬಾಮಾರ ಕಾಮೆಂಟ್​ಗೆ ಶಿವ ಸೇನಾ ತೀವ್ರ ಆಕ್ಷೇಪಣೆ | Obama has no right to make comments on Indian politicians: Shiv Sena

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಇಷ್ಟರಲ್ಲೇ ಬಿಡುಗಡೆಯಾಗಲಿರುವ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ನಲ್ಲಿ ಭಾರತದ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಜೀವ್ ಗಾಂಧಿ ಕುರಿತು ಮಾಡಿರುವ ಕಾಮೆಂಟ್​ಗಳ ಬಗ್ಗೆ ಮಹಾರಾಷ್ಟ್ರದ ಆಡಳಿತಾರೂಢ ಶಿವ ಸೇನಾ ಪಕ್ಷವು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದೆ. ಒಬಾಮಾ ತಮ್ಮ ಪುಸ್ತಕದಲ್ಲಿ ರಾಹುಲ್ ಬಗ್ಗೆ ಬರೆಯುವಾಗ, ‘‘ಧೃತಿಗೆಟ್ಟ, ಅಪ್ರಬುದ್ಧ; ತನ್ನ ಹೋಮ್​ವರ್ಕ್ ಮಾಡಿದ್ದರೂ, ವಿಷಯದ ಮೇಲೆ ಹಿಡಿತ ಸಾಧಿಸಲಾಗದೆ ಟೀಚರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುವ ವಿದ್ಯಾರ್ಥಿಯಂತೆ ಭಾಸವಾಗುತ್ತಾರೆ,’’ ಎಂದಿದ್ದಾರೆ. ಅವರ ಈ […]

ರಾಹುಲ್ ಕುರಿತ ಒಬಾಮಾರ ಕಾಮೆಂಟ್​ಗೆ ಶಿವ ಸೇನಾ ತೀವ್ರ ಆಕ್ಷೇಪಣೆ | Obama has no right to make comments on Indian politicians: Shiv Sena
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 14, 2020 | 5:29 PM

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಇಷ್ಟರಲ್ಲೇ ಬಿಡುಗಡೆಯಾಗಲಿರುವ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ನಲ್ಲಿ ಭಾರತದ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಜೀವ್ ಗಾಂಧಿ ಕುರಿತು ಮಾಡಿರುವ ಕಾಮೆಂಟ್​ಗಳ ಬಗ್ಗೆ ಮಹಾರಾಷ್ಟ್ರದ ಆಡಳಿತಾರೂಢ ಶಿವ ಸೇನಾ ಪಕ್ಷವು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದೆ.

ಒಬಾಮಾ ತಮ್ಮ ಪುಸ್ತಕದಲ್ಲಿ ರಾಹುಲ್ ಬಗ್ಗೆ ಬರೆಯುವಾಗ, ‘‘ಧೃತಿಗೆಟ್ಟ, ಅಪ್ರಬುದ್ಧ; ತನ್ನ ಹೋಮ್​ವರ್ಕ್ ಮಾಡಿದ್ದರೂ, ವಿಷಯದ ಮೇಲೆ ಹಿಡಿತ ಸಾಧಿಸಲಾಗದೆ ಟೀಚರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುವ ವಿದ್ಯಾರ್ಥಿಯಂತೆ ಭಾಸವಾಗುತ್ತಾರೆ,’’ ಎಂದಿದ್ದಾರೆ.

ಅವರ ಈ ಕಾಮೆಂಟನ್ನು ಗಂಭೀರವಾಗಿ ಪರಿಗಣಿಸಿರುವ ಶಿವ ಸೇನಾ, ಒಬ್ಬ ವಿದೇಶೀ ರಾಜಕಾರಣಿ ಕುರಿತು ಹಾಗೆ ಕಾಮೆಂಟ್ ಮಾಡುವ ಅಧಿಕಾರ ಒಬಾಮಾ ಅವರಿಗಿಲ್ಲವೆಂದು ಹೇಳಿದೆ. ಪಕ್ಷದ ಹಿರಿಯ ನಾಯಕ ಸಂಜಯ ರಾವತ್ ಅವರು ತಮ್ಮ ಟ್ವೀಟ್​ನಲ್ಲಿ, ಒಬಾಮಾರನ್ನು ತರಾಟೆಗೆ ತೆಗೆದುಕೊಂಡಿದ್ದು ಅವರ ಕಾಂಗ್ರೆಸ್ ನಾಯಕನ ಬಗ್ಗೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಕೀಳು ಅಭಿರುಚಿಯದ್ದಾಗಿದೆ ಎಂದು ಹೇಳಿದ್ದಾರೆ.

‘‘ವಿದೇಶೀ ರಾಜಕಾರಣಿಯೊಬ್ಬ, ಭಾರತದ ರಾಜಕೀಯ ನಾಯಕರ ಬಗ್ಗೆ ಅಂಥ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸರಿಯಲ್ಲ. ನಂತರ ಅವರು ಮಾಡಿರುವ ರಾಜಕೀಯ ವಿಶ್ಲೇಷಣೆ ಕೀಳು ಅಭಿರುಚಿಯದ್ದಾಗಿದೆ. ನಾವು, ‘ಟ್ರಂಪ್ ಒಬ್ಬ ಹುಚ್ಚ’ ಅಂತ ಹೇಳಲಾರೆವು. ನಮ್ಮ ದೇಶದ ಬಗ್ಗೆ ಒಬಾಮಾಗೇನು ಗೊತ್ತಿದೆ,’’ ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ವಿಶ್ವದ ಹಲವಾರು ನಾಯಕರನ್ನು ಕುರಿತು ಒಬಾಮಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಒಬಾಮಾ, ಮಹಿಳಾ ನಾಯಕರ ಸೌಂದರ್ಯದ ಬಗ್ಗೆ ಯಾರೊಬ್ಬರೂ ಮಾತಾಡುತ್ತಿಲ್ಲ ಎಂದು ಬರೆಯುವಾಗ ಸೋನಿಯಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಹಾಗೆಯೇ, ಮನಮೋಹನ್ ಸಿಂಗ್ ಅವರ ‘ಅಗಾಧವಾದ ಅಖಂಡತೆಯನ್ನು’ ಕೊಂಡಾಡಿದ್ದಾರೆ.

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್