‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’

ಭಾರತದ ಮಾಜಿ ಕ್ರಿಕೆಟಿಗ, ಆಲ್​ ರೌಂಡರ್ ಯುವರಾಜ್ ಸಿಂಗ್ ತಮ್ಮ ಬಹುಕಾಲದ ಗುಟ್ಟೊಂದನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯುವಿ ಪಾದಾರ್ಪಣೆ ಮಾಡಿದ್ದು 2000ನೇ ಇಸವಿಯಲ್ಲಿ. ಭಾರತದ ಪರವಾಗಿ ಅಂಡರ್​-19 ವಿಶ್ವಕಪ್ ತಂಡದಲ್ಲಿ ಮಿಂಚಿದ್ದ ಯುವಿಯನ್ನ ಆಗಷ್ಟೇ ಅಂತಾರಾಷ್ಟ್ರೀಯ ತಂಡಕ್ಕೆ ಬರಮಾಡಿಕೊಳ್ಳಲಾಗಿತ್ತು. ಆಗ ಭಾರತದ ತಂಡದಲ್ಲಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಉತ್ತುಂಗದಲ್ಲಿದ್ದರು. ಬಾಲ್ಯದಿಂದಲೂ ಸಚಿನ್ ಆಟವನ್ನು ನೋಡಿ, ಅವರಿಂದ ಪ್ರೇರೇಪಣೆಗೊಂಡಿದ್ದ ಯುವರಾಜ್​ ಸಿಂಗ್​ ಮೊಟ್ಟ ಮೊದಲ ಬಾರಿಗೆ ಸಚಿನ್​ರನ್ನು ನೋಡಿದಾಗ ರೋಮಾಂಚನಗೊಂಡಿದ್ದರಂತೆ. ‘ಸ್ನಾನ ಮಾಡಲೇಬಾರದು ಎನ್ನುವಷ್ಟು […]

‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’
Follow us
ಪೃಥ್ವಿಶಂಕರ
|

Updated on:Nov 14, 2020 | 6:53 PM

ಭಾರತದ ಮಾಜಿ ಕ್ರಿಕೆಟಿಗ, ಆಲ್​ ರೌಂಡರ್ ಯುವರಾಜ್ ಸಿಂಗ್ ತಮ್ಮ ಬಹುಕಾಲದ ಗುಟ್ಟೊಂದನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯುವಿ ಪಾದಾರ್ಪಣೆ ಮಾಡಿದ್ದು 2000ನೇ ಇಸವಿಯಲ್ಲಿ. ಭಾರತದ ಪರವಾಗಿ ಅಂಡರ್​-19 ವಿಶ್ವಕಪ್ ತಂಡದಲ್ಲಿ ಮಿಂಚಿದ್ದ ಯುವಿಯನ್ನ ಆಗಷ್ಟೇ ಅಂತಾರಾಷ್ಟ್ರೀಯ ತಂಡಕ್ಕೆ ಬರಮಾಡಿಕೊಳ್ಳಲಾಗಿತ್ತು.

ಆಗ ಭಾರತದ ತಂಡದಲ್ಲಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಉತ್ತುಂಗದಲ್ಲಿದ್ದರು. ಬಾಲ್ಯದಿಂದಲೂ ಸಚಿನ್ ಆಟವನ್ನು ನೋಡಿ, ಅವರಿಂದ ಪ್ರೇರೇಪಣೆಗೊಂಡಿದ್ದ ಯುವರಾಜ್​ ಸಿಂಗ್​ ಮೊಟ್ಟ ಮೊದಲ ಬಾರಿಗೆ ಸಚಿನ್​ರನ್ನು ನೋಡಿದಾಗ ರೋಮಾಂಚನಗೊಂಡಿದ್ದರಂತೆ.

‘ಸ್ನಾನ ಮಾಡಲೇಬಾರದು ಎನ್ನುವಷ್ಟು ಪುಳಕಿತನಾಗಿದ್ದೆ’ ಅದರಲ್ಲೂ, ತಂಡದ ಆಟಗಾರರಿದ್ದ ಬಸ್​ನಲ್ಲಿ ಸಚಿನ್ ಸ್ವತಃ ತಮ್ಮ ಪರಿಚಯ ಮಾಡಿಕೊಂಡು ಶೇಕ್ ಹ್ಯಾಂಡ್ ಮಾಡಿದ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ ಎಂದಿರುವ ಯುವಿ, ಆ ಕ್ಷಣದಲ್ಲಿ ತಾವೆಷ್ಟು ಪುಳಕಿತಗೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. ಸಚಿನ್ ಶೇಕ್ ಹ್ಯಾಂಡ್ ಮಾಡಿದ ಬಳಿಕ ತಮ್ಮ ಕೈಯಿಂದ ಇಡೀ ದೇಹವನ್ನು ಸ್ಪರ್ಶಿಸಿಕೊಂಡ ಯುವರಾಜ್ ಸಿಂಗ್ ಆ​ ಶೇಕ್ ಹ್ಯಾಂಡ್​ನ ಸ್ಪರ್ಶ ಶಾಶ್ವತವಾಗಿ ಉಳಿಯಬೇಕೆಂದು ಸ್ನಾನ ಮಾಡಲೇಬಾರದು ಎಂದು ನಿಶ್ಚಯಿಸಿಬಿಟ್ಟರಂತೆ.

ನೆಟ್​ಫ್ಲಿಕ್ಸ್​ನಲ್ಲಿ ಅಪ್ಲೋಡ್ ಆಗಿರುವ ಸ್ಟೋರೀಸ್ ಬಿಹೈಂಡ್ ದಿ ಸ್ಟೋರಿ ಎಂಬ ವಿಡಿಯೋದಲ್ಲಿ ತಮ್ಮ ಕ್ರಿಕೆಟ್ ಪಯಣದ ಕುರಿತು ಮಾತನಾಡಿರುವ ಯುವಿ ಅಂಡರ್-19 ನಂತರ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಸಚಿನ್, ಗಂಗೂಲಿ, ಕುಂಬ್ಳೆ, ದ್ರಾವಿಡ್, ಶ್ರೀನಾಥ್​ರೊಂದಿಗೆ ಆಡುವಾಗ ಸ್ವತಃ ತಾನೆಲ್ಲಿದ್ದೇನೆ ಎಂದು ಗೊಂದಲವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಸಚಿನ್ ಹೊಸಬರಿಗೆ ನೀಡುತ್ತಿದ್ದ ಪ್ರೋತ್ಸಾಹ ಹಾಗೂ ಮೈದಾನದಾಚೆ ಬೇರೆಯವರೊಂದಿಗೆ ನಡೆದುಕೊಳ್ಳುತ್ತಿದ್ದ ಕುರಿತು ಮಾತನಾಡಿರುವ ಯುವರಾಜ್​ ಆಡುವಾಗ ಸಚಿನ್ ಮೈದಾನದಲ್ಲಿದ್ದರೆ ಮಾತ್ರ ಗೆಲ್ಲುವ ಭರವಸೆ ಇರುತ್ತಿತ್ತು. ಅವರು ಔಟ್ ಆದ ಕೂಡಲೇ ಅಭಿಮಾನಿಗಳ ಮುಖವು ಬಾಡುತ್ತಿತ್ತು. ಹಾಗಾಗಿ, ಇಡೀ ತಂಡದ ಭಾರವನ್ನು ಹೊತ್ತು ಮೈದಾನಕ್ಕಿಳಿಯುತ್ತಿದ್ದ ಸಚಿನ್​ ಆಟ ಮುಗಿದ ನಂತರ ನಮ್ಮೊಂದಿಗೆ ಬೆರೆಯುತ್ತಿದ್ದ ರೀತಿಯನ್ನು ಮರೆಯಲು ಅಸಾಧ್ಯ ಎಂದು ಹೇಳಿದ್ದಾರೆ.

Published On - 6:46 pm, Sat, 14 November 20

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್