AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಸಹ-ಸಂಸ್ಥಾಪಕನಿಗೆ ಉಡುಗೊರೆಯಾಗಿ ನೀಡಿದ Infosys!

ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್​.ಡಿ ಶಿಬುಲಾಲ್ ಕಂಪನಿಯ 4 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ. ಇದೀಗ, ಅವರ ಒಡೆತನದಲ್ಲಿ ಒಟ್ಟು 21.6 ಲಕ್ಷಕ್ಕೂ ಹೆಚ್ಚು ಷೇರುಗಳಿದೆ ಎಂದು ರೆಗ್ಯೂಲೇಟರಿ ಫೈಲಿಂಗ್ ತಿಳಿಸಿದೆ. ಇನ್ಫೋಸಿಸ್ ಲಿಮಿಟೆಡ್ NSE ಶೇಕಡಾ 0.58ನ 4,01,000 ಈಕ್ವಿಟಿ ಷೇರುಗಳನ್ನು 2020 ರ ನವೆಂಬರ್ 12 ರಂದು ಆಫ್ ಮಾರ್ಕೆಟ್ ವಹಿವಾಟಿನಲ್ಲಿ ಎಸ್.ಡಿ ಶಿಬುಲಾಲ್​ಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಸಂಸ್ಥೆಯು ಶುಕ್ರವಾರ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಶಿಬುಲಾಲ್ ಬಳಿಯಿರುವ ಷೇರುಗಳ ಸಂಖ್ಯೆ ಶೇಕಡಾ […]

4 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಸಹ-ಸಂಸ್ಥಾಪಕನಿಗೆ ಉಡುಗೊರೆಯಾಗಿ ನೀಡಿದ Infosys!
ಪೃಥ್ವಿಶಂಕರ
|

Updated on:Nov 14, 2020 | 6:00 PM

Share

ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್​.ಡಿ ಶಿಬುಲಾಲ್ ಕಂಪನಿಯ 4 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ. ಇದೀಗ, ಅವರ ಒಡೆತನದಲ್ಲಿ ಒಟ್ಟು 21.6 ಲಕ್ಷಕ್ಕೂ ಹೆಚ್ಚು ಷೇರುಗಳಿದೆ ಎಂದು ರೆಗ್ಯೂಲೇಟರಿ ಫೈಲಿಂಗ್ ತಿಳಿಸಿದೆ.

ಇನ್ಫೋಸಿಸ್ ಲಿಮಿಟೆಡ್ NSE ಶೇಕಡಾ 0.58ನ 4,01,000 ಈಕ್ವಿಟಿ ಷೇರುಗಳನ್ನು 2020 ರ ನವೆಂಬರ್ 12 ರಂದು ಆಫ್ ಮಾರ್ಕೆಟ್ ವಹಿವಾಟಿನಲ್ಲಿ ಎಸ್.ಡಿ ಶಿಬುಲಾಲ್​ಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಸಂಸ್ಥೆಯು ಶುಕ್ರವಾರ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ.

ಶಿಬುಲಾಲ್ ಬಳಿಯಿರುವ ಷೇರುಗಳ ಸಂಖ್ಯೆ ಶೇಕಡಾ 0.05 ಕ್ಕೆ ಏರಿದೆ ಶಿಬುಲಾಲ್ ಅವರ ಪತ್ನಿ ಕುಮಾರಿ ಒಂದೇ ದಿನ 4.01 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಪ್ರತ್ಯೇಕ ರೆಗ್ಯೂಲೇಟರಿ ಫೈಲಿಂಗ್ ಹೇಳಿದೆ. ಆದರೆ, ಸ್ವೀಕರಿಸುವವರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಇನ್ಫೋಸಿಸ್​​ನಲ್ಲಿ ಕುಮಾರಿಯ ಷೇರುಗಳು ಈಗ ಶೇಕಡಾ 0.21 ಕ್ಕೆ ಇಳಿದಿದ್ದರೆ, ಶಿಬುಲಾಲ್ ಅವರ ಬಳಿಯಿರುವ ಷೇರುಗಳು ಶೇಕಡಾ 0.05 ಕ್ಕೆ ಏರಿದೆ. ವಹಿವಾಟಿನ ನಂತರ, ಕುಮಾರಿ ಮತ್ತು ಶಿಬುಲಾಲ್ ಒಡೆತನದ ಇನ್ಫೋಸಿಸ್ ಷೇರುಗಳ ಸಂಖ್ಯೆ ಕ್ರಮವಾಗಿ 88,96,930 ಮತ್ತು 21,66,768 ರಷ್ಟಿದೆ.

ಇನ್ಫೋಸಿಸ್​​‌ನ ಷೇರುಗಳು ಶುಕ್ರವಾರ BSEನಲ್ಲಿ ತಲಾ 1,123.90 ರೂ.ಗೆ ತಲುಪಿದೆ. ಜುಲೈನಲ್ಲಿ ಶಿಬುಲಾಲ್​ರ ಕುಟುಂಬದ ಸದಸ್ಯರು 770 ಕೋಟಿ ರೂ. ಮೌಲ್ಯದ ಕಂಪನಿಯ 85 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದರು. ಅದರಿಂದ ಬಂದ ಮೊತ್ತವನ್ನು ಲೋಕೋಪಕಾರಿ ಮತ್ತು ಹೂಡಿಕೆ ಚಟುವಟಿಕೆಗಳಿಗೆ ಬಳಸಬೇಕಾಗಿತ್ತು. ಎಸ್.ಡಿ ಶಿಬುಲಾಲ್, ಎನ್.ಆರ್ ನಾರಾಯಣ ಮೂರ್ತಿ ಹಾಗೂ ಇತರ 5 ಮಂದಿ 1981 ರಲ್ಲಿ ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪಿಸಿದರು.

ಶಿಬುಲಾಲ್ 2011ರಿಂದ 2014ರವರೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. CEO ಮತ್ತು MD ಆಗುವ ಮೊದಲು ಅವರು 2007ರಿಂದ 2011ರವರೆಗೆ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

Published On - 5:58 pm, Sat, 14 November 20

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ