AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​ನಲ್ಲಿ ಆ ಕಳ್ಳ ಕಾನ್ಸ್​ಟೇಬಲ್ ಬೀದಿಬದಿ ಕದ್ದ ಕೋಳಿ ಮೊಟ್ಟೆಗಳೆಷ್ಟು? ಕೊನೆಗೂ ಆತ ಸಿಕ್ಕಿಬಿದ್ದಿದ್ದು ಹೇಗೆ?

ತಮ್ಮ ಕಾನ್ಸ್​ಟೇಬಲ್ ಮೊಟ್ಟೆ ಕದಿಯುವ ಚಾಳಿ ನೋಡಿದ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿ, ಅದಕ್ಕೂ ಮೊದಲು ನೀನು ಮನೆಗೆ ಹೋಗು ಎಂದು ಸಸ್ಪೆಂಡ್​ ಮಾಡಿದ್ದಾರೆ. ಜೊತೆಗೆ ಆ ವಿಡಿಯೋ ಸಮೇತ ಟ್ವೀಟ್​ ಮಾಡಿ.. ಹೀಗೀಗೆ ನಮ್ಮ ಕಾನ್ಸ್​ಟೇಬಲ್ ಕಳ್ಳತನಕ್ಕೆ ಇಳಿದಿದ್ದಾನೆ. ನೀವೂ ನೋಡಿ ಎಂದು ವಿಡಿಯೋ ಟ್ವೀಟ್​ ಪೋಸ್ಟ್ ಮಾಡಿದ್ದಾರೆ. ಅದೀಗ Social Mediaದಲ್ಲಿ Video Viral ಆಗಿದೆ. ನೀವೂ ನೋಡಿ..

ಪಂಜಾಬ್​ನಲ್ಲಿ ಆ ಕಳ್ಳ ಕಾನ್ಸ್​ಟೇಬಲ್ ಬೀದಿಬದಿ ಕದ್ದ ಕೋಳಿ ಮೊಟ್ಟೆಗಳೆಷ್ಟು? ಕೊನೆಗೂ ಆತ ಸಿಕ್ಕಿಬಿದ್ದಿದ್ದು ಹೇಗೆ?
ಪಂಜಾಬ್​ನಲ್ಲಿ ಆ ಕಳ್ಳ ಪೇದೆ ಬೀದಿಬದಿ ಕದ್ದ ಕೋಳಿ ಮೊಟ್ಟೆಗಳೆಷ್ಟು? ಕೊನೆಗೂ ಆ ಪ್ಯಾದೆ ಸಿಕ್ಕಿಬಿದ್ದಿದ್ದು ಹೇಗೆ?
ಸಾಧು ಶ್ರೀನಾಥ್​
| Edited By: |

Updated on:May 17, 2021 | 11:36 AM

Share

ಚಂಡೀಗಢ: ಆತ ತನ್ನ ಮೂರು ಚಕ್ರದ ಸೈಕಲ್​ನಲ್ಲಿ ಮೊಟ್ಟೆ ಟ್ರೇಗಳನ್ನು ತುಂಬಿಕೊಂಡು ಅಂಗಡಿ ಅಂಗಡಿಗೂ ಸರಬರಾಜು ಮಾಡುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸದಲ್ಲಿ ನಿರತನಾಗಿದ್ದ. ಅಂಗಡಿಯೊಂದರ ಮುಂದೆ ತನ್ನ ಸೈಕಲ್ ನಿಲ್ಲಿಸಿ, ಮೊಟ್ಟೆ ಕೊಟ್ಟು ಬರಲು ರಸ್ತೆಯ ಆ ಕಡೆಗೆ ಸಾಗಿದ್ದಾನೆ. ಅದಕ್ಕೇ ಹೊಂಚುಹಾಕುತ್ತಿದ್ದವನಂತೆ ನರಪೇತಲ ಕಾನ್ಸ್​ಟೇಬಲ್​ ಒಬ್ಬ ತನ್ನ ಶಿಸ್ತು-ಪ್ರಾಮಾಣಿಕತೆಯ ಇಲಾಖೆಗೆ ಕಳಂಕ ತರುವ ರೀತಿಯಲ್ಲಿ ಆ ಸೈಕಲ್​ಗೆ ಆನಿಕೊಂಡು ಅತ್ತಿತ್ತ ಕಳ್ಳನೋಟ ಬೀರುತ್ತಾ, ಸರಾಗವಾಗಿ, ಎಡರು ಬಾರಿಗೆ ಒಟ್ಟು 6 ಮೊಟ್ಟೆಗಳನ್ನು ತನ್ನ ಪ್ಯಾಂಟ್​ ಜೋಬಿಗೆ ತುಂಬಿಕೊಂಡಿದ್ದಾನೆ. ಪವಿತ್ರ ಸಮವಸ್ತ್ರಕ್ಕೂ ಕಳಂಕ ಮೆತ್ತಿದ್ದಾನೆ ಆ ಕಾನ್ಸ್​ಟೇಬಲ್.

ಆತ ಪಂಜಾಬ್​ ಪೊಲೀಸ್​ ಇಲಾಖೆಯಲ್ಲಿ ಮುಖ್ಯ ಕಾನ್ಸ್​ಟೇಬಲ್ ಆಗಿರುವ ಪ್ರತಿಪಾಲ್​ ಸಿಂಗ್​. ಫತೇಗಢ ಸಾಹಿಬ್​ ಪೊಲೀಸ್​ ಠಾಣೆಯಲ್ಲಿ ಸೇವೆಯಲ್ಲಿದ್ದಾನೆ; ಅಲ್ಲಲ್ಲ ಇದ್ದ. ಏಕೆಂದ್ರೆ ಪ್ರೀತಿಪಾಲ್ ಸಿಂಗ್​ನ ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಇಲಾಖೆಯು ಪೊಲೀಸರ ಮಾನ ತೆಗೆದ ಕಾನ್ಸ್​ಟೇಬಲ್​ನನ್ನು ಸಸ್ಪೆಂಡ್​ ಮಾಡಿ, ಮನೆಗಟ್ಟಿದೆ.

ಮುಖ್ಯ ಕಾನ್ಸ್​ಟೇಬಲ್ ಪ್ರೀತಿಪಾಲ್​ ಸಿಂಗ್ ಅತ್ತಿತ್ತ ಕಳ್ಳನೋಟ ಬೀರುತ್ತಾ, ಸಲೀಸಾಗಿ ಒಟ್ಟು 6 ಮೊಟ್ಟೆ ಎಗರಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಮೊದಲ ಬಾರಿಗೆ ಸೈಕಲ್​ಗೆ ಆನಿಕೊಂಡು ಎರಡೇ ಎರಡು ಮೊಟ್ಟೆಗಳನ್ನು ತನ್ನ ಪ್ಯಾಂಟ್​ ಜೇಬಿಗೆ ಹಾಕಿಕೊಳ್ಳುತ್ತಾನೆ. ಆ ಮೇಲೆ ಯಾರೂ ನೋಡುತ್ತಿಲ್ಲ ಅಂತಾ ದುರಾಸೆಗೆ ಬಿದ್ದು, ಮಾನಗೆಟ್ಟು ಎರಡನೆಯತ ಬಾರಿಗೆ ಇನ್ನೂ ನಾಲ್ಕು ಮೊಟ್ಟೆಗಳನ್ನು ಅದೇ ಜೇಬಿಗೆ ತುರುಕಿಕೊಳ್ಳುತ್ತಾನೆ. ದಾಹ ಸಾಲದೆ ಇನ್ನೂ ನಾಲ್ಕಾರು ಎತ್ತಿಹಾಕಿಕೊಳ್ಳುತ್ತಿದ್ದನೋ ಏನೂ ಆದ್ರೆ ಅಷ್ಟೊತ್ತಿಗೆ ಪಾಪಾ ಆ ಸೈಕಲ್​ ವ್ಯಾಪಾರಿ ಬಂದುಬಿಟ್ಟಿದ್ದಾನೆ.

ಮುಖ್ಯ ಕಾನ್ಸ್​ಟೇಬಲ್​ನ ಅಂಡಾಬಂಡಾ ಕಳ್ಳಾಟ ಹೀಗಿತ್ತು:

ಮೊಟ್ಟೆವಾಲಾನನ್ನು ನೋಡಿದ ಕಾನ್ಸ್​ಟೇಬಲ್ ಏನೂ ಘಟಿಸಿಯೇ ಇಲ್ಲ ಎಂಬಂತೆ ತನ್ನ ಕೈಗಳನ್ನು ಪ್ಯಾಂಟಿಗೆ ಒರೆಸಿಕೊಳ್ಳುತ್ತಾ, ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಮೊಟ್ಟೆವಾಲಾ ಬಹುಶಃ ಅದನ್ನೆಲ್ಲ ನೋಡಿದ್ದ ಅನಿಸುತ್ತದೆ. ಇದೆಲ್ಲಾ ಮಾಮೂಲು ಎಂಬಂತೆ ಕಾನ್ಸ್​ಟೇಬಲ್ ಕಡೆಗೆ ಕೈತೋರಿಸಿ, ಇವನ ಹಣೆಬರಹ ಇಷ್ಟೇ. ಇವನಿಗೆ ಕದಿಯುವ ಚಾಳಿ ಇದ್ದಿದ್ದೇ ಎಂದು ಹತಾಶನಾಗಿ ಪ್ರತಿಕ್ರಿಯಿಸುತ್ತಾನೆ. ಇವಿಷ್ಟೂ ವಿಡಿಯೋದಲ್ಲಿ ದಾಖಲಾಗಿದೆ.

ತಮ್ಮ ಕಾನ್ಸ್​ಟೇಬಲ್ ಮೊಟ್ಟೆ ಕದಿಯುವ ಚಾಳಿ ನೋಡಿದ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿ, ಅದಕ್ಕೂ ಮೊದಲು ನೀನು ಮನೆಗೆ ಹೋಗು ಎಂದು ಸಸ್ಪೆಂಡ್​ ಮಾಡಿದ್ದಾರೆ. ಜೊತೆಗೆ ಆ ವಿಡಿಯೋ ಸಮೇತ ಟ್ವೀಟ್​ ಮಾಡಿ.. ಹೀಗೀಗೆ ನಮ್ಮ ಕಾನ್ಸ್​ಟೇಬಲ್ ಕಳ್ಳತನಕ್ಕೆ ಇಳಿದಿದ್ದಾನೆ. ನೀವೂ ನೋಡಿ ಎಂದು ವಿಡಿಯೋ ಟ್ವೀಟ್​ ಪೋಸ್ಟ್ ಮಾಡಿದ್ದಾರೆ. ಅದೀಗ Social Mediaದಲ್ಲಿ Viral Video ಆಗಿದೆ. ನೀವೂ ನೋಡಿ..

(Head Constable Pritpal Singh egg stealing video goes viral in Social Media Punjab Police suspend him)

Published On - 11:14 am, Mon, 17 May 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ