ವರ್ಕ್​ ಫ್ರಮ್​ ಹೋಮ್​ ಕಾಲದಲ್ಲಿ ರಿಲಯನ್ಸ್ ಜಿಯೋ 4ಜಿ ಸ್ಪೀಡ್‌ ಎಲ್ಲರಿಗಿಂತ ತುಂಬಾ ಮುಂದೆ ಇದೆಯೆಂದ ಟ್ರಾಯ್!

Jio download speed: ತನ್ನ ಅತ್ಯಂತ ನಿಕಟ ಸ್ಪರ್ಧಿ ವೊಡಾಫೋನ್‌ಗಿಂತಲೂ ಮೂರು ಪಟ್ಟು ಅಧಿಕ ಡೌಲ್‌ಲೋಡ್ ವೇಗವನ್ನು ರಿಲಯನ್ಸ್ ಜಿಯೋ ಹೊಂದಿದೆ. ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್‌ಗಳು ತಮ್ಮ ಮೊಬೈಲ್ ಉದ್ಯಮವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್ ಎಂಬ ಹೆಸರಿನಲ್ಲಿ ವಿಲೀನಗೊಳಿಸಿರುವುದು ಗಮನಾರ್ಹ. ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ.

ವರ್ಕ್​ ಫ್ರಮ್​ ಹೋಮ್​ ಕಾಲದಲ್ಲಿ ರಿಲಯನ್ಸ್ ಜಿಯೋ 4ಜಿ ಸ್ಪೀಡ್‌ ಎಲ್ಲರಿಗಿಂತ ತುಂಬಾ ಮುಂದೆ ಇದೆಯೆಂದ ಟ್ರಾಯ್!
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on:May 14, 2021 | 9:28 AM

ನವದೆಹಲಿ: ಇಂಟರ್​ನೆಟ್​ ಡೇಟಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಮೂಲಕ ಕ್ಷೇತ್ರಕ್ಕೆ ಲಗ್ಗೆಯಿಟ್ಟ ರಿಲಯನ್ಸ್ ಜಿಯೋ ತನ್ನ ಸೇವೆಯನ್ನು ಕಾಯ್ದುಕೊಂಡಿದೆ. ಏಪ್ರಿಲ್ ತಿಂಗಳಲ್ಲಿ ಪ್ರತಿ ಸೆಕೆಂಡ್‌ಗೆ 20.1 ಮೆಗಾಬೈಟ್ ಡೇಟಾ ಡೌನ್‌ಲೋಡ್‌ ಪ್ರಮಾಣದಲ್ಲಿ 4ಜಿ ಸ್ಪೀಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಇತರೆ ಸ್ಪರ್ಧಿಗಳಿಂತ ಬಹು ಮುಂದೆ ಸಾಗಿದೆ. ಅದೇ ಅಪ್‌ಲೋಡ್ ವೇಗದ ವಿಭಾಗದಲ್ಲಿ ವೊಡಾಫೋನ್ 6.7 ಎಂಬಿಪಿಎಸ್​ ನೊಂದಿಗೆ ಇತರೆ ಕಂಪೆನಿಗಳಿಗಿಂತ ಮುಂಚೂಣಿಯಲ್ಲಿದೆ ಎಂದು ದೂರಸಂಪರ್ಕ ನಿಯಂತ್ರಕ ಸಂಸ್ಥೆ ಟ್ರಾಯ್‌ ಇತ್ತೀಚಿನ ಮಾಹಿತಿಯಲ್ಲಿ ತಿಳಿಸಿದೆ. ಡೌಲ್‌ಲೋಡ್ ವೇಗದ ವಿಭಾಗದಲ್ಲಿ 4ಜಿ ಸ್ಪೀಡ್ ಪಟ್ಟಿಯಲ್ಲಿ ರಿಲಯನ್ಸ್ ಜಿಯೋ ತನ್ನ ಅತ್ಯಂತ ನಿಕಟ ಸ್ಪರ್ಧಿ ವೊಡಾಫೋನ್‌ಗಿಂತಲೂ ಮೂರು ಪಟ್ಟು ಅಧಿಕ ಡೌಲ್‌ಲೋಡ್ ವೇಗವನ್ನು ಹೊಂದಿದೆ.

ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್‌ಗಳು ತಮ್ಮ ಮೊಬೈಲ್ ಉದ್ಯಮಗಳನ್ನು ವೊಡಾಫೋನ್ ಐಡಿಯಾ ಲಿಮಿಟೆಡ್ ಎಂಬ ಹೆಸರಿನಲ್ಲಿ ವಿಲೀನಗೊಳಿಸಿದ್ದರೂ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಿ (ಟ್ರಾಯ್) ಈಗಲೂ ಎರಡೂ ಸಂಸ್ಥೆಗಳ ಪ್ರತ್ಯೇಕ ನೆಟ್‌ವರ್ಕ್ ವೇಗದ ದತ್ತಾಂಶಗಳನ್ನು ಬಿಡುಗಡೆ ಮಾಡುತ್ತಿರುವುದು ಕುತೂಹಲಕಾರಿಯಾಗಿದೆ. ಮೈಸ್ಪೀಡ್ ಆಪ್‌ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.

ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ.

ಏಪ್ರಿಲ್‌ನಲ್ಲಿ ವೊಡಾಫೋನ್ 7Mbps ಡೌನ್‌ಲೋಡ್ ವೇಗವನ್ನು ದಾಖಲಿಸಿದೆ ಎಂದು ಟ್ರಾಯ್ ಮೇ 11ರಂದು ನೀಡಿರುವ ಮಾಹಿತಿ ತಿಳಿಸಿದೆ. ಇದರ ಬಳಿಕ ಐಡಿಯಾ 5.8 Mbps ಮತ್ತು ಏರ್‌ಟೆಲ್ 5Mbps ಡೌನ್‌ಲೋಡ್ ವೇಗದೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಅಪ್‌ಲೋಡ್ ವಿಭಾಗದಲ್ಲಿ 6.7 Mbpsನೊಂದಿಗೆ ವೊಡಾಫೋನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ 6.1 Mbps ಇರುವ ಐಡಿಯಾ ಇದೆ. ಜಿಯೋ 4.2 Mbps ಮತ್ತು ಏರ್‌ಟೆಲ್ 3.9 Mbps ಹೊಂದಿವೆ.

(reliance jio tops in 4G download speed in April 2021 says trai)

Netflix CEO lauds Reliance Jio: ಭಾರತದಲ್ಲಿ ಡೇಟಾ ಬೆಲೆ ಕಡಿಮೆಗೊಳಿಸಿದ ರಿಲಯನ್ಸ್ ಜಿಯೋವನ್ನು ಹೊಗಳಿದ ನೆಟ್‌ಫ್ಲಿಕ್ಸ್ ಸಿಇಒ

Published On - 9:27 am, Fri, 14 May 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ