Netflix CEO lauds Reliance Jio: ಭಾರತದಲ್ಲಿ ಡೇಟಾ ಬೆಲೆ ಕಡಿಮೆಗೊಳಿಸಿದ ರಿಲಯನ್ಸ್ ಜಿಯೋವನ್ನು ಹೊಗಳಿದ ನೆಟ್‌ಫ್ಲಿಕ್ಸ್ ಸಿಇಒ

ನಮ್ಮದೇ ಆದ ಸ್ವಂತ ಕಂಟೆಂಟ್ ಅನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ನಾವು ಹೆಚ್ಚು ಗಮನಹರಿಸುತ್ತಿದ್ದೇವೆ ಎಂದು ನೆಟ್‌ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ತಿಳಿಸಿದ್ದಾರೆ.

Netflix CEO lauds Reliance Jio: ಭಾರತದಲ್ಲಿ ಡೇಟಾ ಬೆಲೆ ಕಡಿಮೆಗೊಳಿಸಿದ ರಿಲಯನ್ಸ್ ಜಿಯೋವನ್ನು ಹೊಗಳಿದ ನೆಟ್‌ಫ್ಲಿಕ್ಸ್ ಸಿಇಒ
ಭಾರತದಲ್ಲಿ ಆದಂತೆ ವಿಶ್ವದ ಬೇರೆಲ್ಲಿಯೂ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಡೇಟಾ ಬೆಲೆಗಳು ಅತ್ಯಧಿಕ ಮಟ್ಟದಿಂದ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿಲ್ಲ: ನೆಟ್​ಫ್ಲಿಕ್ಸ್ CEO
Follow us
guruganesh bhat
| Updated By: ರಾಜೇಶ್ ದುಗ್ಗುಮನೆ

Updated on: Feb 13, 2021 | 8:04 PM

ದೆಹಲಿ: ಭಾರತದಲ್ಲಿ ಡೇಟಾ ಬೆಲೆ ಇಳಿಸಿ ಸ್ಟ್ರೀಮಿಂಗ್ ಸೇವೆಗಳ ಯಶಸ್ಸಿಗೆ ಕಾರಣವಾಗಿದ್ದಕ್ಕಾಗಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋವನ್ನು ನೆಟ್‌ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ (Netflix CEO Reed Hastings) ಶ್ಲಾಘಿಸಿದ್ದಾರೆ ಎಂದು ಖಾಸಗಿ ನಿಯತಕಾಲಿಕೆಯೊಂದು ವರದಿ ಮಾಡಿದೆ. ಭಾರತದಲ್ಲಿ ಆದಂತೆ ವಿಶ್ವದ ಬೇರೆಲ್ಲಿಯೂ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಡೇಟಾ ಬೆಲೆಗಳು ಅಧಿಕ ಮೊತ್ತದಿಂದ ಅತ್ಯಂತ ಕಡಿಮೆ ಬೆಲೆಗೆ ಇಳಿಕೆಯಾಗಿಲ್ಲ.ರಿಲಯನ್ಸ್ ಜಿಯೋ ಈ ಪರಿವರ್ತನೆ ತರದಿದ್ದರೆ ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಯಶ ಕಾಣಲು ಸಾಧ್ಯವಿರಲಿಲ್ಲ ಎಂದು ಹೇಸ್ಟಿಂಗ್ಸ್ ಹೇಳಿದ್ದಾರೆ.

ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಪ್ರತಿವರ್ಷವೂ ಭಾರತದಲ್ಲಿ ನಮ್ಮ ಬೆಳವಣಿಗೆ ಹೆಚ್ಚುತ್ತಿದ್ದು, ವಿವಿಧ ಬಗೆಯ ಹೆಚ್ಚುಹೆಚ್ಚಿನ ಕಂಟೆಂಟ್‌ನೊಂದಿಗೆ ಭಾರತದ ಗ್ರಾಹಕರನ್ನು ಇನ್ನೂ ಹೆಚ್ಚು ತಲುಪುತ್ತಿದ್ದೇವೆ. ಭಾರಿ ಪ್ರಮಾಣದಲ್ಲಿ ಬೆಳೆಯುವ ಉದ್ದೇಶ ಹೊಂದಿದ್ದು, ಇದು ಕೇವಲ ಆರಂಭ ಅಷ್ಟೇ ಎಂದು ರೀಡ್ ಹೇಸ್ಟಿಂಗ್ಸ್ ಹೇಳಿದ್ದಾರೆ. ನಮ್ಮದೇ ಆದ ಸ್ವಂತ ಕಂಟೆಂಟ್ ಅನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ನಾವು ಹೆಚ್ಚು ಗಮನಹರಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರೇಕ್ಷಕರು ಸಿನೆಮಾ ಹಾಲ್‌ಗಳಿಗೆ ಭೇಟಿ ನೀಡಲು ಸಾಧ್ಯವಾಗದ ಮತ್ತು ಚಿತ್ರಮಂದಿರಗಳಲ್ಲಿ ಪ್ರವೇಶದ ಹಕ್ಕುಗಳನ್ನು ಸಹ ನಿರ್ಬಂಧಿಸಲಾಗಿರುವ ಕೋವಿಡ್-19ರ ಸಂದರ್ಭದಲ್ಲಿ”ನಮ್ಮ ಸದಸ್ಯರನ್ನು ಸಂತೋಷಪಡಿಸುವುದರ ಕಡೆಗೇ ನಮ್ಮ ಗಮನ ಹೆಚ್ಚು ಕೇಂದ್ರೀಕೃತವಾಗಿದೆ. ನಮ್ಮ ಗ್ರಾಹಕರು ಇಷ್ಟಪಡುವಂತಹ ಕಂಟೆಂಟ್​ಗಳನ್ನು ಒದಗಿಸಲು ನಾವು ಖರ್ಚು ಮಾಡಲು ಬಯಸುತ್ತೇವೆ. ಏಕೆಂದರೆ, ಹಾಗೆ ಮಾಡಿದಾಗಲೇ ನಾವು ಬೆಳೆಯುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 50 ಸಾವಿರ ಗಡಿ ದಾಟಿಯೇ ಬಿಟ್ಟಿತು ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ..! ರಿಲಯನ್ಸ್​, ಇನ್ಪೋಸಿಸ್​ ಷೇರುಗಳಿಗೆ ಹೆಚ್ಚು ಲಾಭ