AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2021 | ಪ್ರೇಮಿಗಳ ದಿನ 2021; ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ಜೋಡಿಗಳು..

ಸ್ಯಾಂಡಲ್​ವುಡ್​ನಲ್ಲಿ ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಂಡು ಮದುವೆಯಾದವರ ಪಟ್ಟಿ ತುಂಬಾನೇ ದೊಡ್ಡದಿದೆ. ಪ್ರೇಮಿಗಳ ದಿನದಂದು ಆ ಬಗ್ಗೆ ಇಲ್ಲಿದೆ ವಿವರ..

Valentine's Day 2021 | ಪ್ರೇಮಿಗಳ ದಿನ 2021; ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ಜೋಡಿಗಳು..
ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಅಂಬಿ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಅಂಬಿ ಕಟೌಟ್​ ಹಾಕಿ ಹಾಲಿನ ಅಭಿಷೇಕ ಮಾಡಲಾಗುತ್ತಿತ್ತು.
ರಾಜೇಶ್ ದುಗ್ಗುಮನೆ
| Edited By: |

Updated on:Feb 14, 2021 | 3:16 PM

Share

ತೆರೆಯ ಮೇಲೆ ಮಾಡುವುದು ಕೇವಲ ಪಾತ್ರ. ಅಲ್ಲಿ ಸಹನಟಿಯೊಂದಿಗೆ ಮಾಡುವ ಪ್ರೇಮದ ನಾಟಕಗಳು ಕೆಲವೊಮ್ಮೆ ನಿಜ ಜೀವನಕ್ಕೂ ಕರೆತಂದು ಬಿಡುತ್ತದೆ. ಭಾವಪರವಶವಾಗಿ ಮಾಡುವ ಪಾತ್ರದ ತೀವ್ರತೆಯಿಂದ ಹೊರ ಬಂದರೂ ನಟ-ನಟಿಯರ ನಡುವೆ ಕಾಣದೆ ಇರುವ ಒಂದು ಪ್ರೇಮದ ಇಲೆಕ್ಟ್ರಾನ್​ ಹರಿದಾಡುತ್ತಿರುತ್ತದೆ. ಸೆಟ್​​ನಿಂದ ಹೊರ ಬಿದ್ದು, ಮತ್ತೆಲ್ಲೋ ಸಿಕ್ಕಾಗ ಆ್ಯಕ್ಟಿವ್​ ಆಗಿ ಬೆಳಕಾಗಿ ಮಾರ್ಪಾಡಾಗುತ್ತದೆ. ಹೀಗೆ, ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ಜೋಡಿಗಳ ಪಟ್ಟಿ ಇಲ್ಲಿದೆ..

ಯಶ್​-ರಾಧಿಕಾ ಯಶ್​ ಹಾಗೂ ರಾಧಿಕಾ ಪಂಡಿತ್​ ಸ್ಯಾಂಡಲ್​ವುಡ್​ನ ತುಂಬಾನೇ ಖ್ಯಾತಿ ಪಡೆದಿರುವ ಸೆಲೆಬ್ರಿಟಿಗಳು. ಇಬ್ಬರೂ ಕಿರುತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ನಂದಗೋಕುಲ ಧಾರಾವಾಹಿಯಲ್ಲಿ. ಇಬ್ಬರ ನಡುವೆ ಇದೇ ಧಾರಾವಾಹಿಯಲ್ಲಿ ಪ್ರೀತಿ ಮೊಳೆತಿತ್ತಂತೆ. ನಂತರ, ಇಬ್ಬರೂ ಮೊಗ್ಗಿನ ಮನಸು ಸಿನಿಮಾ ಮೂಲಕ ಹಿರಿತೆರೆಗೆ ಒಟ್ಟಿಗೆ ಕಾಲಿಟ್ಟರು. ಇಬ್ಬರ ನಡುವೆ ಪ್ರೀತಿ ಹಾಗೆಯೇ ಇದ್ದರೂ ಅದನ್ನು ಎಕ್ಸ್​ಪ್ರೆಸ್​ ಮಾಡಿರಲಿಲ್ಲ. 2012ರಲ್ಲಿ ತೆರೆಕಂಡ ಡ್ರಾಮಾ ಸಿನಿಮಾದ ಶೂಟಿಂಗ್​ ವೇಳೆ ಯಶ್​ ಅವರು ರಾಧಿಕಾಗೆ ಪ್ರಪೋಸ್​ ಮಾಡಿದ್ದರಂತೆ. ನಂತರ ಮುಂದಾಗಿದ್ದೆಲ್ಲವೂ ಮತ್ತೆ ಬಿಡಿಸಿ ಹೇಳಬೇಕಿಲ್ಲ…

ಐಂದ್ರಿತಾ-ದಿಗಂತ್​ ಐಂದ್ರಿತಾ ರೇ ಹಾಗೂ ದಿಗಂತ್​ ಇಬ್ಬರೂ ಮದುವೆ ಆಗಿದ್ದಾರೆ. ಇವರದ್ದು ಲವ್​ ಮ್ಯಾರೇಜ್​. ಇವರ ಪ್ರೀತಿ ಹುಟ್ಟಿದ್ದು ತುಂಬಾನೇ ಭಿನ್ನವಾಗಿತ್ತು. ಐಂದ್ರಿತಾ ಸಂದರ್ಶನ ನೋಡಿದ್ದ ದಿಗಂತ್​, ಈ ಹುಡುಗಿ ತುಂಬಾನೇ ಕ್ಯೂಟ್​ ಆಗಿದ್ದಾರೆ ಎಂದುಕೊಂಡಿದ್ದರು. ಅಚ್ಚರಿ ಎಂಬಂತೆ, ಮನಸಾರೆ ಸಿನಿಮಾದಲ್ಲಿ ಐಂದ್ರಿತಾ ಜತೆ ತೆರೆ ಹಂಚಿಕೊಳ್ಳುವ ಅವಕಾಶ ದಿಗಂತ್​ಗೆ ಸಿಕ್ಕಿತ್ತು. ಈ ಸಿನಿಮಾ ಶೂಟಿಂಗ್​ ವೇಳೆ ದಿಗಂತ್​ ಅನಾರೋಗ್ಯಕ್ಕೆ ತುತ್ತಾದಾಗ ಐಂದ್ರಿತಾ ಹಣ್ಣನ್ನು ಕಳುಹಿಸಿದ್ದರಂತೆ. ಇಬ್ಬರ ನಡುವೆ ಪ್ರೀತಿ ಮೊಳೆಯಲು ಇಷ್ಟು ಸಾಕಾಗಿತ್ತು.

ಅಂಬರೀಶ್​-ಸುಮಲತಾ ಅಂಬರೀಶ್​-ಸುಮಲತಾ ಪ್ರೇಮಕತೆ ನಡೆದಿದ್ದು 90ರ ದಶಕದಲ್ಲಿ. ಇಬ್ಬರೂ ಅಂದಿನ ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್​ನಲ್ಲಿದ್ದವರು. 1984ರಲ್ಲಿ ಮೊಟ್ಟ ಮೊದಲ ಬಾರಿಗೆ ಸುಮಲತಾ, ಅಂಬರೀಶ್​ ಅವರನ್ನು ನೋಡಿದ್ದು. ಅದೂ ಕಾರ್ಯಕ್ರಮವೊಂದರಲ್ಲಿ. ನಂತರ ಆಹುತಿ ಸಿನಿಮಾದ ಸೆಟ್​ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಮೊದಲ ಬಾರಿಗೆ ಭೇಟಿ ಮಾಡಿದ್ದು. ಅಲ್ಲಿಂದ ಆರಂಭವಾದ ಪರಿಚಯ ಮದುವೆಗೆ ತಂದು ನಿಲ್ಲಿಸಿತ್ತು. ಸುಮಲತಾ ಅಂಬರೀಶ್​ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಆಗೆಲ್ಲ ಅಂಬರೀಶ್​ ತುಂಬಾನೇ ಲೈವ್ಲಿ ಆಗಿರುತ್ತಿದ್ದರಂತೆ. ಇದು ಸುಮಲತಾಗೆ ತುಂಬಾನೇ ಇಷ್ಟವಾಗಿತ್ತು. ಹೀಗೆ ತಿಂಗಳು ಕಳೆಯುತ್ತಿದ್ದಂತೆ, ಇಬ್ಬರೂ ಒಬ್ಬರಿಗೊಬ್ಬರು ಇಷ್ಟವಾಗುತ್ತಾ ಹೋದರು. ಸೆಟ್​​ನಲ್ಲಿ ಸದಾ ಸೈಲೆಂಟ್​ ಆಗಿರುತ್ತಿದ್ದ ಸುಮಲತಾ, ಅಂಬರೀಶ್​ ಕಂಡಾಕ್ಷಣ ಹೊಸ ಲವಲವಿಕೆಯೊಂದಿಗೆ ಮಾತನಾಡುತ್ತಿದ್ದರಂತೆ. ಇಬ್ಬರೂ ಒಂದು ದಿನ ಮಾತನಾಡುವಾಗ ಇನ್ನೊಂದು ಸ್ವಲ್ಪ ವರ್ಷ ಬಿಟ್ಟು ಮದುವೆ ಆಗೋಣ ಎಂದಿದ್ದರಂತೆ. ನಂತರ 1991ರಲ್ಲಿ ಇಬ್ಬರೂ ಮದುವೆ ಆದರು.

ಪ್ರಜ್ವಲ್​ ದೇವರಾಜ್​-ರಾಗಿಣಿ ಇವರಿಬ್ಬರದ್ದೂ ಇಂದು ನಿನ್ನೆಯ ಪ್ರೀತಿಯಲ್ಲ. ಪ್ರಜ್ವಲ್ ದೇವರಾಜ್ ಅವರು ರಾಗಿಣಿ ಚಂದ್ರನ್ ಮೊದಲ ಬಾರಿಗೆ ನೋಡಿದ್ದು 9ನೇ ಕ್ಲಾಸ್​​ನಲ್ಲಿದ್ದಾಗ. ಆಗ ರಾಗಿಣಿ ಚಂದ್ರನ್ 6ನೇ ಕ್ಲಾಸ್​​ನಲ್ಲಿದ್ದರು. ನಂತರ ಡ್ಯಾನ್ಸ್​ ಕ್ಲಾಸ್​ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪಿಗೆ ಸಿಕ್ಕಿತ್ತು.

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಡಾರ್ಲಿಂಗ್‌ ಕೃಷ್ಣ ಮೊದಲ ಬಾರಿಗೆ ಲವ್‌ ಮಾಕ್‌ಟೇಲ್‌ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡಿದ್ದರು. ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್ ನಡುವೆ ಪ್ರೀತಿ ಇರುವ ವಿಚಾರ ಬಹಿರಂಗವಾಗಿತ್ತು. 2015ರಲ್ಲಿ ತೆರೆಕಂಡ ಚಾರ್ಲಿ ಚಿತ್ರದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದು, ಈ ಸಂದರ್ಭದಲ್ಲಿ ಕೃಷ್ಣ ಲವ್‌ ಪ್ರಪೋಸ್‌ ಮಾಡಿದ್ದರಂತೆ. ಚಾರ್ಲಿ ಚಿತ್ರದ ಶೂಟಿಂಗ್‌ ಮುಗಿಯುತ್ತಾ ಬಂದಿತ್ತು. ಈ ವೇಳೆ ಒಂದು ದಿನ ಮಿಲನಾ ಅವರನ್ನು ಕಾರಿನಲ್ಲಿ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿದ್ದ ಕೃಷ್ಣ ಮದುವೆಗೆ ನೇರವಾಗಿ ಪ್ರಪೋಸ್‌ ಮಾಡಿದ್ದರಂತೆ. ಮಿಲನಾ ಕೂಡ ಇವರ ಪ್ರಪೋಸ್​ ಒಪ್ಪಿಕೊಂಡಿದ್ದರು.

ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

ಮೇಘನಾ ರಾಜ್​- ಚಿರು ಸರ್ಜಾ ಪೈರಸಿ ಮುಕ್ತ ಕನ್ನಡ ಚಲನಚಿತ್ರ ಹೆಸರಿನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಮೇಘನಾ ರಾಜ್​-ಚಿರಂಜೀವಿ ಸರ್ಜಾ ಭೇಟಿ ಆಗಿದ್ದರು. ನಂತರ ಮೇಘನಾಗೆ ಚಿರು ಮೆಸೇಜ್​ ಮಾಡಿ ಮಾತು ಆರಂಭಿಸಿದ್ದರು. ದ್ವಾರಕೀಶ್ ನಿರ್ಮಾಣದ ಆಟಗಾರ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಇಬ್ಬರು ಒಟ್ಟಿಗೆ ನಟಿಸಿದ್ದರು. ಗೆಳೆತನದ ಮೂಲಕ ಆರಂಭವಾದ ಇವರ ಸಂಬಂಧ ನಂತರ ಪ್ರೇಮದ ಹಾದಿ ತುಳಿದಿತ್ತು.

ಉಪೇಂದ್ರ- ಪ್ರಿಯಾಂಕಾ ಉಪೇಂದ್ರ ಹಾಗೂ ಪ್ರಿಯಾಂಕ ಮೊಟ್ಟ ಮೊದಲ ಬಾರಿಗೆ ಭೇಟಿ ಆಗಿದ್ದು ತೆಲುಗು ಸಿನಿಮಾದಲ್ಲಿ. ನಂತರ ಉಪೇಂದ್ರ ನಟನೆಯ H2O ಸಿನಿಮಾದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಒಟ್ಟಾಗಿ ನಟಿಸಿದ್ದರು. ಈ ವೇಳೆ ಇಬ್ಬರ ನಡುವೆ ಗೆಳೆತನ ಬೆಳೆದಿತ್ತು. ಈ ಗೆಳೆತನ ನಂತರ ಪ್ರೇಮವಾಗಿ ಬದಲಾಗಿತ್ತು. ಉಪೇಂದ್ರ ಅವರು ಹಾಲಿವುಡ್ ಸಿನಿಮಾ ಚಿತ್ರೀಕರಣಕ್ಕಾಗಿ ಅಮೆರಿಕಾಗೆ ಹೋದಾಗ ಪ್ರಿಯಾಂಕ ಮತ್ತು ಉಪೇಂದ್ರ ಪರಸ್ಪರ ಪ್ರೀತಿಯಲ್ಲಿದ್ದರು. 2003 ರಲ್ಲಿ ಬೆಂಗಾಲಿ ಸಂಪ್ರದಾಯದ ಪ್ರಕಾರ ಉಪೇಂದ್ರ ಮತ್ತು ಪ್ರಿಯಾಂಕ ಮದುವೆ ಆದರು.

Published On - 3:15 pm, Sun, 14 February 21