Jio free calls: ರಿಲಯನ್ಸ್ ಜಿಯೋದಿಂದ 300 ನಿಮಿಷಗಳ ಹೊರಹೋಗುವ ಕರೆಗಳು ಉಚಿತ
ರಿಲಯನ್ಸ್ ಜಿಯೋದಿಂದ 300 ನಿಮಿಷಗಳ ಹೊರಹೋಗುವ ಉಚಿತ ಕರೆಗಳ ಸೌಲಭ್ಯವನ್ನು ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ.
ರಿಲಯನ್ಸ್ ಜಿಯೋದಿಂದ ಶುಕ್ರವಾರ ಹೇಳಿಕೆಯನ್ನು ನೀಡಿದ್ದು, ಪ್ರತಿ ತಿಂಗಳು 300 ನಿಮಿಷಗಳ ಉಚಿತ ಹೊರಹೋಗುವ ಕರೆಗಳನ್ನು ಒದಗಿಸುವ ನಿಟ್ಟಿನಲ್ಲಿ ರಿಲಯನ್ಸ್ ಫೌಂಡೇಷನ್ ಜತೆಗೆ ಕೆಲಸ ಮಾಡುತ್ತಿರುವುದಾಗಿ, ಅದು ದಿನಕ್ಕೆ 10 ನಿಮಿಷದಂತೆ ಆಗುತ್ತದೆ. ಕೊರೊನಾ ಬಿಕ್ಕಟ್ಟು ಇರುವ ಅವಧಿಯುದ್ದಕ್ಕೂ ಹೀಗೆ ಒದಗಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಯಾರಿಗೆ ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಲು ಆಗುವುದಿಲ್ಲವೋ ಅಂಥ ಜಿಯೋ ಫೋನ್ ಬಳಕೆದಾರರಿಗೆ ಈ ಯೋಜನೆಯು ದೊರೆಯಲಿದೆ ಎಂದು ಕಂಪೆನಿಯ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.
ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಉಚಿತ ಟಾಕ್ ಟೈಮ್ ಘೋಷಣೆ ಮಾಡಿರುವ ಮೊದಲ ಕಂಪೆನಿ ರಿಲಯನ್ಸ್ ಜಿಯೋ. ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂಬ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಲಾಕ್ಡೌನ್ ಅಥವಾ ಲಾಕ್ಡೌನ್ ರೀತಿಯ ನಿರ್ಬಂಧವನ್ನು ಹೇರಲಾಗಿದೆ. “ರಿಲಯನ್ಸ್ ಫೌಂಡೇಷನ್ ಜತೆಗೆ ಜಿಯೋ ಕೆಲಸ ಮಾಡುತ್ತಿದ್ದು, ಯಾವ ಜಿಯೋ ಗ್ರಾಹಕರಿಗೆ ರೀಚಾರ್ಜ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲವೋ ಅಂಥವರಿಗೆ ಕೊರೊನಾ ಬಿಕ್ಕಟ್ಟಿನ ಅವಧಿಯುದ್ದಕ್ಕೂ ತಿಂಗಳಿಗೆ 300 ನಿಮಿಷಗಳ ಉಚಿತ ಹೊರಹೋಗುವ ಕರೆ (ದಿನಕ್ಕೆ 10 ನಿಮಿಷದಂತೆ)ಯನ್ನು ನೀಡಲಾಗುವುದು,” ಎಂದು ಜಿಯೋ ಹೇಳಿಕೆಯಲ್ಲಿ ತಿಳಿಸಿದೆ.
ಟಾಕ್ಟೈಮ್ ಜತೆಗೆ ಮತ್ತೊಂದು ಯೋಜನೆ ಘೋಷಣೆ ಮಾಡಲಾಗಿದೆ. ಜಿಯೋಫೋನ್ ಬಳಕೆದಾರರು ಎಷ್ಟು ಮೊತ್ತದ ರೀಚಾರ್ಜ್ ಮಾಡುತ್ತಾರೋ ಅದೇ ಮೊತ್ತವು ಉಚಿತವಾಗಿ ದೊರೆಯುತ್ತದೆ. “ಕೊರೊನಾ ಸಂಕಷ್ಟ ಕಾಲದಲ್ಲಿ ಸಂವಹನಕ್ಕೆ ಯಾವುದೇ ಕಾರಣಕ್ಕೂ ತಡೆ ಆಗಬಾರದು. ಅದರಲ್ಲೂ ನಮ್ಮ ಸಮಾಜದ ದುರ್ಬಲ ವರ್ಗಕ್ಕೆ ತೊಂದರೆ ಆಗಬಾರದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಈಗಿನ ಆಫರ್ಗಳು ವಾರ್ಷಿಕ ಅಥವಾ ಜಿಯೋಫೋನ್ ಸಾಧನದ ಜತೆಗಿನ ಪ್ಲಾನ್ಗಳ ಜತೆಗೆ ಬರುವುದಿಲ್ಲ.
ಇದನ್ನೂ ಓದಿ: ಕೊರೊನಾ ಸಂಕಷ್ಟದಿಂದ WFH ಅನಿವಾರ್ಯ! ಇದಕ್ಕಾಗಿ Jio ಪ್ಲಾನ್ ಏನಿದೆ ಗೊತ್ತಾ?
(Reliance Jio announced 300 minutes free outgoing calls per month for users till corona ends)