ಕೊರೊನಾ ಸಂಕಷ್ಟದಿಂದ WFH ಅನಿವಾರ್ಯ! ಇದಕ್ಕಾಗಿ Jio ಪ್ಲಾನ್ ಏನಿದೆ ಗೊತ್ತಾ?

ತನ್ನ ಗ್ರಾಹಕರಿಗೆ ಈಗಾಗಲೇ ಭರ್ಜರಿ ಆಫರ್​ಗಳನ್ನು ನೀಡಿರುವ ಜಿಯೋ ಇದೀಗ ಮತ್ತೊಂದು ಆಫರ್ ನೀಡಿದೆ. ದೇಶಾದ್ಯಂತ ಕೊರೊನಾ ಸಂಕಷ್ಟದ ಸಮಯದಲ್ಲಿ ವರ್ಕ್​ ಫ್ರಂ ಹೋಮ್​ ಅನಿವಾರ್ಯವಾಗಿದೆ. ಹಾಗಾಗಿ WFHನಲ್ಲಿರುವರಿಗಾಗಿಯೇ ವಾರ್ಷಿಕ ಯೋಜನೆಯನ್ನು ಜಿಯೋ ಲಾಂಚ್ ಮಾಡಿದೆ. ವರ್ಕ್​ ಫ್ರಂ ಹೋಮ್​ ಮಾಡುತ್ತಿರುವವರಿಗೆ ಅನುಕೂಲವಾಗಲು ವಾರ್ಷಿಕವಾಗಿ 2,399 ರೂ. ಯೋಜನೆಯನ್ನು ಬಿಡುಗಡೆ ಮಾಡಿದೆ. ಅದರಂತೆ ತಿಂಗಳಿಗೆ ಇದು 200 ರೂಪಾಯಿ ಆಗಲಿದೆ. ಈ ಯೋಜನೆಯಂತೆ ತನ್ನ ಗ್ರಾಹಕರಿಗೆ ಉಚಿತ ಅನಿಯಮಿತ ಕರೆಗಳು, ಎಸ್​ಎಂಎಸ್​ ಹಾಗೂ ದಿನಕ್ಕೆ 2 ಜಿಬಿ […]

ಕೊರೊನಾ ಸಂಕಷ್ಟದಿಂದ WFH ಅನಿವಾರ್ಯ! ಇದಕ್ಕಾಗಿ Jio ಪ್ಲಾನ್ ಏನಿದೆ ಗೊತ್ತಾ?
ಜಿಯೋ 999 ರೂ. ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್​ಗೆ ಅನಿಯಮಿತ ಕರೆಗಳು, ದಿನಕ್ಕೆ 3GB ಡೇಟಾ ಮತ್ತು 100 SMS ಸೌಲಭ್ಯವನ್ನು ಪಡೆಯುತ್ತೀರಿ. ಇದರ ವಾಲಿಡಿಟಿ 84 ದಿನಗಳು. ಇನ್ನು ದೈನಂದಿನ ಡೇಟಾ ಮುಗಿದ ಬಳಿಕ, ನೀವು 64Kbps ವೇಗದಲ್ಲಿ ಉಚಿತ ಇಂಟರ್ನೆಟ್ ಅನ್ನು ಬಳಸಬಹುದು. ಈ ಯೋಜನೆಯೊಂದಿಗೆ, ನೀವು ಜಿಯೋ ಅಪ್ಲಿಕೇಶನ್‌ಗಳಾದ ಜಿಯೋಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್‌ಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
Follow us
ಸಾಧು ಶ್ರೀನಾಥ್​
|

Updated on:May 09, 2020 | 12:14 PM

ತನ್ನ ಗ್ರಾಹಕರಿಗೆ ಈಗಾಗಲೇ ಭರ್ಜರಿ ಆಫರ್​ಗಳನ್ನು ನೀಡಿರುವ ಜಿಯೋ ಇದೀಗ ಮತ್ತೊಂದು ಆಫರ್ ನೀಡಿದೆ. ದೇಶಾದ್ಯಂತ ಕೊರೊನಾ ಸಂಕಷ್ಟದ ಸಮಯದಲ್ಲಿ ವರ್ಕ್​ ಫ್ರಂ ಹೋಮ್​ ಅನಿವಾರ್ಯವಾಗಿದೆ. ಹಾಗಾಗಿ WFHನಲ್ಲಿರುವರಿಗಾಗಿಯೇ ವಾರ್ಷಿಕ ಯೋಜನೆಯನ್ನು ಜಿಯೋ ಲಾಂಚ್ ಮಾಡಿದೆ.

ವರ್ಕ್​ ಫ್ರಂ ಹೋಮ್​ ಮಾಡುತ್ತಿರುವವರಿಗೆ ಅನುಕೂಲವಾಗಲು ವಾರ್ಷಿಕವಾಗಿ 2,399 ರೂ. ಯೋಜನೆಯನ್ನು ಬಿಡುಗಡೆ ಮಾಡಿದೆ. ಅದರಂತೆ ತಿಂಗಳಿಗೆ ಇದು 200 ರೂಪಾಯಿ ಆಗಲಿದೆ. ಈ ಯೋಜನೆಯಂತೆ ತನ್ನ ಗ್ರಾಹಕರಿಗೆ ಉಚಿತ ಅನಿಯಮಿತ ಕರೆಗಳು, ಎಸ್​ಎಂಎಸ್​ ಹಾಗೂ ದಿನಕ್ಕೆ 2 ಜಿಬಿ ಹೈಸ್ಪೀಡ್​ ಇಂಟರ್​ನೆಟ್ ನೀಡುತ್ತಿದೆ.

2,399 ರೂಪಾಯಿಯ ಯೋಜನೆ 365 ದಿನಗಳವರೆಗೆ ಮಾನ್ಯತೆ ಇರುತ್ತದೆ. ಇದು 2,121 ರೂ. ಮೌಲ್ಯದ ಕಂಪನಿಯ ಇತರ ವಾರ್ಷಿಕ ಪ್ಯಾಕ್‌ ಮಾದರಿಯಲ್ಲಿದೆ. 2,121 ರೂ ಯೋಜನೆಯಲ್ಲಿ, ದಿನಕ್ಕೆ 1.5 ಜಿಬಿ ಹೈಸ್ಪೀಡ್ ಡೇಟಾ, ಅನಿಯಮಿತ ಜಿಯೋ ಟು ಜಿಯೋ ವಾಯ್ಸ್ ಕಾಲಿಂಗ್, 12,000 ನಿಮಿಷಗಳ ನಾನ್ ಜಿಯೋ ವಾಯ್ಸ್ ಕಾಲಿಂಗ್ ಹಾಗೂ ದಿನಕ್ಕೆ 100 ಎಸ್​ಎಂಎಸ್​ ನೀಡುತ್ತದೆ.

2,399 ರೂಪಾಯಿ ಮತ್ತು 2,121 ರೂ.ನ ಪ್ರಿಪೇಯ್ಡ್ ಯೋಜನೆಗಳು ಕಂಪನಿಯ ಆನ್‌ಲೈನ್ ಅಪ್ಲಿಕೇಶನ್‌ಗಳಾದ ಜಿಯೋ ಟಿವಿ, ಜಿಯೋಸಾವನ್, ಜಿಯೋ ಮೂವೀಸ್ ಮತ್ತು ಹೆಚ್ಚಿನವುಗಳಿಗೆ ಪೂರಕ ಪ್ರವೇಶದೊಂದಿಗೆ ಬರುತ್ತವೆ.

Published On - 11:40 am, Sat, 9 May 20